ಸಂಸತ್‌ಗೆ ಕೋಟ್ಯಾಧಿಪತಿಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಪ್ರವೇಶ ಪಡೆಯುವ ಸಂಪ್ರದಾಯ ಈ ಬಾರಿಯೂ ಮುಂದುವರಿದಿದ್ದು, ರಾಜ್ಯದಿಂದ ಕ್ರಿಮಿನಲ್ ಹಿನ್ನೆಲೆಯುಳ್ಳ 9ಮಂದಿ ಸಂಸದರು ಆಯ್ಕೆಯಾಗಿದ್ದು, ಈ ಪೈಕಿ ಆರು ಸದಸ್ಯರು ಬಿಜೆಪಿ ಪಕ್ಷಕ್ಕೆ ಸೇರಿದವರಾಗಿದ್ದಾರೆ.
ಜೆಡಿಎಸ್‌ನಿಂದ ಇಬ್ಬರು ಹಾಗೂ ಕಾಂಗ್ರೆಸ್‌ನಿಂದ ಒಬ್ಬರು ಅಭ್ಯರ್ಥಿ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ ಎಂದು ನ್ಯಾಷನಲ್ ಎಲೆಕ್ಷನ್ ವಾಚ್ ಪ್ರಕಟಣೆಯಲ್ಲಿ ತಿಳಿಸಿದೆ.
28ಲೋಕಸಭಾ ಸದಸ್ಯರ ಪೈಕಿ 25ಸದಸ್ಯರು ಕೋಟ್ಯಧಿಪತಿಗಳಾಗಿದ್ದರೆ, ಎಸ್.ಫಕೀರಪ್ಪ, ನಳಿನ್ ಕುಮಾರ್ ಕಟೀಲ್ ಅವರು ಒಂದು ಕೋಟಿಗಿಂತ ಕಡಿಮೆ ಆಸ್ತಿ-ಪಾಸ್ತಿ ಹೊಂದಿದ್ದಾರೆ. ಜೆಡಿಎಸ್ ಸದಸ್ಯರು ಸರಾಸರಿ 18ಕೋಟಿ ರೂ.ಬಿಜೆಪಿ ಸದಸ್ಯರು 6ಕೋಟಿ ರೂ. ಮತ್ತು ಕಾಂಗ್ರೆಸ್ ಸದಸ್ಯರು 5ಕೋಟಿ ರೂಪಾಯಿ ಉಳ್ಳವರಾಗಿದ್ದಾರೆ.
NRB
ಜೆಡಿಎಸ್‌ನ ಎನ್.ಚಲುವರಾಯಸ್ವಾಮಿ, ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್‌ನ ಎನ್.ಧರಂಸಿಂಗ್, ಬಿಜೆಪಿಯ ಸುರೇಶ್ ಅಂಗಡಿ, ರಮೇಶ್ ಕತ್ತಿ, ನಳೀನ್ ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ, ಪಿ.ಸಿ.ಮೋಹನ್, ಎಸ್.ಫಕೀರಪ್ಪ ಅವರು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ.