ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಗುಜರಾತಿನಲ್ಲಿ ಕುಸಿತ ಕಂಡ ಬಿಜೆಪಿ
ಮತಸಮರ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿನ ಮತದಾನವು ಹಲವಾರು ನಾಟಕೀಯ ಕಥೆಗಳನ್ನು ಹೇಳುತ್ತಿದೆ. ಇದರಲ್ಲಿ ಕಂಡು ಬರುವ ಒಂದು ವಿಚಾರವು ನಾಟಕೀಯವಾಗಿ ತೋರಿಬಂದರೂ ಇದು ಅತಿ ಮಹತ್ವದ ವಿಷಯವಾಗಿದೆ. ಗುಜರಾತಿನಲ್ಲಿ ಬಿಜೆಪಿಯ ಮತ ಹಂಚಿಕೆಯು 2004ಕ್ಕೆ ಹೋಲಿಸಿದರೆ ಶೇ.0.9ರಷ್ಟು ಕುಸಿತ ಕಂಡಿದೆ. ಇದೇ ವೇಳೆ ಕಾಂಗ್ರೆಸ್ ಗಳಿಕೆಯಲ್ಲಿ ಸಹಿತ ಶೇ.0.5ರಷ್ಟು ಇಳಿಕೆಯಾಗಿದೆ.

ಆದರೆ ಈ ಸ್ಥಿತಿಗತಿಯು ಮೋದಿ ಅವರು ಎದುರಿಸಿರುವ ಅತಿ ದೊಡ್ಡ ನಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಮೋದಿ ಅವರು ಬಿಜೆಪಿಯ ಪ್ರಮುಖ ಪ್ರಚಾರಕರಾಗಿ ಮೂಡಿ ಬಂದಿದ್ದಾರೆ. ಅಲ್ಲದೆ ಅಭಿವೃದ್ಧಿಯ ರೂವಾರಿ ಎಂದು ಬಣ್ಣಿಸಲಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದೆ. ಆದರೆ ಅವರದೇ ನಾಯಕತ್ವದ ರಾಜ್ಯದಲ್ಲೇ ಪಕ್ಷವು ಮತಗಳನ್ನು ಕಳೆದುಕೊಂಡಿರುವುದು ಅಚ್ಚರಿಯ ವಿಚಾರ.

ಒಟ್ಟಾರೆಯಾಗಿ ಕಾಂಗ್ರೆಸ್ ಶೇ 2ರಷ್ಟು ಲಾಭ ಪಡೆದಿದ್ದು ಒಟ್ಟು ಶೇ.28.6ರಷ್ಟು ಮತಗಳನ್ನು ಗಳಿಸಿದೆ. ಬಿಜೆಪಿಯು ಶೇ.3.5ರಷ್ಟು ನಷ್ಟ ಅನುಭವಿಸಿದ್ದು, ಶೇ.18.8ಕ್ಕೆ ತಲುಪಿದೆ. 1999ರಲ್ಲಿ ಈ ಎರಡು ಪಕ್ಷಗಳ ನಡುವೆ ಇದ್ದ ತೆಳು ಅಂತರವು ಈಗ ಶೇ.10ಕ್ಕೆ ತಲುಪಿದೆ.

ಹೆಚ್ಚಿನ ರಾಜ್ಯಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಗಳಿಸಿರುವ ಮತಗಳಿಕೆ ಕುತೂಹಲಕಾರಿ ಚಿತ್ರಣ ನೀಡುತ್ತದೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕಳೆದಬಾರಿ ಶೇ. 12ರಷ್ಟು ಮತಗಳಿಸಿದ್ದರೆ, ಈ ಬಾರಿ ಶೇ.18.3ಕ್ಕೇರಿದೆ. ಇದು ಬಿಜೆಪಿಯನ್ನು ಹಿಂದಿಕ್ಕಿದೆ. ಬಿಜೆಪಿಯು ಶೇ. 22.2ರಿಂದ ಶೇ.17.5ಕ್ಕಿಳಿದಿದೆ. ಎಸ್ಪಿಯು ತನ್ನ ಸ್ಥಾನಗಳನ್ನು ಕಾಯ್ದುಕೊಂಡಿದ್ದರೂ, ಅದು ಶೇ.3.4ರಷ್ಟು ಮತಗಳನ್ನು ಕಳೆದುಕೊಂಡಿದೆ. ಆದರೆ ಬಿಎಸ್ಪಿಯು ಶೇ.2.7ರಷ್ಟು ಲಾಭಗಳಿಸಿದೆ. ಅದು ಒಟ್ಟು ಶೇ.27.4ರಷ್ಟು ಮತಗಳನ್ನು ಗಳಿಸಿದ್ದರೆ ಎಸ್ಪಿಯು ಶೇ.23.3ರಷ್ಟು ವೋಟುಗಳನ್ನು ಬುಟ್ಟಿಗೆ ಹಾಕಿಕೊಂಡಿದೆ.
ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಅನಿರೀಕ್ಷಿತ ಸಾಧನೆ ತೋರಿದೆ. ಮತಹಂಚಿಕೆಯಲ್ಲಿ ಕುಸಿತ ವಿದ್ದರೂ ಸ್ಥಾನಗಳಿಕೆಯಲ್ಲಿ ಉತ್ತಮ ಸಾಧನೆ ತೋರಿದೆ. ಮತ ಹಂಚಿಕೆಯು ಶೇ.41.6ರಿಂದ ಶೇ.39ಕ್ಕಿಳಿದಿದೆ. ಇದಕ್ಕೆ ಹೊಸದಾಗಿ ಹುಟ್ಟಿಕೊಂಡ ಪ್ರಜಾರಾಜ್ಯಂ ಕಾರಣ. ಪ್ರಜಾರಾಜ್ಯಂ ಶೇ15.7ರಷ್ಟು ಮತಗಳನ್ನು ಗಳಿಸಿದೆ. ಆದರೆ ಟಿಡಿಪಿ ಹೊಡೆತ ತಿಂದಿದ್ದು, ಶೇ.33 ರಿಂದ 25ಕ್ಕಿಳಿದಿದೆ.

ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಒಂದೇ ಶೇ. 5.5ರಷ್ಟು ನಷ್ಟ ಅನುಭವಿಸಿದೆ. ಅದು ಶೇ.39ರಿಂದ ಶೇ. 33ಕ್ಕೆ ಕುಸಿದಿದೆ. ಇದರ ಮಿತ್ರ ಪಕ್ಷಗಳೂ ಶೇ.2ರಷ್ಟು ಕುಸಿತ ಕಂಡಿವೆ. ಕಾಂಗ್ರೆಸ್ ಸಹ ನಷ್ಟ ಅನುಭವಿಸಿದೆ. ಆದರೆ ತೃಣಮೂಲ ಕಾಂಗ್ರೆಸ್ ಶೇ. 10.2ರಷ್ಟು ಲಾಭ ಗಳಿಸಿದೆ.

ಬಿಹಾರದಲ್ಲಿ ಜೆಡಿಯು ಶೇ.2ರಷ್ಟು ಲಾಭ ಗಳಿಸಿದೆ. ಬಿಜೆಪಿಯು ಒಂದಷ್ಟು ಕಳೆದುಕೊಂಡಿದೆ. ಆದರೆ ಆರ್‍ಜೆಡಿ ಶೇ.31ರಿಂದ ಶೇ.19ಕ್ಕಿಳಿದಿದೆ. ಎಲ್‌ಜೆಪಿಯು ಶೇ. 1.6ರಷ್ಟು ಕಳೆದುಕೊಂಡಿದೆ. ಕಾಂಗ್ರೆಸ್ ತಾನೇತಾನಾಗಿ ಸ್ಫರ್ಧಿಸಿದ್ದು, ಶೇ.4.5ರಿಂದ ಶೇ. 10.3ಕ್ಕೇರಿದೆ. ಆದರೆ ಶೇಕಡಾವಾರು ಮತಗಳಿಕೆ ಹೆಚ್ಚಿದ್ದರೂ ಅದು ಹೆಚ್ಚು ಸ್ಥಾನಗಳನ್ನು ನೀಡುವಲ್ಲಿ ಫಲನೀಡಿಲ್ಲ.
ರಾಜಸ್ಥಾನದಲ್ಲಿ ಬಿಜೆಪಿ ಶೇ.12ರಷ್ಟು ನಷ್ಟ ಅನುಭವಿಸಿದೆ. ಕಾಂಗ್ರೆಸ್ ಶೇ.6ರಷ್ಟು ಲಾಭಗಳಿಸಿದೆ.

ಆಂಧ್ರದಲ್ಲಿ ಪ್ರಜಾರಾಜ್ಯಂ ವಿರೋಧ ಪಕ್ಷಕ್ಕೆ ಹಾನಿ ಉಂಟುಮಾಡಿರುವಂತೆ ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆಯವರ ಎಂಎನ್ಎಸ್ ಕಾರ್ಯ ಎಸಗಿದ್ದು, ನಿರ್ದಿಷ್ಟವಾಗಿ ಶಿವಸೇನೆಯ ಮೇಲೆ ಪರಿಣಾಮ ಬೀರಿದೆ. ಎಂಎನ್ಎಸ್ ಶೇ.4ರಷ್ಟು ಮತಗಳನ್ನು ಕಬಳಿಸಿರುವುದು ಚಿಕ್ಕ ವಿಚಾರವೇನಲ್ಲ.