ಜಗತ್ತಿನ ಯಾವುದೇ ಭಾಗದಲ್ಲಿ ರಾಜಕೀಯ ಹತ್ಯೆಗಳು ಉಪಖಂಡದಲ್ಲಿ ಆಗಿರುವಷ್ಟು ಎಲ್ಲಿಯೂ ಆಗಿಲ್ಲ. ಭಾರತ ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿನ ಕಥೆಯೇ ಬೇರೆ ಇಲ್ಲಿ ರಾಜಕೀಯ ಹತ್ಯೆಗಳು ಸಾಮಾನ್ಯವೇನೊ ಅನ್ನುವಷ್ಟರ ಮಟ್ಟಿಗೆ ಆಗಿವೆ. ಬ್ರಿಟಿಷ್ ಆಧಿಪತ್ಯ ಕೊನೆಗೊಂಡ ನಂತರ ಸುಮಾರು ಹತ್ತಕ್ಕೂ ಹೆಚ್ಚು ಪ್ರಮುಖ ರಾಜಕೀಯ ನಾಯಕರ ಹತ್ಯೆಗಳಾಗಿವೆ. ಸರಿ ಸುಮಾರು ಅಂದಾಜು ಹತ್ತು ವರ್ಷಗಳಿಗೆ ಒಂದು ರಾಜಕೀಯ ಹತ್ಯೆಗಳು ಸಂಭವಿಸಿವೆ.
ಗುರುವಾರ ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ಮಾಜಿ ಪ್ರಥಮ ಮಹಿಳಾ ಪ್ರಧಾನಿ ಬೇನಜೀರ್ ಭುಟ್ಟೊ ರಾಜಕೀಯ ಹತ್ಯೆಗೆ ಬಲಿಪಶುವಾದ ಉಪಖಂಡದ ಪ್ರಮುಖ ನಾಯಕಿ. ಹಾಗೇ ನೋಡಿದಲ್ಲಿ ಇಡೀ ಭುಟ್ಟೊ ಕುಟುಂಬವೇ ರಾಜಕೀಯ ದ್ವೇಷದ ದಳ್ಳುರಿಗೆ ಸಿಲುಕಿ ನಿರ್ನಾಮಗೊಂಡಿದೆ.
ಮೊದಲು ಪಾಕಿಸ್ತಾನದ ಭಾಗವಾಗಿದ್ದ ಇಂದಿನ ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯಾನಂತರದ ಮೊದಲ ರಾಜಕೀಯ ಹತ್ಯೆಯಾಯಿತು. ಬಾಂಗ್ಲಾದೇಶದ ನಿರ್ಮಾತೃ ಶೇಖ್ ಮುಜೀಬುರ್ ರೇಹಮಾನ್ ಅಗಸ್ಟ್ 15, 1975ರಂದು ಮಿಲಿಟರಿ ಅಧಿಕಾರಿಗಳಿಂದ ಹತ್ಯೆಗೆ ಒಳಗಾದರು.
ಜನರಲ್ ಜಿಯಾ ಉಲ್ ಹಕ್ ಆಡಳಿತಾವಧಿಯಲ್ಲಿ ಪಾಕಿಸ್ತಾನದ ಪ್ರಬಲ ರಾಜಕೀಯ ಪಕ್ಷ ಪಾಕಿಸ್ತಾನ್ ಪೀಪಲ್ ಪಾರ್ಟಿಯ ನಾಯಕ ಮತ್ತು ಪಾಕಿಸ್ತಾನದ ನಾಲ್ಕನೆ ರಾಷ್ಟ್ರಾಧ್ಯಕ್ಷ ಜುಲ್ಫಿಕರ್ ಅಲಿ ಭುಟ್ಟೊರನ್ನು ಜನರಲ್ ಜಿಯಾ ಉಲ್ ಹಕ್ ಅವರ ಮಿಲಿಟರಿ ಆಡಳಿತ ಲಾಹೋರ್ ಹೈಕೋರ್ಟ್ ನ್ಯಾಯಾಲಯದ ಆದೇಶದ ಮೇರೆಗೆ ಗಲ್ಲಿಗೇರಿಸಲಾಯಿತು.
ಅಕ್ಟೋಬರ್ 11, 1976ರಿಂದ ಅಗಸ್ಟ್ 17,1988 ರವರೆಗೆ ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತಾಧಿಕಾರಿಯಾಗಿದ್ದ ಜನರಲ್ ಜೀಯಾ ಉಲ್ ಹಕ್, ಸಂಶಯಾಸ್ಪದವಾಗಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಜನರಲ್ ಜಿಯಾರೊಂದಿಗೆ ವಿಮಾನದಲ್ಲಿ ಅಮೆರಿಕದ ರಾಯಭಾರಿ ಅರ್ನಾಲ್ಡ್ ರಾಫೆಲ್ ಲೆವಿಸ್ ಕೂಡ ಸಾವನ್ನಪ್ಪಿದರು.
ಇಲ್ಲಿಗೆ ಪಾಕಿಸ್ತಾನದಲ್ಲಿನ ರಾಜಕೀಯ ಹತ್ಯೆ ಕೆಲಕಾಲ ನಿಂತಂತೆ ಆಗಿತ್ತು. ಆಲ್‌ಖೈದಾ ಮತ್ತು ತಾಲಿಬಾನ್ ಉಗ್ರರ ನಡುವೆ ಮತ್ತು ತಾನೆ ಬೆಳೆಸಿಕೊಂಡ ಪೊಷಿಸಿಕೊಂಡು ಬಂದ ಮತಾಂಧತೆ ಇಂದು ಅದೇ ರಾಜಕೀಯ ನಾಯಕರನ್ನು ಬಲಿತೆಗೆದುಕೊಳ್ಳುತ್ತಿದೆ.
ಪಾಕಿಸ್ತಾನ ನಿಸ್ಸಂಶಯವಾಗಿ ಒಂದು ವಿಫಲ ರಾಷ್ಟ್ರ. 1948ರ ನಂತರ ತನ್ನ ಸ್ವಂತ ಅಸ್ತಿತ್ವ ಸಾರಿ ಹೇಳಬೇಕಿದ್ದ ಪಾಕಿಸ್ತಾನ ಇಂದು ಭಯೋತ್ಪಾದಕರ ನೆಲೆಯಾದಂತಾಗಿದೆ. ಆಲ್‌ಖೈದಾ ಮತ್ತು ತಾಲಿಬಾನ್ ಪ್ರವರ್ಧಮಾನಕ್ಕೆ ಬರುವ ಮುನ್ನ ಭಾರತದೊಂದಿಗೆ ಪಾಕಿಸ್ತಾನದ ಹೆಸರು ತಳಕು ಹಾಕಿಕೊಂಡಿತ್ತು. ಪಾಕಿಸ್ತಾನ ಎಂದರೆ ಕಾಶ್ಮೀರ್, ಕಾಶ್ಮೀರ್ ಎಂದರೆ ಭಾರತ ಈ ರೀತಿಯಾಗಿದ್ದ ವಿವಾದ ನೆನೆಗುದಿಗೆ ಬಿಳುತ್ತಲೇ, ಪಾಕ್ ಕೆಲಕಾಲ ತಣ್ಣಗಾಗಿತ್ತು. ಈಗ ಮತ್ತದೇ ಪಾಕಿಸ್ತಾನ ತನ್ನ ಅಸ್ತಿತ್ವವನ್ನು ಸಾಬೀತು ಪಡಿಸುತ್ತಿದೆ. ಆಲ್‌ಖೈದಾಗೆ ನೀಡಿದ ಬೆಂಬಲ ಇಂದು ಮಾಜಿ ಪ್ರಧಾನಿಯನ್ನೇ ಬಲಿತೆಗೆದುಕೊಂಡಿದೆ. ಇನ್ನೊರ್ವ ಪ್ರಧಾನಿ ನವಾಜ್ ಷರೀಫ್ ಮೇಲೆ ಕೂಡ ಹತ್ಯಾ ಪ್ರಯತ್ನ ನಡೆಯುತ್ತಿದೆ.
ಭಾರತದಲ್ಲಿ ಕೂಡ ಎರಡು ಪ್ರಮುಖ ರಾಜಕೀಯ ಹತ್ಯೆಗಳು ನಡೆದವು. ಒಂದೇ ಕುಟುಂಬದ ಮತ್ತು ತಾಯಿ ಮತ್ತು ಮಗನ ಹತ್ಯೆ ದೇಶದ ರಾಜಕೀಯ ವ್ಯವಸ್ಥೆಯನ್ನು ಅಲ್ಲಾಡಿಸಬಹುದಿತ್ತು. ಆದರೆ ಪ್ರಬುದ್ಧ ಪ್ರಜಾಪ್ರಭುತ್ವ. ಭಾರತವನ್ನು ಅರಾಜಕತೆಯಿಂದ ಕಾಪಾಡಿತು.
ಸ್ವಾತಂತ್ರ್ಯ ಬಂದು ಇನ್ನೂ ವರ್ಷವಾಗಿರಲಿಲ್ಲ, ಜನೇವರಿ 30 1948ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿಯ ಅವರು ನಾಥುರಾಮ್ ಗೋಡ್ಸೆಯ ಗುಂಡಿಗೆ ಬಲಿಯಾಗಬೇಕಾಯಿತು. ಅದು ಸ್ವತಂತ್ರ ಭಾರತದ ಮೊದಲ ರಾಜಕೀಯ ಹತ್ಯೆ.
ಎರಡು ದಶಕಗಳವರೆಗೆ ತನ್ನದೇ ಹಾದಿಯಲ್ಲಿ ಸಾಗಿದ ಭಾರತಕ್ಕೆ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾವು ಅದು ಇನ್ನೂ ಹತ್ಯೆಯೊ, ಸಹಜ ಸಾವು ಎನ್ನುವುದು ಹೊರಬಿದ್ದಿಲ್ಲ. ಹೀಗಾಗಿ ಶಾಸ್ತ್ರಿ ಸಾವು ಭಾರತದ ಪಾಲಿಗೆ ಭರಿಸಲಾರದ ನಷ್ಟ ಎಂದೇ ಹೇಳಬಹುದು.
ಪಾಕಿಸ್ತಾನ ವಿರುದ್ಧ 1965ರಲ್ಲಿ ಸಾಧಿಸಿದ ಅಪೂರ್ವ ಗೆಲುವು, ಉಪಖಂಡದ ರಾಜಕೀಯ ಚಿತ್ರಣವನ್ನೇ ಬದಲಿಸಬೇಕಿತ್ತು. ತಾಷ್ಕೆಂಟಿನಲ್ಲಿ ಪಾಕಿಸ್ತಾನದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಮರುದಿನವೇ ಜನೇವರಿ 11. 1966ರಂದು ನಿದನರಾದರು.
ಮೂರು ದಶಕಗಳ ಕಾಲ ಭಾರತೀಯ ರಾಜಕಾರಣದಿಂದ ದೂರ ಸರಿದಿದ್ದ ರಾಜಕೀಯ ಹತ್ಯೆ ಅಕ್ಟೋಬರ್ 31. 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ರೂಪದಲ್ಲಿ ಮರುಕಳಿಸಿತು. ಸಿಖ್ ಪಂಥಕ್ಕೆ ಸೇರಿದ ಅವರದೇ ಅಂಗರಕ್ಷಕರು ಇಂದಿರಾ ಗಾಂಧಿಯವರ ಮೇಲೆ ಗುಂಡಿನ ಸುರಿಮಳೆ ಮಾಡಿದರು.
ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿ ಕುಳಿತಿದ್ದ ಸಿಖ್ ಉಗ್ರವಾದಿಗಳನ್ನು ಜೂನ್ 1 1984ರಂದು ಮಿಲಿಟರಿ ಕಾರ್ಯಾಚರಣೆ ಮೂಲಕ ಸದೇಬಡಿದಿದ್ದು ಅವರ ಹತ್ಯೆಗೆ ಕಾರಣ.
ಆಪರೇಷನ್ ಬ್ಲೂ ಸ್ಟಾರ್‌ನ್ನು ಭಾರತೀಯ ಮಿಲಿಟರಿ ಪಡೆ ಕೈಗೆತ್ತಿಕೊಳ್ಳುವ ಸಮಯದಲ್ಲಿ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿದ್ದ ಜನರಲ್ ಎ. ಎಸ್ ವೈದ್ಯರನ್ನು ಪುಣೆಯಲ್ಲಿ ಸುಖದೇವ್ ಸಿಂಗ್ ಮತ್ತು ಹರ್ಜಿಂದರ್ ಸಿಂಗ್ ದಿಂಡಾ ಗುಂಡಿಕ್ಕಿ ಕೊಲೆ ಮಾಡಿದರು.
ಮೇ 21. 1991ರಂದು ಭಾರತದ ಯುವ ಪ್ರಧಾನಿ ರಾಜೀವ್ ಗಾಂಧಿ ತಮಿಳು ಉಗ್ರರಿಂದ ಹತ್ಯೆಗಿಡಾದರು. ತಮಿಳು ಉಗ್ರರು ಮತ್ತು ಶ್ರೀಲಂಕಾ ನಡುವಿನ ಕದನದಲ್ಲಿ ಸಿಂಹಳಿಯ ಸರಕಾರಕ್ಕೆ ನೆರವಾಗುವ ಉದ್ದೇಶದಿಂದ ರಾಜೀವ ಗಾಂಧಿ, ಶ್ರೀಲಂಕಾಕ್ಕೆ ಶಾಂತಿ ಪಡೆಯನ್ನು ಕಳುಹಿಸಿಕೊಟ್ಟಿದ್ದರು. ಇದು ತಮಿಳು ಉಗ್ರರನ್ನು ಕೆರಳಿಸಿತು. ಪರಿಣಾಮವಾಗಿ ಪೆರಂಬೂರಿನಲ್ಲಿ ಚುನಾವಣಾ ಪ್ರಚಾರದ ಸಭೆಯಲ್ಲಿ ಎಲ್‌ಟಿಟಿಇ ಆತ್ಮಹತ್ಯಾ ಪಡೆಗೆ ಸೇರಿದ ಯುವತಿ ಹೂಮಾಲೆ ಹಾಕುವ ಸಮಯದಲ್ಲಿ ತನ್ನನ್ನೇ ತಾನೆ ಸ್ಪೋಟಿಸಿಕೊಂಡು ರಾಜೀವ ಗಾಂಧಿ ಸಾವಿಗೆ ಕಾರಣಳಾದಳು.
ನಂತರ ದೇಶವನ್ನು ನಡುಗಿಸಿದ್ದು ಪಂಜಾಬ್ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಹತ್ಯೆ.
|