ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ಮತಸಮರ
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಸತತ 6ನೇ ಬಾರಿಗೆ ಆಯ್ಕೆಯಾಗಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ ಕೇಂದ್ರ ಸಚಿವ ಸ್ಥಾನದತ್ತ ದೃಷ್ಟಿ ನೆಟ್ಟಿದ್ದಾರೆ.

1991 ರಿಂದ ಸತತವಾಗಿ ಒಂದೇ ಕ್ಷೇತ್ರದಿಂದ 6 ಸಲ ಗೆದ್ದಿರುವ ಮುನಿಯಪ್ಪ ಅವರು ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ರಾಜ್ಯ ಭೂ ಸಾರಿಗೆ ಸಚಿವರಾಗಿದ್ದರು. ಮಂತ್ರಿಯಾಗಿ ಕೇಂದ್ರದಿಂದ ರಾಜ್ಯಕ್ಕೆ ಸುಮಾರು 5 ಸಾವಿರ ಕೋಟಿ ರೂ.ಗಳನ್ನು ರಸ್ತೆ ಅಭಿವೃದ್ದಿಗಾಗಿ ತಂದಿದ್ದಾರೆ.

ಜತೆಗೆ 650 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿ ಅಭಿವೃದ್ದಿ ಆಗುತ್ತಿದ್ದರೆ ಇನ್ನೂ 60 ಕಿ.ಮೀ ಉದ್ದದ ಹೆದ್ದಾರಿ ಕೆಲಸಕ್ಕೆ ಸಮೀಕ್ಷೆ ನಡೆದಿದೆ. ಜತೆಗೆ ಚಿಕ್ಕಬಳ್ಳಾಪುರ-ಕೋಲಾರ-ಚೆನ್ನೈ ರಸ್ತೆ ಹೆದ್ದಾರಿ ಕೆಲಸ ಕೈಗೆತ್ತಿಕೊಳ್ಳುವ ಮೂಲಕ ತಾವು ಪ್ರತಿನಿಧಿಸುವ ಜಿಲ್ಲೆಗೆ ತಮ್ಮ ಕಾಲದಲ್ಲಿ ಮಹತ್ವದ ಯೋಜನೆ ನೀಡಿದ್ದಾರೆ.

ಜಿಲ್ಲೆ ಮತ್ತು ರಾಜ್ಯಕ್ಕೆ ಇನ್ನೂ ಹೆಚ್ಚಿನ ಕೆಲಸಗಳು ಆಗಬೇಕಾದರೆ ಕೇಂದ್ರ ಸಚಿವ ಸ್ಥಾನದಲ್ಲಿ ಮುಂದುವರಿಯಬೇಕು ಎಂಬುದು ಅವರ ಅಭಿಲಾಷೆ. ಆದರೆ ಈ ಬಾರಿ ರಾಜ್ಯದಿಂದ ಮೊಯ್ಲಿ, ಧರಂಸಿಂಗ್, ಮಲ್ಲಿಕಾರ್ಜುನ್ ಖರ್ಗೆ, ವಿಶ್ವನಾಥ್ ಸೇರಿದಂತೆ ಘಟಾನುಘಟಿಗಳೇ ಇರುವುದರಿಂದ ತಮಗೆ ಸಚಿವ ಸ್ಥಾನ ದೊರೆಯುವುದೇ ಎಂಬುದನ್ನು ಕಾದು ನೋಡಬೇಕು.