ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನನ್ನ ವೆಬ್‌ದುನಿಯಾ: ನಿಮ್ಮದೇ ಪೋರ್ಟಲ್ ರಚಿಸಿ
WD
ನಿಮ್ಮ ಮನದಲ್ಲಿ ಆಗಾಗ್ಗೆ ಧುತ್ತನೆ ಮೂಡಿ ಮರೆಯಾಗುತ್ತಿರುವ ಯೋಚನೆಗಳನ್ನು ಹಿಡಿದಿಡುವುದು ಹೇಗೆಂಬ ಆಲೋಚನೆಯೇ? ಅಕ್ಷರಗಳ ಅಕ್ಕರೆಯ ಜಗತ್ತು ಸೃಷ್ಟಿಸಬೇಕೆಂಬ ತುಡಿತವೇ? ಅಂತರ್ಜಾಲದಲ್ಲಿ ನಿಮ್ಮದೇ ಒಂದು ಪೋರ್ಟಲ್ ಇದ್ದರೆ ಹೇಗೆ ಎಂಬುದರ ಬಗ್ಗೆ ಯೋಚಿಸಿದ್ದೀರಾ? ಹಾಗಿದ್ದರೆ ವೆಬ್‌ದುನಿಯಾ ನಿಮಗೆ ಸಹಾಯಕ್ಕಿದೆ.

ಈಗಾಗಲೇ ನಿಮ್ಮದೇ ಭಾಷೆಯಲ್ಲಿ ಇ-ಮೇಲ್, ಶುಭಾಶಯ ಪತ್ರಗಳು ಮುಂತಾದ ಸೇವೆಗಳನ್ನು ವೆಬ್ ಲೋಕಕ್ಕೆ ಪರಿಚಯಿಸಿರುವ ವೆಬ್‌ದುನಿಯಾ ಇದೀಗ ಮತ್ತೊಂದು ಹೊಸ ಸೇವೆಯನ್ನು ನೀಡಲಾರಂಭಿಸಿದೆ. ಅದುವೇ "ನನ್ನ ವೆಬ್‌ದುನಿಯಾ" . ಬಳಕೆದಾರರು ತಮ್ಮದೇ ಭಾಷೆಯಲ್ಲಿ ತಮ್ಮದೇ ಪೋರ್ಟಲ್ ಒಂದನ್ನು ಇಲ್ಲಿ ರಚಿಸಬಹುದಾಗಿದೆ. ನಿಮ್ಮ ಅಭಿಪ್ರಾಯಗಳನ್ನು ಮಂಡಿಸಬಹುದಾಗಿದೆ. ಮನಸ್ಸಿನಲ್ಲಿ ಏನೇನು ಹೊಳೆಯುತ್ತದೆಯೋ ಅದನ್ನು ಅಕ್ಷರರೂಪಕ್ಕೆ ಇಳಿಸಬಹುದಾಗಿದೆ.

ನಿಮ್ಮ ವೆಬ್‌ದುನಿಯಾ ಡಾಟ್ ಕಾಂ ಇ-ಮೇಲ್ ಐಡಿಯೊಂದಿಗೆ ಲಾಗಿನ್ ಆದಲ್ಲಿ ನಿಮ್ಮದೇ ಆದ ಸ್ವಂತ ಪೋರ್ಟಲ್ ರಚಿಸುವುದು http://kannada.mywebdunia.com ಮೂಲಕ ನಿಮಗೆ ಸಾಧ್ಯವಿದೆ.

ಇಂಗ್ಲಿಷ್, ಕನ್ನಡದ ಜತೆಗೆ ಭಾರತದ ಒಟ್ಟು ಒಂಬತ್ತು ಭಾಷೆಗಳಲ್ಲಿ ನೀವು ಪೋರ್ಟಲ್ ರಚಿಸಬಹುದಾಗಿದೆ. ಇಲ್ಲಿ ನಿಮ್ಮ ವ್ಯಕ್ತಿಗತ ವಿವರಗಳನ್ನು ಸಲ್ಲಿಸಿ, ಚಿತ್ರಗಳನ್ನು ಅಪ್‌ಲೋಡ್ ಮಾಡಬಹುದು. ನಿಮಗೆ ಬೇಕಾಗಿರುವ ಆರೆಸ್ಸೆಸ್ ಫೀಡ್‌ಗಳನ್ನು ನಿಮ್ಮ ಪೋರ್ಟಲ್‌ನಲ್ಲಿ ಅಳವಡಿಸಬಹುದು. ಚಿತ್ರಗಳನ್ನು ಸಂಗ್ರಹಿಸಿಡಬಹುದು. ನಿಮ್ಮಿಷ್ಟದ ಅಂತರ್ಜಾಲ ತಾಣಗಳ ಲಿಂಕ್‌ಗಳನ್ನು ನಿಮ್ಮದೇ ಪೋರ್ಟಲ್‌ನಿಂದ ನೀಡಬಹುದು.

ಇದರೊಂದಿಗೆ ನಿಮ್ಮ ಆಸಕ್ತಿಯ ವಿಭಿನ್ನ ವರ್ಗಗಳಿಗೆ ಅವುಗಳದ್ದೇ ಆದ ವಿವಿಧ ಚಾನೆಲ್‌ಗಳನ್ನು ರಚಿಸುವ ಅವಕಾಶ ಇಲ್ಲಿದೆ. ಉದಾಹರಣೆಗೆ, ನೀವು ಭಾವನೆಗಳ ಬಗ್ಗೆ, ಹಾಸ್ಯದ ಬಗ್ಗೆ, ಸುದ್ದಿ ವಿಶ್ಲೇಷಣೆ ಬಗ್ಗೆ, ಜಗತ್ತಿನ ಆಗುಹೋಗುಗಳ ಬಗ್ಗೆ, ವಿಜ್ಞಾನದ ಬಗ್ಗೆ... ಹೀಗೆ ವಿಭಿನ್ನ ವಿಷಯಗಳಿಗಾಗಿ ಪ್ರತ್ಯೇಕ ಚಾನೆಲ್‌ಗಳನ್ನು ರಚಿಸಿ ಆಯಾ ಚಾನೆಲ್‌ಗಳ ಅಡಿಯಲ್ಲಿ ಲೇಖನಗಳನ್ನು ಪೋಸ್ಟ್ ಮಾಡಬಹುದಾಗಿದೆ.

ನಿಮ್ಮ ಆನ್‌ಲೈನ್ ಮಿತ್ರರಿಗೂ ನಿಮ್ಮದೇ ಪೋರ್ಟಲ್ ಬಗ್ಗೆ ತಿಳಿಸಿ, ಸಮಕಾಲೀನ ವಿಷಯಗಳ ಬಗ್ಗೆ ಚರ್ಚೆಗಳನ್ನು ಕೂಡ ನಿಮ್ಮ ಪೋರ್ಟಲ್‌ಗಳಲ್ಲೇ ಮಾಡಬಹುದಾಗಿದೆ.

ಆನ್‌ಲೈನ್ ಲೋಕದಲ್ಲಿ ಬ್ಲಾಗ್ ಎಂಬ ಪರಿಕಲ್ಪನೆ ಇದೀಗ ಜನಜನಿತ. ಬಹುತೇಕವಾಗಿ ಅದನ್ನೇ ಹೋಲುವ ಮತ್ತು ಅದಕ್ಕಿಂತ ಹೆಚ್ಚಿನ ಅವಕಾಶಗಳನ್ನು ನೀಡುವ ನನ್ನ ವೆಬ್‌ದುನಿಯಾ ಹೇಗಿದೆ ಅಂತ ಪರೀಕ್ಷಿಸಿ ನೋಡಿ.
ಮತ್ತಷ್ಟು
ಜಾರಿಯಾಗದ ಗಲ್ಲುಶಿಕ್ಷೆ: ಹುಯಿಲೆಬ್ಬಿಸಿದ ಬಿಜೆಪಿ
ರಥ ಯಾತ್ರಿ - ಈಗ ಬಿಜೆಪಿಯ ಮಹಾರಥಿ
ವಿಕಲಾಂಗರ ಬದುಕಲ್ಲಿ ಚೈತನ್ಯ ಸಾಧ್ಯವೇ?
ಮಹಿಳೆಯರ ವಿವಿಯಲ್ಲಿ ಪುರುಷರದ್ದೇ ಕಾರುಬಾರು
ಕರ್ನಾಟಕದಲ್ಲಿ ವಂಶ ರಾಜಕಾರಣ
ಲಜ್ಜೆಗೆಟ್ಟ ರಾಜಕೀಯ: ಕರ್ನಾಟಕದ ಮತ್ತೊಂದು ನಾಟಕ ಅಂತ್ಯ