ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾರಿಯಾಗದ ಗಲ್ಲುಶಿಕ್ಷೆ: ಹುಯಿಲೆಬ್ಬಿಸಿದ ಬಿಜೆಪಿ
2000ನೇ ಇಸವಿ ಡಿಸೆಂಬರ್ ತಿಂಗಳಿನಲ್ಲಿ ಸಂಸತ್ತು ಕರಾಳ ಇತಿಹಾಸವೊಂದಕ್ಕೆ ಸಾಕ್ಷಿಯಾಯಿತು. ಸಂಸತ್ ಭವನದೊಳಗೆ ನುಗ್ಗಲು ಯತ್ನಿಸಿದ ಉಗ್ರಗಾಮಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದರು. ನಮ್ಮ ಯೋಧರ ಶೌರ್ಯ ಸಾಹಸಗಳಿಂದ ನಡೆಯಲಿದ್ದ ಭಾರೀ ಗಂಡಾಂತರವೊಂದು ತಪ್ಪಿತು. ಸಂಸತ್ತಿನ ಮೇಲೆ ದಾಳಿ ಪ್ರಕರಣದಲ್ಲಿ ತಪ್ಪಿತಸ್ಥನಾದ ಮೊಹ್ಮದ್ ಅಫ್ಜಲ್ ಗುರುಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯನ್ನು ವಿಧಿಸಿತು.

ಸಂಸತ್ತಿನ ಮೇಲೆ ದಾಳಿ ಪ್ರಕರಣ ನಡೆದು 6 ವರ್ಷಗಳು ಪೂರೈಸಿದ ಬಳಿಕವೂ ಸುಪ್ರೀಂಕೋರ್ಟ್ ಅಫ್ಜಲ್ ಗುರುಗೆ ವಿಧಿಸಿದ ಶಿಕ್ಷೆ ಇನ್ನೂ ಜಾರಿಯಾಗಿಲ್ಲವೆಂದು ಬಿಜೆಪಿ ಹುಯಿಲೆಬ್ಬಿಸಿದೆ. ಪ್ರಸಕ್ತ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಷಯ ರಾಜಕೀಯದಲ್ಲಿ ಕಾವೇರುವಂತೆ ಮಾಡಿದೆ. ರಾಜ್ಯದಲ್ಲಿ ಎರಡನೇ ಸುತ್ತಿನ ಚುನಾವಣೆಗೆ ಮೂರು ದಿನಗಳ ಮುನ್ನ, ಗುಜರಾತಿನಲ್ಲಿ ಬಿಜೆಪಿ ಪಕ್ಷದ ಜಾಹೀರಾತುಗಳು ರಾರಾಜಿಸುತ್ತಿವೆ.

ಅಫ್ಜಲ್‌ಗೆ ಗಲ್ಲು ಶಿಕ್ಷೆ ಜಾರಿಮಾಡುವ ಬಗ್ಗೆ ಕಾಂಗ್ರೆಸ್ ಪಕ್ಷದ ಧೋರಣೆ ವಿರುದ್ಧ ಬಿಜೆಪಿ ಜಾಹೀರಾತಿನಲ್ಲಿ ಟೀಕಿಸಿದೆ. ಸಂಸತ್ತಿನ ಮೇಲೆ ದಾಳಿ ಮಾಡಿದ ಸಂಚುಕೋರರಿಗೆ ಇನ್ನೂ ಶಿಕ್ಷೆಯಾಗದಿರುವ ಬಗ್ಗೆ ಜಾಹೀರಾತಿನಲ್ಲಿ ಖಂಡಿಸಲಾಗಿದೆ. ಅಫ್ಜಲ್‌ಗೆ ಸುಪ್ರೀಂಕೋರ್ಟ್ 2004ರಲ್ಲಿ ತಪ್ಪಿತಸ್ಥನೆಂದು ಆಪಾದಿಸಿ ಗಲ್ಲುಶಿಕ್ಷೆ ಜಾರಿ ಮಾಡಿದ್ದು, ಅವನ ಕ್ಷಮಾದಾನದ ಅರ್ಜಿ ಇನ್ನೂ ರಾಷ್ಟ್ರಪತಿಯ ಅಂಗಳದಲ್ಲಿದೆ.

ಆದರೆ ಅಫ್ಜಲ್‌ಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಬಿಜೆಪಿ ಕೂಗೆಬ್ಬಿಸಿರುವ ನಡುವೆ ಕಾಶ್ಮೀರದ ಮಾನವ ಹಕ್ಕು ಸಂಘಟನೆಗಳು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದೆ. ಕಾಶ್ಮೀರದ ರಾಜಕೀಯ ಪಕ್ಷಗಳು ಮತ್ತು ಮಾನವ ಹಕ್ಕು ಸಂಘಟನೆಗಳು ವಿಚಾರಣೆ ದೋಷಪೂರಿತವಾಗಿದ್ದು, ಶಿಕ್ಷೆಯನ್ನು ಜಾರಿ ಮಾಡಬಾರದೆಂದು ಒತ್ತಾಯಿಸುತ್ತಿವೆ.


ಅಫ್ಜಲ್ ಗುರುಗೆ ಮರಣದಂಡನೆ ಶಿಕ್ಷೆ ಅನುಷ್ಠಾನಕ್ಕೆ ತರದಿರುವ ಕುರಿತ ಪ್ರತಿಕ್ರಿಯೆಗೆ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೀಡಿದ ಪ್ರತಿಕ್ರಿಯೆಗೆ ಉತ್ತರಿಸಿರುವ ಪ್ರಧಾನಿ ಮನಮೋಹನ ಸಿಂಗ್ ಪ್ರತಿಯೊಬ್ಬರ ರೀತಿ ಅಫ್ಜಲ್ ಕೂಡ ಕಾನೂನಿನ ಪ್ರಕ್ರಿಯೆಗೆ ಅರ್ಹರೆಂದು ಹೇಳಿದ್ದಾರೆ.

ಅಫ್ಜಲ್‌ಗೆ ಮರಣದಂಡನೆ ಶಿಕ್ಷೆ ಜಾರಿಯಾಗದಿರುವ ಬಗ್ಗೆ ಕಠಿಣ ಪದಗಳನ್ನು ಬಳಸಿರುವ ನರೇಂದ್ರ ಮೋದಿ ಸಂಸತ್ತಿನ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವನ್ನು ಗುಜರಾತಿನ ವಶಕ್ಕೆ ಒಪ್ಪಿಸಿ, ನಾವು ಅವನನ್ನು ಗಲ್ಲಿಗೇರಿಸುತ್ತೇವೆಂದು ಹೇಳುವ ಮೂಲಕ ಕಾನೂನನ್ನು ಕೈಗೆತ್ತಿಕೊಳ್ಳುವ ಮಾತನಾಡಿದ್ದಾರೆ.

ಇವೆಲ್ಲದರ ನಡುವೆ ರಾಷ್ಟ್ರಪತಿಯ ಅಂಗಳದಲ್ಲಿರುವ ಅಫ್ಜಲ್ ಗುರು ಕ್ಷಮಾದಾನದ ಅರ್ಜಿ ಇನ್ನೂ ತೀರ್ಮಾನವಾಗಬೇಕಿದೆ. ಅವನು ನಿರ್ದೋಷಿ ಎಂದು ಕೆಲವು ಮಾನವಹಕ್ಕು ಸಂಘಟನೆಗಳು ಹೇಳುತ್ತಿವೆಯಾದರೂ ಸುಪ್ರೀಂಕೋರ್ಟ್ ತೀರ್ಪಿಗೆ ತಲೆಬಾಗಲೇಬೇಕಾಗಿದೆ. ಈಗ ಕ್ಷಮಾದಾನದ ಅರ್ಜಿ ರಾಷ್ಟ್ರಪತಿಯ ಅಂಗಳದಲ್ಲಿರುವುದರಿಂದ ಅದು ತೀರ್ಮಾನವಾಗದೇ ಅಫ್ಜಲ್‌ಗೆ ಕೂಡಲೇ ಗಲ್ಲುಶಿಕ್ಷೆ ಜಾರಿಮಾಡಬೇಕೆಂದು ಬಿಜೆಪಿ ಧ್ವನಿಯೆಬ್ಬಿಸುವುದರಲ್ಲಿ ಅರ್ಥವಿಲ್ಲ.
ಮತ್ತಷ್ಟು
ರಥ ಯಾತ್ರಿ - ಈಗ ಬಿಜೆಪಿಯ ಮಹಾರಥಿ
ವಿಕಲಾಂಗರ ಬದುಕಲ್ಲಿ ಚೈತನ್ಯ ಸಾಧ್ಯವೇ?
ಮಹಿಳೆಯರ ವಿವಿಯಲ್ಲಿ ಪುರುಷರದ್ದೇ ಕಾರುಬಾರು
ಕರ್ನಾಟಕದಲ್ಲಿ ವಂಶ ರಾಜಕಾರಣ
ಲಜ್ಜೆಗೆಟ್ಟ ರಾಜಕೀಯ: ಕರ್ನಾಟಕದ ಮತ್ತೊಂದು ನಾಟಕ ಅಂತ್ಯ
ಎಮ್ಮೆಗೊಂದು ಚಿಂತೆ..ಸಮಗಾರಗೊಂದು ಚಿಂತೆ..!