ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ವಿಜಯ : ದಿಲ್ಲಿ ಗದ್ದುಗೆಯಲ್ಲಿ ಪಶ್ಚಾತ್ ಕಂಪನ
ದೇಶದ ಪ್ರಮುಖ ರಾಜಕೀಯ ಪಕ್ಷಗಳ ಘಟಾನುಘಟಿಗಳೆಲ್ಲರೂ ಗುಜರಾತಿಗೆ ಧಾವಿಸಿ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಭಾರೀ ಕುತೂಹಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಂತೂ ಬಹುತೇಕವಾಗಿ ಮಹಾ ಚುನಾವಣೆಯನ್ನೇ ನೆನಪಿಸಿದ್ದು ಈ ಚುನಾವಣೆಯ ವಿಶೇಷ.

ರಾಜ್ಯದಲ್ಲೇ ಬೀಡುಬಿಟ್ಟಿದ್ದ ಪ್ರಮುಖ ರಾಷ್ಟ್ರೀಯ ಮುಖಂಡರು, ಹಲವಾರು ಸಮಾವೇಶಗಳಲ್ಲಿ ಭಾಗವಹಿಸಿ, ಪಕ್ಷ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರಲ್ಲದೆ, ಕೆಲವರಂತೂ ರೋಡ್ ಶೋ ನಡೆಸಿ ಸಾಕಷ್ಟು ಧೂಳೆಬ್ಬಿಸಿದ್ದರು.

ಕಳೆದ ಒಂದೂವರೆ ದಶಕದಲ್ಲಿ ಅತ್ಯಂತ ಕಾಡಾಕಾಡಿಯಾಗಿ ಮತ್ತು ಗಂಭೀರವಾಗಿ ಹೋರಾಡಿದ ಚುನಾವಣೆಯಿದು. ಈ ಮತದಾನದ ಫಲಿತಾಂಶಗಳ ಬಗ್ಗೆ ನಮ್ಮ ದೇಶಾದ್ಯಂತ ಮಾತ್ರವೇ ಅಲ್ಲ, ಹೊರ ದೇಶಗಳಲ್ಲೂ ಸಾಕಷ್ಟು ಕುತೂಹಲವಿತ್ತು ಎಂದಿದ್ದಾರೆ ಹಿರಿಯ ಬಿಜೆಪಿ ನಾಯಕರೊಬ್ಬರು.

ಈ ಚುನಾವಣಾ ಫಲಿತಾಂಶಗಳು ರಾಷ್ಟ್ರ ರಾಜಕಾರಣದ ಮೇಲೆ ಗಂಭೀರ ಪರಿಣಾಮ ಬೀರುವುದಂತೂ ಸತ್ಯ. ಪ್ರಧಾನವಾಗಿ ಈ ಫಲಿತಾಂಶದ ಪರಿಣಾಮ ಬೀರುವುದು ಕೇಂದ್ರದ ಯುಪಿಎ ಸರಕಾರದ ಮೇಲೆ. ಅಣ್ವಸ್ತ್ರ ಒಪ್ಪಂದದ ಬಗೆಗೆ ಎಡಪಕ್ಷಗಳಿಂದ ತೀವ್ರ ವಿರೋಧ ಎದುರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಇನ್ನು ಎಡಪಕ್ಷಗಳನ್ನು ಎದುರು ಹಾಕಿಕೊಳ್ಳುವುದಕ್ಕೆ ಹಿಂದೇಟು ಹಾಕಬಹುದು.

ಒಂದೊಮ್ಮೆ ಚುನಾವಣಾ ಫಲಿತಾಂಶವು ಕಾಂಗ್ರೆಸ್ ಪರವಾಗಿದ್ದಿದ್ದರೆ, ಎಡಪಕ್ಷಗಳ ವಿರೋಧ ಲೆಕ್ಕಿಸದೆ ಕಾಂಗ್ರೆಸ್ ಸರಕಾರವು ಅಣ್ವಸ್ತ್ರ ಒಪ್ಪಂದದಲ್ಲಿ ಮುಂದುವರಿಯುವ ನಿರ್ಧಾರ ಮಾಡಿತ್ತು. ಗುಜರಾತ್ ಫಲಿತಾಂಶದ ಯಶಸ್ಸಿನ ಆಧಾರದಲ್ಲಿ ಮಹಾ ಚುನಾವಣೆಯನ್ನೂ ಎದುರಿಸುವ ಧೈರ್ಯ ಅದಕ್ಕೆ ಬರುತ್ತಿತ್ತು. ಇದೀಗ ಫಲಿತಾಂಶವು ಕಾಂಗ್ರೆಸ್‌ಗೆ ವಿರುದ್ಧವಾಗಿರುವುದರಿಂದ ಇನ್ನು ಮುಂದೆ ಅದು ಅಣ್ವಸ್ತ್ರ ಒಪ್ಪಂದಕ್ಕೆ ಸಂಬಂಧಿಸಿ ಎಚ್ಚರಿಕೆಯ ಹೆಜ್ಜೆ ಇಡಲಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತವರ ಪುತ್ರ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಸಾಕಷ್ಟು ಸಮಯವನ್ನು ಗುಜರಾತ್ ಸಭೆಗಳಿಗೆ, ರೋಡ್ ಶೋಗಳಿಗೆ ವ್ಯಯಿಸಿದ್ದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ ಅವರೂ ಇಲ್ಲಿ ಬೀಡುಬಿಟ್ಟಿದ್ದರು.

ಬಿಜೆಪಿಯ ಮುಖ್ಯ ಚುನಾವಣಾ ಪ್ರಚಾರಕ ಸ್ವತಃ ನರೇಂದ್ರ ಮೋದಿಯೇ ಆಗಿದ್ದರೆ, ಅನಾರೋಗ್ಯ ಕಾರಣಗಳಿಂದಾಗಿ ಚುನಾವಣಾ ಪ್ರಚಾರದಿಂದ ದೂರವುಳಿದಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೂ ಕೊನೆ ಕ್ಷಣದಲ್ಲಿ ಮೋದಿ ಪರ ಮತ ಚಲಾಯಿಸುವಂತೆ ಜನತೆಗೆ ಮನವಿ ಮಾಡಿದ್ದರು.

ಈ ಚುನಾವಣಾ ಫಲಿತಾಂಶದ ಪಶ್ಚಾತ್ ಕಂಪನಗಳು ದೆಹಲಿಯಿಂದ ಕೇಳಿಬರಲು ಈಗಾಗಲೇ ಆರಂಭವಾಗಿದೆ.
ಮತ್ತಷ್ಟು
ಮೋದಿ ಮೋಡಿಗೆ ಮತ್ತೆ ಅರಳಿದ '' ಕಮಲ''
ನನ್ನ ವೆಬ್‌ದುನಿಯಾ: ನಿಮ್ಮದೇ ಪೋರ್ಟಲ್ ರಚಿಸಿ
ಜಾರಿಯಾಗದ ಗಲ್ಲುಶಿಕ್ಷೆ: ಹುಯಿಲೆಬ್ಬಿಸಿದ ಬಿಜೆಪಿ
ರಥ ಯಾತ್ರಿ - ಈಗ ಬಿಜೆಪಿಯ ಮಹಾರಥಿ
ವಿಕಲಾಂಗರ ಬದುಕಲ್ಲಿ ಚೈತನ್ಯ ಸಾಧ್ಯವೇ?
ಮಹಿಳೆಯರ ವಿವಿಯಲ್ಲಿ ಪುರುಷರದ್ದೇ ಕಾರುಬಾರು