ಈ ಸರ್ತಿ ಡಿಎಂಕೆಯನ್ನು ಎಐಎಡಿಎಂಕೆ ಪುಡಿಗಟ್ಟಲಿದೆ ಎಂಬ ತಮಿಳ್ನಾಡಿನ ಲೆಕ್ಕಾಚಾರ ಹುಸಿಯಾಗಿದ್ದು, ಡಿಎಂಕೆ ಮೈತ್ರಿಕೂಟ 27 ಸ್ಥಾನಗಳನ್ನು ಮಡಿಲಿಗೆ ಹಾಕಿಕೊಳ್ಳುವ ಮೂಲಕ ಮುಖ್ಯಮಂತ್ರಿ ಕರುಣಾನಿಧಿ ಅವರ ಮುಖದಲ್ಲಿ ನಗು ಬೀರಿದೆ.
ಶ್ರೀಲಂಕಾ ತಮಿಳರನ್ನು ಚುನಾವಣಾ ವಿಷಯವಾಗಿರಿಸಿಕೊಂಡು ಅತ್ತಿತ್ತ ಈ ಮೈತ್ರಿ ಕೂಟಗಳು ಜಗ್ಗಾಡಿದರೂ, ಹೆಚ್ಚಿನ ಮತದಾರರು ಆಡಳಿತ ಪಕ್ಷದತ್ತ ವಾಲಿದ್ದಾರೆ.
PTI
ಕಳೆದ ಬಾರಿ ಡಿಎಂಕೆ ಹೂಡಿದ್ದ ತಂತ್ರವನ್ನೇ ಈ ಬಾರಿ ಜಯಲಲಿತಾ ಹೂಡಿದರೂ, ಅದ್ಯಾಕೋ ಫಲಿತಾಂಶ ತಿರುಗಿಬಿದ್ದಿದೆ. ಎಐಎಡಿಎಂಕೆಯು ಪಿಎಂಕೆ ಹಾಗೂ ಎರಡು ಎಡಪಕ್ಷಗಳನ್ನು ತನ್ನ ಕೂಟಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಆ ಲೆಕ್ಕಾಚಾರ ಈ ಸರ್ತಿ ತಿರುಗಿಬಿದ್ದಿದ್ದು, ಜಯಾ ಕೂಟ ಕೇವಲ 13 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ.
ಡಿಎಂಕೆ ನೇತೃತ್ವದ ಡಿಪಿಎ 24 ಸ್ಥಾನಗಳನ್ನು ಗೆದ್ದಿದೆ. ಇದರಲ್ಲಿ ಡಿಎಂಕೆ 15, ಕಾಂಗ್ರೆಸ್ 7, ವಿಸಿಕೆ 1, ಐಯುಎಂಎಲ್ 1 ಸ್ಥಾನ ಗೆದ್ದಿದೆ.