ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಎನ್‌ಡಿಎ ಹಿನ್ನಡೆ: ಆಡ್ವಾಣಿ ರಾಜಕೀಯ ನಿವೃತ್ತಿ ಇಂಗಿತ
ಮತಸಮರ
PTI
ಎನ್‌ಡಿಎ ವಿರುದ್ಧ ಜನತೆ ನೀಡಿದ ತೀರ್ಪನ್ನು ಸ್ವೀಕರಿಸಿರುವ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ತೀರಾ ನಿರಾಶರಾಗಿದ್ದು, ಲೋಕಸಭೆಯ ಪ್ರತಿಪಕ್ಷ ನಾಯಕನಾಗಿ ಮುಂದುವರಿಯಲು ತಮಗಿಷ್ಟವಿಲ್ಲ ಎಂಬ ಮನೋಭಾವನೆಯನ್ನು ಹೊರಗೆಡಹಿದ್ದಾರೆ.

ಗೆಲುವಿನ ಬಗ್ಗೆ ತೀವ್ರ ಆತ್ಮವಿಶ್ವಾಸದಲ್ಲಿದ್ದ 81ರ ಹರೆಯದ ಆಡ್ವಾಣಿ ತೀರಾ ಆಘಾತಗೊಂಡಿದ್ದು, ತಮ್ಮ ಪ್ರಧಾನಿ ಪದವಿಯ ಆಕಾಂಕ್ಷೆಗಳೆಲ್ಲಾ ನುಚ್ಚು ನೂರಾಗಿದ್ದರಿಂದ ನೊಂದುಕೊಂಡಿದ್ದಾರೆ. ಸುಮಾರು ಐದು ದಶಕಗಳಿಂದ ರಾಜಕೀಯದಲ್ಲಿರುವ ಅವರಿಗೆ 15ನೇ ಲೋಕಸಭೆಯಲ್ಲಾದರೂ ಪ್ರಧಾನಿಯಾಗುವ ಅವಕಾಶ ದೊರೆಯಬಹುದೆಂಬ ಆಶಾವಾದವಿತ್ತು. ಇದು ಅವರ ಕೊನೆಯ ಸ್ಪರ್ಧೆ ಎಂದೂ ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.

ಆದರೆ ಪಕ್ಷದ ಸಂಸದೀಯ ಮಂಡಳಿಯು ಆಡ್ವಾಣಿ ಇಂಗಿತವನ್ನು ಸಾರಾಸಗಟಾಗಿ ತಳ್ಳಿಹಾಕಿತು ಎಂದು ಬಿಜೆಪಿ ಸಂಸದೀಯ ಮಂಡಳಿಯ 'ಆತ್ಮಾವಲೋಕನ' ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಹೇಳಿದರು.

ಈ ನಿರ್ಧಾರದ ಬಗ್ಗೆ ಆಡ್ವಾಣಿ ಮನವೊಲಿಸುವಂತೆ ಸಭೆಯು ಪಕ್ಷಾಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಅಧಿಕಾರ ನೀಡಿತು. ಎನ್‌ಡಿಎ ನಾಯಕರು ಸೇರಿ ಹೊಸ ಪ್ರತಿಪಕ್ಷ ನಾಯಕನನ್ನು ಆರಿಸಬೇಕು ಎಂದು ಆಡ್ವಾಣಿ ಬಯಸಿದ್ದಾಗಿ ಜೇಟ್ಲಿ ತಿಳಿಸಿದರು. ಆಡ್ವಾಣಿಯನ್ನು ಎನ್‌ಡಿಎ ಅಧ್ಯಕ್ಷರಾಗಿ ನೇಮಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.