ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಪ್ರಧಾನಿ ರಾಜೀನಾಮೆ, ಲೋಕಸಭೆ ವಿಸರ್ಜನೆ
ಮತಸಮರ
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಸೋಮವಾರ ಭೇಟಿ ಮಾಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಹಾಗೂ ತಮ್ಮ ಮಂತ್ರಿ ಮಂಡಲದ ರಾಜೀನಾಮೆ ಸಲ್ಲಿಸಿದರು.

ಇದಕ್ಕೆ ಪ್ರತಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ 14ನೆ ಲೋಕಸಭೆಯನ್ನು ವಿಸರ್ಜಿಸುವಂತೆ ರಾಷ್ಟ್ರಪತಿಗಳು ಆದೇಶ ನೀಡಿದ್ದು, ಹೊಸ ಸರ್ಕಾರದ ರಚನೆಗೆ ಹಾದಿ ಸುಗಮಗೊಳಿಸಿದ್ದಾರೆ.

ಚುನಾವಣೆಯಲ್ಲಿ ಅತಿ ದೊಡ್ಡ ಮೈತ್ರಿಕೂಟವಾಗಿ ಮ‌ೂಡಿ ಬಂದಿರುವ ಯುಪಿಎಗೆ ಸರ್ಕಾರ ರಚನೆಗಾಗಿ ರಾಷ್ಟ್ರಪತಿಗಳು ಮಂಗಳವಾರ ಆಹ್ವಾನ ನೀಡಲಿದ್ದಾರೆಂದು ನಿರೀಕ್ಷಿಸಲಾಗಿದೆ.

"ಪ್ರಧಾನಿಯವರು ರಾಷ್ಟ್ರಪತಿಗಳಿಗೆ ರಾಜೀನಾಮೆ ಸಲ್ಲಿಸಿದ್ದು, ಪರ್ಯಾಯ ಸರ್ಕಾರ ರಚನೆಯಾಗುವ ತನಕ ಪ್ರಧಾನಿ ಹಾಗೂ ಅವರ ಮಂತ್ರಿ ಮಂಡಲವು ಅಧಿಕಾರದಲ್ಲಿ ಮುಂದುವರಿಯುವಂತೆ ರಾಷ್ಟ್ರಪತಿಗಳು ತಿಳಿಸಿರುವುದಾಗಿ" ರಾಷ್ಟ್ರಪತಿ ಭವನದ ವಕ್ತಾರರು ತಿಳಿಸಿದ್ದಾರೆ.

ರಾಷ್ಟ್ರಪತಿ ಹಾಗೂ ಪ್ರಧಾನಿ ಅವರು ಸುಮಾರು 35 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಪ್ರಧಾನಿಯವರು ಮುಂದಿನ ಸರ್ಕಾರ ರಚನೆ ಕುರಿತು ರಾಷ್ಟ್ರಪತಿಗಳೊಂದಿಗೆ ಮಾತುಕತೆ ನಡೆಸಿದರೆಂದು ಹೇಳಲಾಗಿದೆ.