ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ವಿಧಾನಸಭೆ: ಆಂಧ್ರ- ಕಾಂಗ್ರೆಸ್, ಒರಿಸ್ಸಾ-ಬಿಜೆಡಿ, ಸಿಕ್ಕಿಂ-ಎಸ್‌ಡಿಎಫ್
ಮತಸಮರ
15ನೇ ಲೋಕಸಭೆ ಚುನಾವಣೆ ಜೊತೆಗೇ ನಡೆದ ವಿಧಾನಸಭಾ ಉಪಚುನಾವಣೆಗಳಲ್ಲಿ, ಆಂಧ್ರಪ್ರದೇಶ ಮತ್ತು ಒರಿಸ್ಸಾಗಳೆರಡರಲ್ಲಿಯೂ ಆಡಳಿತ-ಪರ ಕಂಡುಬಂದಿದ್ದು, ಆಂಧ್ರದಲ್ಲಿ ಕಾಂಗ್ರೆಸ್ ಹಾಗೂ ಒರಿಸ್ಸಾದಲ್ಲಿ ಬಿಜೆಡಿ ಮರಳಿ ಅಧಿಕಾರಕ್ಕೇರಿದೆ.

ಆಂಧ್ರದಲ್ಲಿ ಮಾಜಿ ಮುಖ್ಯಮಂತ್ರಿ ತೆಲುಗುದೇಶಂನ ಚಂದ್ರಬಾಬು ನಾಯ್ಡು ಹಾಗೂ ಹೊಸ ಪಕ್ಷ, ಮೆಗಾಸ್ಟಾರ್ ಚಿರಂಜೀವಿ ಅವರ ಪ್ರಜಾರಾಜ್ಯಂಗಳ ಆಡಳಿತ-ವಿರೋಧಿ ಹೋರಾಟದ ಹೊರತಾಗಿಯೂ ವೈ.ಎಸ್.ರಾಜಶೇಖರ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರಕಾರವು 294 ಕ್ಷೇತ್ರಗಳಲ್ಲಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೇರಿದೆ.

ಅಂತಿಮ ಬಲಾಬಲ ಈ ರೀತಿ ಇದೆ:
ಒಟ್ಟು ಕ್ಷೇತ್ರಗಳು 294
ಕಾಂಗ್ರೆಸ್ 157
ಟಿಡಿಪಿ 90
ಪ್ರಜಾರಾಜ್ಯಂ 18
ಟಿಆರ್ಎಸ್ 10
ಎಂಐಎಂ 7
ಸಿಪಿಐ 4
ಬಿಜೆಪಿ 2
ಸಿಪಿಎಂ 1
ಲೋಕಸತ್ತಾ 1
ಸ್ವತಂತ್ರರು 4

ಒರಿಸ್ಸಾ ಪಟ್ಟಕ್ಕೆ ನಾಯಕ ನವೀನ
ಇನ್ನೊಂದೆಡೆ, ಬಿಜೆಪಿಯೊಂದಿಗೆ ಸಂಬಂಧ ಕಳಚಿಕೊಂಡು ರಿಸ್ಕ್ ತೆಗೆದುಕೊಂಡಿದ್ದ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ), ವಿಧಾನಸಭೆ ಚುನಾವಣೆಗಳಲ್ಲಿ ಸ್ಪಷ್ಟ ಬಹುಮತ ಸಾಧಿಸಿ ಅಧಿಕಾರಕ್ಕೆ ಮರಳಿದೆ.

ಅಂತಿಮ ಬಲಾಬಲ:
ಒಟ್ಟು ಕ್ಷೇತ್ರಗಳು 147
ಬಿಜೆಡಿ ಮಿತ್ರಕೂಟ 109
ಕಾಂಗ್ರೆಸ್ 25
ಬಿಜೆಪಿ 8
ಇತರರು 5

ಸಿಕ್ಕಿಂನಲ್ಲಿ ಎಸ್‌ಡಿಎಫ
ಸಿಕ್ಕಿಂ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಎಸ್‌ಡಿಎಫ್ 32 ಸ್ಥಾನಗಳಲ್ಲಿ 31 ಸ್ಥಾನಗಳನ್ನು ಬಾಚಿಕೊಂಡಿದ್ದು, ಕಾಂಗ್ರೆಸ್ ಒಂದು ಸ್ಥಾನ ಬಿಟ್ಟುಕೊಟ್ಟಿದ್ದರೆ ಬಿಜೆಪಿಗೆ ಯಾವುದೇ ಸ್ಥಾನಗಳನ್ನು ಬಿಟ್ಟುಕೊಟ್ಟಿಲ್ಲ.