ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಒಮ್ಮೆಗೆ ಒಂದು ಜವಾಬ್ದಾರಿ: ಇದು ರಾಹುಲ್ ಮಂತ್ರ
ಮತಸಮರ
'ಒಮ್ಮೆಗೆ ಒಂದೇ ಕೆಲಸ' ತತ್ವದ ಮೇಲೆ ನಂಬುಗೆ ಇರಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ತಾನು ಇದೇ ಕಾರಣಕ್ಕಾಗಿ ಸಚಿವಗಿರಿಯನ್ನು ನಿರಾಕರಿಸಿರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಪೋಸ್ಟರ್ ಬಾಯ್, ತಾರಾ ಪ್ರಚಾರಕರಾಗಿದ್ದ ರಾಹುಲ್, ಯುವಕರ ಸೇರ್ಪಡೆಯೊಂದಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ತನ್ನ 'ಮುದ್ರೆ'ಯು ಈಗಾಗಲೇ ಇದೆ ಎಂಬುದಾಗಿ 39ರ ಹರೆಯದ ರಾಹುಲ್ ಹೇಳಿದ್ದಾರೆ.

"ನಾನು ಪಕ್ಷಕ್ಕೆ ದುಡಿಯಬೇಕಾಗಿದೆ. ಒಮ್ಮೆಗೆ ಒಂದೇ ಕಾರ್ಯನಿರ್ವಹಿಸುವುದನ್ನು ನಾನು ನಂಬುತ್ತೇನೆ. ಆರು ಕೆಲಸಗಳನ್ನು ಒಮ್ಮೆಗೇ ನಿರ್ವಹಿಸುವುದರ ಮೇಲೆ ನನಗೆ ನಂಬುಗೆ ಇಲ್ಲ. ಹಾಗಾದಾಗ ನಾನು ನನ್ನ ಕರ್ತವ್ಯಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಹೇಳಿದ್ದಾರೆ. ಎರಡನೆ ಹಂತದ ಪ್ರಮಾಣವಚನ ಸ್ವೀಕಾರದ ಬಳಿಕ ಅವರು ವರದಿಗಾರರೊಂದಿಗೆ ಮಾತನಾಡುತ್ತಿದ್ದರು. ನಿವ್ಯಾಕೆ ಸಚಿವರಾಗಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಈ ಅಭಿಪ್ರಾಯ ಸೂಚಿಸಿದ್ದಾರೆ.

ಈ ಹಿಂದೆ ಸೋನಿಯಾಗಾಂಧಿ ಅವರು ರಾಹುಲ್ ಸಂಪುಟಕ್ಕೆ ಸೇರ್ಪಡೆಯಾಗಬೇಕೆಂದು ತಾನು ಬಯಸುವುದಾಗಿ ಹೇಳಿದ್ದರು.