ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಸಿಂಗ್ ಈಸ್ ಕಿಂಗ್: ಮರಳಿ ಅಧಿಕಾರಕ್ಕೇರಲಿದೆ ಯುಪಿಎ
ಮತಸಮರ
ಶನಿವಾರ ಫಲಿತಾಂಶ ಹೊರಬಿದ್ದ ಬಳಿಕ ನಡೆದ ರಾಜಕೀಯ ವಿದ್ಯಮಾನಗಳ ಸಾರಾಂಶ:

* ನಿರೀಕ್ಷೆಗಿಂತಲೂ ಹೆಚ್ಚು ಮುನ್ನಡೆ ಸಾಧಿಸಿದ ಯುಪಿಎ, ಮನಮೋಹನ್ ಸಿಂಗ್ ಅವರೇ ಪ್ರಧಾನಿ ಎಂದು ಸ್ಪಷ್ಟಪಡಿಸಿದ ಕಾಂಗ್ರೆಸ್

* 543ರಲ್ಲಿ ಫಲಿತಾಂಶ ಘೋಷಿತವಾದ 535 ಕ್ಷೇತ್ರಗಳಲ್ಲಿ ಯುಪಿಎ 257, ಎನ್‌ಡಿಎ 162, ಎಡರಂಗ 24, ಸಮಾಜವಾದಿ ಪಕ್ಷ 26. ಬಿಎಸ್ಪಿ 21, ಇತರರು 54 ಸ್ಥಾನ ಗೆದ್ದುಕೊಂಡಿದ್ದಾರೆ. ಇದರಲ್ಲಿ ಕಾಂಗ್ರೆಸ್ 202, ಬಿಜೆಪಿ 121 ಸ್ಥಾನಗಳು ಸೇರಿವೆ.

* ಬಹುಮತಕ್ಕೆ 272 ಮತಗಳ ಅಗತ್ಯವಿರುವುದರಿಂದ ಯುಪಿಎಯು ಅಗತ್ಯವಾಗಿ ಬೇಕಾಗಿರುವ ಸಂಖ್ಯೆ ಒಟ್ಟುಗೂಡಿಸಲು ಸ್ವತಂತ್ರರು ಮತ್ತು ಇತರರ ಮನವೊಲಿಕೆ ಆರಂಭಿಸಿದೆ. ಸರಕಾರ ರಚನೆಗೆ ಹೊಸ ವ್ಯೂಹ ರಚನೆ ಪ್ರಕ್ರಿಯೆ ಆರಂಭಿಸಿದ ಯುಪಿಎ.

* 5 ವರ್ಷದ ಅವಧಿಯ ಬಳಿಕ ಪ್ರಧಾನಿಯಾಗಿ ಪುನರಾಯ್ಕೆಗೊಂಡ ಮನಮೋಹನ್ ಅವರದು ಜವಾಹರಲಾಲ್ ನೆಹರೂ ಬಳಿಕದ ಸಾಧನೆ.

* ಸೋಲೊಪ್ಪಿಕೊಂಡ ಬಿಜೆಪಿ ಮತ್ತು ಎಡ ಪಕ್ಷಗಳು. ಆಡ್ವಾಣಿ ರಾಜಕೀಯ ನಿವೃತ್ತಿ ಯೋಚನೆ.

* ಕೇರಳದಲ್ಲಿ ಎಡರಂಗದ ಭದ್ರಕೋಟೆಗೆ ಯುಡಿಎಫ್ ಕೊಡಲಿಯೇಟು. 20ರಲ್ಲಿ 16 ಸ್ಥಾನಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಬಹುತೇಕ 2004ರ ಫಲಿತಾಂಶದ ತದ್ವಿರುದ್ಧ ಪರಿಸ್ಥಿತಿ ಸೃಷ್ಟಿಸಿದೆ. ಸಿಪಿಎಂ ಕಾಸರಗೋಡು, ಅಳತ್ತೂರು, ಅಟ್ಟಿಂಗಾಳ್ ಮತ್ತು ಪಾಲಕ್ಕಾಡ್ ಎಂಬ ನಾಲ್ಕು ಸಾಂಪ್ರದಾಯಿಕ ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಂಡಿದೆ. ಯುಡಿಎಫ್‌ನಲ್ಲಿ ಕಾಂಗ್ರೆಸ್ 17, ಐಯುಎಂಲ್ 2 ಹಾಗೂ ಕೇರಳ ಕಾಂಗ್ರೆಸ್ 1 ಸ್ಥಾನಗಳಿವೆ.

* ಪಶ್ಚಿಮ ಬಂಗಾಳದಲ್ಲಿಯೂ ಎಡ ಕೋಟೆಯನ್ನು ಛಿದ್ರಗೊಳಿಸಿದ ಕಾಂಗ್ರೆಸ್-ತೃಣಮೂಲ ಮಿತ್ರಕೂಟ. 25 ತೃಣಮೂಲ ಮಿತ್ರಕೂಟ ಹಾಗೂ 15 ಎಡರಂಗ ಗೆದ್ದುಕೊಂಡಿವೆ.

* ಶಿವಗಂಗಾ ಕ್ಷೇತ್ರದಿಂದ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರಿಗೆ ಅಚ್ಚರಿಯ ಸೋಲು ಘೋಷಣೆಯಾದ ಬಳಿಕ ಮರು ಮತ ಎಣಿಕೆ ನಡೆದು ವಿಜಯಿ ಎಂದು ಘೋಷಣೆ

* ಕೇಂದ್ರ ಸಚಿವೆ, ಮಂಗಳೂರು ತಾಲಿಬಾನೀಕರಣ ಆಗುತ್ತಿದೆ ಎಂದು ಆರೋಪಿಸಿ ಸುದ್ದಿ ಮಾಡಿದ್ದ ರೇಣುಕಾ ಚೌಧುರಿಗೆ ಖಮ್ಮಂ ಕ್ಷೇತ್ರದಿಂದ ಸೋಲು

* ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಧಾವಂತಕ್ಕೆ ನಲುಗಿದ ಟಿಡಿಪಿ, ಟಿಆರ್ಎಸ್, ಬಿಜೆಪಿ.

* ರಾಂಪುರ ಕ್ಷೇತ್ರದಲ್ಲಿ ಎಸ್ಪಿ ಮುಖಂಡ ಆಜಂ ಖಾನ್ ವಿರೋಧದ ಹೊರತಾಗಿಯೂ ಜಯ ಸಾಧಿಸಿದ ಎಸ್ಪಿ ಅಭ್ಯರ್ಥಿ ಜಯಪ್ರದಾ

* ದೆಹಲಿಯ 7 ಕ್ಷೇತ್ರಗಳನ್ನು ಕ್ಲೀನ್ ಸ್ವೀಪ್ ಮಾಡಿದ ಕಾಂಗ್ರೆಸ್. ಕಳೆದ ಬಾರಿ ಅದು ಆರನ್ನಷ್ಟೇ ಗೆದ್ದುಕೊಂಡಿತ್ತು.

* ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಸಿದ್ಧ ಎಂದ ಎಡರಂಗ

* ಕೇಂದ್ರ ಸಚಿವ, ಮಾಜಿ ಬಿಜೆಪಿ ಧುರೀಣ, ಕಾಂಗ್ರೆಸಿನ ಶಂಕರ ಸಿನ್ಹ ವಘೇಲಾಗೆ ಮುಸ್ಲಿಂ ಮತದಾರರೇ ಹೆಚ್ಚಿರುವ ಗುಜರಾತಿನ ಗೋಧ್ರಾವೂ ಒಳಗೊಂಡಿರುವ ಪಂಚಮಹಲ್ ಸ್ಥಾನದಲ್ಲಿ ಬಿಜೆಪಿಯ ಪ್ರಭಾತ್‌ಸಿನ್ಹ ಚೌಹಾಣ್ ಎದುರು 2090 ಮತಗಳಿಂದ ಸೋಲು.

* ಪಾಟ್ನಾ ಸಾಹೀಬ ಕ್ಷೇತ್ರದಲ್ಲಿ ಶೇಖರ್ ಸುಮನ್ ಎದುರು ವಿಜಯ ಸಾಧಿಸಿದ ಬಿಜೆಪಿಯ ಶತ್ರುಘ್ನ ಸಿನ್ಹಾ.

* ವರುಣ್ ಗಾಂಧಿಗೆ ಫಿಲಿಬಿಟ್‌ನಲ್ಲಿ ವಿಜಯ

* ಕಾಂಗ್ರೆಸ್ ಅಭ್ಯರ್ಥಿ ಮಹಮದ್ ಅಜರುದ್ದೀನ್‌ಗೆ ಉತ್ತರ ಪ್ರದೇಶದ ಮೊರಾದಾಬಾದ್ ಕ್ಷೇತ್ರದಲ್ಲಿ ಜಯ.

* ಹಾಜಿಪುರದಲ್ಲಿ ಲೋಕ ಜನ ಶಕ್ತಿ ಪಕ್ಷದ ಅಧ್ಯಕ್ಷ ರಾಮ ವಿಲಾಸ್ ಪಾಸ್ವಾನ್‌ಗೆ ಜೆಡಿಯು ರಾಮಸುಂದರ ದಾಸ್ ವಿರುದ್ಧ ಸೋಲು

* ಕಾಶ್ಮೀರದ ಎಲ್ಲ ಮೂರು ಸ್ಥಾನಗಳು (ಶ್ರೀನಗರ, ಬಾರಾಮುಲ್ಲ, ಅನಂತನಾಗ್) ನ್ಯಾಷನಲ್ ಕಾನ್ಫರೆನ್ಸ್ ಬಗಲಿಗೆ, ಆದರೆ ಲಡಾಖ್ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಬಂಡಾಯ ಸ್ವತಂತ್ರ ಅಭ್ಯರ್ಥಿ ಗುಲಾಂ ಹಸನ್ ಖಾನ್ ವಿಜಯಿಯಾಗಿದ್ದಾರೆ.

* ಆಂಧ್ರಪ್ರದೇಶದ 42 ಸ್ಥಾನಗಳಲ್ಲಿ ಕಾಂಗ್ರೆಸ್ 33, ಟಿಡಿಪಿ 6, ಟಿಆರ್ಎಸ್ 2 ಹಾಗೂ ಎಐಎಂಐಎಂ 1 ಸ್ಥಾನಗಳನ್ನು ಗೆದ್ದುಕೊಂಡು ಕಾಂಗ್ರೆಸ್ ಭರ್ಜರಿ ವಿಜಯ ಸಾಧಿಸಿದೆ.

* ಗುಜರಾತ್‌ನ 26 ಸ್ಥಾನಗಳಲ್ಲಿ ಬಿಜೆಪಿ 16 ಹಾಗೂ ಕಾಂಗ್ರೆಸ್ 10 ಸ್ಥಾನಗಳನ್ನು ಗೆದ್ದುಕೊಂಡಿದೆ.

* ಉತ್ತರ ಪ್ರದೇಶದ 80 ಕ್ಷೇತ್ರಗಳಲ್ಲಿ ಸಮಾಜವಾದಿ ಪ್ಷ 23, ಬಿಎಸ್ಪಿ 19, ಕಾಂಗ್ರೆಸ್ 22, ಆರ್ಎಲ್‌ಡಿ 5, ಬಿಜೆಪಿ 10, ಇತರರು 1

* ಹರ್ಯಾಣ ಕಾಂಗ್ರೆಸ್ 9, ಬಿಜೆಪಿ 0

* ಒರಿಸ್ಸಾದಲ್ಲಿ ಕಾಂಗ್ರೆಸ್ 5 ಬಿಜೆಪಿ 1 ಬಿಜೆಡಿ 15 ಸ್ಥಾನಗಳನ್ನು ಗೆದ್ದುಕೊಂಡಿವೆ.

* ತ್ರಿಪುರದಲ್ಲಿ ಇರುವ ಎರಡೂ ಸ್ಥಾನಗಳು ಎಡರಂಗದ ಪಾಲಾಗಿದೆ.

* ಮಧ್ಯಪ್ರದೇಶದ 29 ಕ್ಷೇತ್ರಗಳಲ್ಲಿ ಬಿಜೆಪಿ 16, ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದುಕೊಂಡಿವೆ.

* ಹಿಮಾಚಲ ಪ್ರದೇಶದ 4 ಸ್ಥಾನಗಳಲ್ಲಿ ಆಡಳಿತಾರೂಢ ಬಿಜೆಪಿ 3 ಸ್ಥಾನಗಳನ್ನು ಗಳಿಸಿಕೊಂಡರೆ, ಕಾಂಗ್ರೆಸ್ ಒಂದು ಸ್ಥಾನ ಉಳಿಸಿಕೊಂಡಿದೆ.

* ಒರಿಸ್ಸಾ ವಿಧಾನಸಭೆಯ 147 ಕ್ಷೇತ್ರಗಳಲ್ಲಿ ಬಿಜೆಡಿ ಕೂಟ 109 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೇರಿದ್ದರೆ, ಬಿಜೆಪಿ 6, ಕಾಂಗ್ರೆಸ್ 27 ಹಾಗೂ ಇತರರು 5 ಸ್ಥಾನಗಳನ್ನು ಬಾಚಿಕೊಂಡಿದ್ದಾರೆ.

* ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ಎಲ್.ಕೆ.ಆಡ್ವಾಣಿ, ಎಂ.ಕೆ.ಅಳಗಿರಿ ಭರ್ಜರಿ ಅಂತರದ ವಿಜಯ ದಾಖಲಿಸಿದರೆ, ರಾಮ ವಿಲಾಸ್ ಪಾಸ್ವಾನ್, ವೈಕೋ ಮತ್ತಿತರರು ಹೀನಾಯ ಸೋಲನ್ನಪ್ಪಿದ್ದಾರೆ.

* ಸೋನಿಯಾ ರಾಯ್ ಬರೇಲಿಯಿಂದ 3.72 ಲಕ್ಷ ಅಂತರದಿಂದ, ಮಮತಾ ದಕ್ಷಿಣ ಕೋಲ್ಕತಾ ಕ್ಷೇತ್ರದಿಂದ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ, ಆಡ್ವಾಣಿ ಗಾಂಧಿನಗರದಿಂದ 1.2 ಲಕ್ಷ ಅಂತರ ಹಾಗೂ ಡಿಎಂಕೆ ಅಧ್ಯಕ್ಷ ಕರುಣಾನಿಧಿ ಪುತ್ರ ಅಳಗಿರಿ 1.40 ಲಕ್ಷ ಮತಗಳ ಅಂತರದಿಂದ ಮದುರೈ ಕ್ಷೇತ್ರದಲ್ಲಿ ವಿಜಯ ಸಾಧಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೂ ಹಾಸನದಲ್ಲಿ 2.91 ಲಕ್ಷ ಮತಗಳಿಂದ ವಿಜಯಿಯಾಗಿದ್ದಾರೆ.

* ಹಾಜಿಪುರದಿಂದ ದಾಖಲೆಯ ಅಂತರದಿಂದ ವಿಜಯ ಸಾಧಿಸಿದ್ದ ಪಾಸ್ವಾನ್ 37,954 ಮತಗಳಿಂದ ಸೋಲು ಅನುಭವಿಸಿದ್ದು ವಿಶೇಷ.

* ತಮಿಳು ಈಳಂ ಪರ ನಾಯಕ ಪಿಎಂಕೆಯ ವೈಕೋ ಚೆನ್ನೈ ವಿರುಧ್‌ನಗರ ಕ್ಷೇತ್ರದಲ್ಲಿ ಸೋಲನುಭವಿಸಿದರೆ, ಸ್ವತಂತ್ರವಾಗಿ ಸ್ಪರ್ಧಿಸಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್, ಮಯಿಲಾದುತುರೈಯಲ್ಲಿ ಕಾಂಗ್ರೆಸಿನ ಮಣಿಶಂಕರ್ ಅಯ್ಯರ್, ಖಮ್ಮಾಂನಲ್ಲಿ ರೇಣುಕಾ ಚೌಧುರಿ ಸೋಲನುಭವಿಸಿದ್ದಾರೆ.

* ಲಾಲು ಪ್ರಸಾದ್ ಯಾದವ್ ಅವರು ಸರಣ್ ಕ್ಷೇತ್ರದಲ್ಲಿ ಗೆದ್ದರೂ, ಪಾಟಲಿಪುತ್ರದಲ್ಲಿ ಸೋಲನುಭವಿಸಿದ್ದಾರೆ.

* ಬಿಹಾರದಲ್ಲಿ ಬಿಜೆಪಿ-ಜೆಡಿಯು ಮಿತ್ರಕೂಟ ಭರ್ಜರಿ ವಿಜಯ ಸಾಧಿಸಿದ್ದು, ಲಾಲೂ-ಪಾಸ್ವಾನ್ ಆಧಿಪತ್ಯ ಬಹುತೇಕ ಅಂತ್ಯಗೊಂಡಿದೆ. 40 ಕ್ಷೇತ್ರಗಳಲ್ಲಿ 31 ಜೆಡಿಯು, 4 ಆರ್‌ಜೆಡಿ, 3 ಎಲ್‌ಜೆಪಿ ಸ್ಥಾನಗಳನ್ನು ಗೆದ್ದುಕೊಂಡಿವೆ.

ಚುನಾವಣಾ ಫಲಿತಾಂಶ ಸಮಗ್ರ ಸುದ್ದಿಗಳ ಸಂಗ್ರಹ ಇಲ್ಲಿ ಕ್ಲಿಕ್ ಮಾಡಿ.