ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿ ಮೋಡಿಗೆ ಮತ್ತೆ ಅರಳಿದ '' ಕಮಲ''
ನಾಗೇಂದ್ರ ತ್ರಾಸಿ

ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶದ ಮೇಲೆ ರಾಷ್ಟ್ರರಾಜಕಾರಣ ಕುತೂಹಲದ ದೃಷ್ಟಿನೆಟ್ಟಿತ್ತು. ಎಲ್ಲಾ ಟೀಕೆ-ಟಿಪ್ಪಣಿಗಳ ನಡುವೆ ಮೋದಿಗೆ ಮತದಾರರು ಸ್ಪಷ್ಟ ಜನಾದೇಶ ನೀಡಿದ್ದಾರೆ.

ಭಾನುವಾರ ಘೋಷಿತವಾದ ಫಲಿತಾಂಶ ಎಲ್ಲಾ ಕುತೂಹಲಗಳಿಗೆ ಉತ್ತರ ನೀಡುವುದರೊಂದಿಗೆ, ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿಯ ಸಾವಿನ ವ್ಯಾಪಾರಿ ಎಂಬ ಹೇಳಿಕೆ ಹಾಗೂ ತೆಹಲ್ಕಾ ನಡೆಸಿದ ರಹಸ್ಯ ಕಾರ್ಯಾಚರಣೆ ಯಾವುದೂ ಮೋದಿಯವರ ಮೋಡಿಯನ್ನು ವಿಫಲಗೊಳಿಸಲು ಸಾಧ್ಯವಾಗಿಲ್ಲ ಎಂಬುದು ಸಾಬೀತಾಗಿದೆ.

ಆರಂಭದಲ್ಲಿ ಮೋದಿ ರಾಜ್ಯದ ಅಭಿವೃದ್ಧಿ ಪರ ಮಾತನಾಡುತ್ತಿದ್ದರು, ಆ ಸಂದರ್ಭದಲ್ಲಿ ಬಿಜೆಪಿಯ ಬಂಡುಕೋರ ಅಭ್ಯರ್ಥಿಗಳು, ಕಾಂಗ್ರೆಸ್ ತಂತ್ರಗಳಿಗೆ ಮತದಾರರು ವಾಲುತ್ತಿರುವುದನ್ನ ಮನಗಂಡ, ಮೋದಿ ಮತ್ತೆ ಹಿಂದುತ್ವದ ತೆಕ್ಕೆಗೆ ಬಿದ್ದಿದ್ದರು.

ಸಾವಿನ ವ್ಯಾಪಾರಿ, ಸೊಹ್ರಾಬುದ್ದೀನ್ ಹೇಳಿಕೆಗಳು ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕಿ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಮಾಧ್ಯಮಗಳು ಮೋದಿಯವರಿಗೆ ಈ ಬಾರಿ ಪೈಪೋಟಿ ಇದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ತಿಳಿಸಿದ್ದರೂ,ಅಂದಾಜು ನೂರು ಸೀಟುಗಳನ್ನು ಪಡೆಯಬಹುದು ಎಂಬುದಾಗಿ ಭವಿಷ್ಯ ನುಡಿದಿದ್ದವು.

ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಅವರ ಬಂಡಾಯ, ಪಟೇಲ್ ಜನಾಂಗ ಮೋದಿ ಅವರಿಗೆ "ಕೈ'' ಕೊಡಬಹುದು ಎಂಬ ಲೆಕ್ಕಾಚಾರಗಳೆಲ್ಲ ಬುಡಮೇಲಾಗುವ ಮೂಲಕ ಮೋದಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಗುಜರಾತ್‌‌ನಲ್ಲಿ ಕಮಲವನ್ನು ಅರಳಿಸಿದ್ದಾರೆ. ಬಿಜೆಪಿಯ ಭರ್ಜರಿ ಗೆಲುವು,ಕಾಂಗ್ರೆಸ್‌‌ಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಅಲ್ಲದೇ ಹಿಂದುತ್ವ, ಅಭಿವೃದ್ಧಿ, ತತ್ವ ಸಿದ್ಧಾಂತ ಎಂದೆಲ್ಲಾ ಕೇಳಿಬರುತ್ತಿದ್ದ ಮಾತುಗಳಿಗೆ ಮತದಾರ ತನ್ನ 'ಅಂತಿಮ ತೀರ್ಪು' ನೀಡಿದ್ದಾನೆ.
ಮತ್ತಷ್ಟು
ನನ್ನ ವೆಬ್‌ದುನಿಯಾ: ನಿಮ್ಮದೇ ಪೋರ್ಟಲ್ ರಚಿಸಿ
ಜಾರಿಯಾಗದ ಗಲ್ಲುಶಿಕ್ಷೆ: ಹುಯಿಲೆಬ್ಬಿಸಿದ ಬಿಜೆಪಿ
ರಥ ಯಾತ್ರಿ - ಈಗ ಬಿಜೆಪಿಯ ಮಹಾರಥಿ
ವಿಕಲಾಂಗರ ಬದುಕಲ್ಲಿ ಚೈತನ್ಯ ಸಾಧ್ಯವೇ?
ಮಹಿಳೆಯರ ವಿವಿಯಲ್ಲಿ ಪುರುಷರದ್ದೇ ಕಾರುಬಾರು
ಕರ್ನಾಟಕದಲ್ಲಿ ವಂಶ ರಾಜಕಾರಣ