ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
 
ಮಹಿಳೆಯರ ವಿವಿಯಲ್ಲಿ ಪುರುಷರದ್ದೇ ಕಾರುಬಾರು
ಅದು ರಾಜ್ಯದ ಪ್ರಪ್ರಥಮ ಮಹಿಳಾ ವಿಶ್ವವಿದ್ಯಾಲಯ. ಇರುವುದು ಐತಿಹಾಸಿಕ ಬಿಜಾಪುರದಲ್ಲಿ.

ಆದರೆ ಅಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ. ವಿವಿಯ ಆಡಳಿತಾತ್ಮಕ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕದಲ್ಲಿ ಪುರುಷರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿ ಮಹಿಳಾ ಸಬಲೀಕರಣದ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಹೊಸ ಇತಿಹಾಸ ಸೃಷ್ಟಿಸಲಾಗುತ್ತಿದೆ.

ನಾಲ್ಕು ವರ್ಷಗಳ ಹಿಂದೆ ಬಿಜಾಪುರದಲ್ಲಿ ಅಸ್ತಿತ್ವಕ್ಕೆ ಬಂದ ಮಹಿಳಾ ವಿವಿಗೆ ಡಾ. ಸಯೀದಾ ಅಖ್ತರ್ ಅವರನ್ನು ನೇಮಕ ಮಾಡಲಾಗಿತ್ತು. ಅವರ ನಂತರ ಒಬ್ಬ ಮಹಿಳೆಯನ್ನೇ ನೇಮಕ ಮಾಡುವ ಬದಲು ಹಂಗಾಮಿ ಕುಲಪತಿಗಳನ್ನಾಗಿ ಪ್ರೊ. ವಿ.ಬಿ. ಮಾಗನೊರ ಅವರನ್ನು ನೇಮಕ ಮಾಡಲಾಗಿದೆ.

ಅದಲ್ಲದೆ ಕುಲಸಚಿವ, ಕುಲಸಚಿವ (ಮೌಲ್ಯಮಾಪನ), ಉಪ ಕುಲ ಸಚಿವ, ಲೆಕ್ಕಾಧಿಕಾರಿ, ಜನ ಸಂಪರ್ಕ ಅಧಿಕಾರಿ ಸೇರಿದಂತೆ ಎಲ್ಲ ಪ್ರಮುಖ ಹುದ್ದೆಗಳನ್ನು ಪುರುಷರೇ ಇದ್ದಾರೆ. ಸದ್ಯ ಇರುವ ವಿವಿ ಸಿಂಡಿಕೇಟ್ ಸಮಿತಿಯಲ್ಲೂ ಕೇವಲ ಒಬ್ಬ ಮಹಿಳೆ ಮಾತ್ರ ಇದ್ದಾರೆ. ಉಳಿದವರೆಲ್ಲರೂ ಪುರುಷರೇ.

ಈಗಾಗಲೇ ನೇಮಕಗೊಂಡ 67 ಬೋಧಕರ ಹುದ್ದೆಗಳಲ್ಲಿ ಸೇವೆಗೆ ಹಾಜರಾದ 48 ಪೈಕಿ ಮಹಿಳೆಯರು ಕೇವಲ 13 ಮಂದಿ.

ನೆರೆಯ ಆಂಧ್ರ ಪ್ರದೇಶದಲ್ಲಿರುವ ಪದ್ಮಾವತಿ, ಹಾಗೂ ತಮಿಳುನಾಡಿನ ಮದರ್ ಥೆರೇಸಾ ಮಹಿಳಾ ವಿವಿಗಳಲ್ಲಿ ಕುಲಪತಿ ಸೇರಿದಂತೆ ಎಲ್ಲ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದ್ದರೆ ಕರ್ನಾಟಕದಲ್ಲಿ ಮಾತ್ರ ಮಹಿಳಾ ವಿವಿಯಲ್ಲಿ ಪುರಷರದೇ ಕಾರುಬಾರು ಹೆಚ್ಚಾಗಿದೆ.
ಮತ್ತಷ್ಟು
ಕರ್ನಾಟಕದಲ್ಲಿ ವಂಶ ರಾಜಕಾರಣ
ಲಜ್ಜೆಗೆಟ್ಟ ರಾಜಕೀಯ: ಕರ್ನಾಟಕದ ಮತ್ತೊಂದು ನಾಟಕ ಅಂತ್ಯ
ಎಮ್ಮೆಗೊಂದು ಚಿಂತೆ..ಸಮಗಾರಗೊಂದು ಚಿಂತೆ..!
ನಿಮ್ಮ ಭಾಷೆ ಎಂದೆಂದಿಗೂ ಉಸಿರಾಗಿರಲಿ  
ಮಕ್ಕಳ ದಿನಾಚರಣೆ ಎಷ್ಟು ಅರ್ಥಪೂರ್ಣ?
ನಾಯಿಗೆ ಕೂಡಿಬಂದ ಕಂಕಣಭಾಗ್ಯ!!