ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಮೀಕ್ಷೆ -2007: ಹೆಗ್ಗಡೆ, ದ್ರಾವಿಡ್ ಶ್ರೇಷ್ಠರು
NEWS ROOM
2007ರ ಶ್ರೇಷ್ಠ ವ್ಯಕ್ತಿಗಳನ್ನು ಓದುಗರೇ ಆಯ್ಕೆ ಮಾಡಲು ವೆಬ್‌ದುನಿಯಾ ಕನ್ನಡ ತಾಣವು ನಡೆಸಿದ ಸಮೀಕ್ಷೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಜನಪ್ರಿಯ ವ್ಯಕ್ತಿಯಾಗಿ, ರಾಹುಲ್ ದ್ರಾವಿಡ್ ನೆಚ್ಚಿನ ಕ್ರಿಕೆಟಿಗನಾಗಿ, ಕುಮಾರಸ್ವಾಮಿ ನೆಚ್ಚಿನ ರಾಜಕಾರಣಿಯಾಗಿ, ಚೆಲುವಿನ ಚಿತ್ತಾರ ಶ್ರೇಷ್ಠ ಚಿತ್ರವಾಗಿ ಹಾಗೂ ಗಣೇಶ್ ಅತ್ಯುತ್ತಮ ನಟನಾಗಿ ಆಯ್ಕೆಯಾಗಿದ್ದಾರೆ.

ಭಾರತದ ಮೊತ್ತ ಮೊದಲ ಬಹುಭಾಷಾ ಆನ್‌ಲೈನ್ ಸಮೀಕ್ಷೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ನಮ್ಮ ಪ್ರೀತಿಯ ಓದುಗರಿಗೆ ಈ ಮುಕ್ತ ಸಮೀಕ್ಷೆಯ ಫಲಿತಾಂಶ ಈಗಾಗಲೇ ತಿಳಿದಿದೆ.

ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಸಮೀಕ್ಷೆಯಲ್ಲಿ ಬಚ್ಚನ್ ಕುಟುಂಬ ಪಾರುಪತ್ಯ ಸಾಧಿಸಿರುವ ಬಗ್ಗೆ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.

ಕರ್ನಾಟಕದ ಮಟ್ಟಿಗೆ ಗಮನಿಸುವುದಾದರೆ, ರಾಜ್ಯದ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಮೂಡಿ ಬಂದ ಹೆಸರು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರದು. ಸಮಾಜಸೇವೆ, ಧಾರ್ಮಿಕ, ಶಿಕ್ಷಣ ಕ್ಷೇತ್ರಗಳಲ್ಲಿ ರಾಜ್ಯದ ಹೆಸರನ್ನು ಎತ್ತರೆತ್ತರಕ್ಕೇರಿಸಿದವರು ಅವರು. ಅವರು ಅರ್ಹವಾಗಿ 71.43 ಶೇ. ಜನಮತ ಗಳಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ವಿಶೇಷವೆಂದರೆ, ಉಳಿದ 9 ಹೆಸರುಗಳಲ್ಲಿ ಯಾವುದೇ ಹೆಸರು ಕೂಡ ಅವರ ಖ್ಯಾತಿಗೆ ಸಮೀಪವೂ ಬಂದಿಲ್ಲ ಅನ್ನುವುದು. ಎರಡನೇ ಸ್ಥಾನ ಪಡೆದವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಅವರು ಮತಗಳಿಕೆ ಪ್ರಮಾಣ ಶೇ. 10 ಮಾತ್ರ. ಉಳಿದಂತೆ, ಜಯಂತ್ ಕಾಯ್ಕಿಣಿ 4.29%, ರವಿ ಬೆಳಗೆರೆ 4.29%, ಮಾಳವಿಕಾ 2.86%, ಎಸ್.ಎಲ್.ಭೈರಪ್ಪ 2.86%, ಡಾ.ಮೋಹನ್ ಆಳ್ವಾ 1.43%, ಜಿ.ವೆಂಕಟಸುಬ್ಬಯ್ಯ 1.43%, ನಾರಾಯಣಮೂರ್ತಿ 1.43% ಮತ ಗಳಿಸಿದ್ದಾರೆ.

PTI
ಕ್ರೀಡಾ ಕ್ಷೇತ್ರದತ್ತ ಗಮನ ಹರಿಸಿದರೆ ಭಾರತೀಯ ತಂಡದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಶೇ 75.71 ಮತಗಳೊಂದಿಗೆ ಮೊದಲ ಸ್ಥಾನ ಗಳಿಸಿದ್ದರೆ, ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕ, ವಿಶ್ವವಿಖ್ಯಾತ ಗೂಗ್ಲಿ ಬೌಲರ್ ಅನಿಲ್ ಕುಂಬ್ಳೆ ಶೇ. 14.29 ಮತಗಳೊಂದಿಗೆ ಎರಡನೇ ಸ್ಥಾನ ಗಳಿಸಿದ್ದಾರೆ. ಆದರೆ ಅವರಿಬ್ಬರ ಜನಪ್ರಿಯತೆಯಲ್ಲಿನ ಅಂತರ ಮಾತ್ರ ತುಸು ಹೆಚ್ಚೇ. ಉಳಿದಂತೆ, ಮಹೇಶ್ ಭೂಪತಿ 2.86%, ರಾಬಿನ್ ಉತ್ತಪ್ಪ 1.43%, ಪಂಕಜ್ ಆಡ್ವಾಣಿ 1.43%, ಅರ್ಜುನ್ ಹಾಲಪ್ಪ 1.43%, ಇಶಾ ಮಿಲ್ಲೆಟ್ 1.43%, ವೆಂಕಟೇಶ್ ಪ್ರಸಾದ್ 1.43% ಮತ ಗಳಿಸಿದ್ದಾರೆ.

PTI
ರಾಜ್ಯ ರಾಜಕಾರಣದ ನಾಟಕೀಯ ವಿದ್ಯಮಾನಗಳನ್ನು ನೋಡಿದವರಿಗೆ ಬಿಜೆಪಿ ಮುಖಂಡ ಯಡಿಯೂರಪ್ಪ ಅವರಿಗೆ ಜನಬೆಂಬಲ ಹೆಚ್ಚು ಎಂಬ ಸಾಮಾನ್ಯ ಅಭಿಪ್ರಾಯವನ್ನು ತಲೆಕೆಳಗು ಮಾಡಿದ್ದು ಕರ್ನಾಟಕದ ಜನಪ್ರಿಯ ರಾಜಕಾರಣಿ ಯಾರೆಂಬ ಪ್ರಶ್ನೆಗೆ ದೊರೆತ ಪ್ರತಿಕ್ರಿಯೆ. “ವಿಶ್ವಾಸದ್ರೋಹ”ದ ಆಪಾದನೆ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೇ ಹೆಚ್ಚು (ಶೇ.57.97) ಮತಗಳು ಆನ್‌ಲೈನ್‌ನಲ್ಲಿ ದೊರೆತಿವೆ. ಎರಡನೇ ಸ್ಥಾನ ಅನುಕಂಪದ ಅಲೆಯಲ್ಲಿರುವ ಬಿ.ಎಸ್.ಯಡಿಯೂರಪ್ಪ (ಶೇ.26.09) ಹಾಗೂ ಮೂರನೇ ಸ್ಥಾನ ಶೇ. 7.25 ಮತ ಗಳಿಸಿದ ವಾಟಾಳ್ ನಾಗರಾಜ್. ನಂತರದ ಸ್ಥಾನಗಳು ದೇವೇಗೌಡ 4.35%, ಎಂ.ಪಿ.ಪ್ರಕಾಶ್ 1.45%, ಧರ್ಮ ಸಿಂಗ್ 1.45%, ಎಸ್.ಎಂ.ಕೃಷ್ಣ 1.45% ಅವರಿಗೆ ಲಭಿಸಿದೆ.

MOKSHA
ಶ್ರೇಷ್ಠ ಕನ್ನಡ ಚಿತ್ರಗಳ ಪಟ್ಟಿಗೆ ಮುಂಗಾರು ಮಳೆಯನ್ನೇಕೆ ಸೇರಿಸಲಿಲ್ಲ ಎಂಬ ಬಗ್ಗೆ ಓದುಗರಿಂದ ಸಾಕಷ್ಟು ಇ-ಮೇಲ್‌ಗಳು ನಮಗೆ ಬಂದಿವೆಯಾದರೂ, ಅದು ಬಿಡುಗಡೆಯಾಗಿದ್ದು 2006ರ ಡಿಸೆಂಬರ್ ತಿಂಗಳಾಂತ್ಯದಲ್ಲಿ. 2007ರಲ್ಲಿ ಬಿಡುಗಡೆಯಾದ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿರುವುದು ಮುಂಗಾರು ಮಳೆ ಯಶಸ್ಸಿನ ಬೆನ್ನೇರಿದ ನಟ ಗಣೇಶ್ ಮತ್ತು ಬಾಲ ನಟನೆಯ ಮೂಲಕ ವಿವಾದಕ್ಕೂ ಕಾರಣವಾಗಿರುವ ಅಮೂಲ್ಯ ನಟಿಸಿರುವ ಚೆಲುವಿನ ಚಿತ್ತಾರ (62.32%) ಚಿತ್ರ. ಎರಡನೇ ಸ್ಥಾನವನ್ನು ಅಗ್ನಿ ಶ್ರೀಧರ್ ಅವರ “ಆ ದಿನಗಳು” (17.39%) ಗಳಿಸಿದ್ದರೆ, ವಿಜಯ್ ಅವರ “ದುನಿಯಾ” (11.59%) ಚಿತ್ರ ಮೂರನೇ ಸ್ಥಾನ ಗಳಿಸಿದೆ. ಉಳಿದ ಸ್ಥಾನಗಳು ಹೀಗಿವೆ: ಕೃಷ್ಣ 2.90%, ಚಂಡ 1.45%, ಲವಕುಶ 1.45%, ಹುಡುಗಾಟ 1.45%, ಮಿಲನ 1.45%.

ಅತ್ಯಂತ ಜನಪ್ರಿಯ ನಟರ ಸಾಲಿನಲ್ಲಿ ಮೊದಲ ಸ್ಥಾನ ಪಡೆದವರು ಅದೇ ಗಣೇಶ್ (72.86%). ಎರಡನೇ ಸ್ಥಾನ ಸುದೀಪ್ (11.43%) ಹಾಗೂ ಮೂರನೇ ಸ್ಥಾನ ವಿಷ್ಣುವರ್ಧನ್ (5.71%). ಉಳಿದಂತೆ, ವಿಜಯ್ 2.86%, ದರ್ಶನ್ 2.86%, ಉಪೇಂದ್ರ 1.43%, ಶಿವರಾಜ್ ಕುಮಾರ್ 1.43%, ಪ್ರೇಮ್ 1.43% ಮತ ಪಡೆದಿದ್ದಾರೆ.

ವಿಶ್ವಾದ್ಯಂತ ನೆಲಸಿರುವ ಕನ್ನಡ ಮನಸ್ಸುಗಳು ಈ ಆನ್‌ಲೈನ್ ಮತದಾನದಲ್ಲಿ ಭಾಗವಹಿಸಿದ್ದು, ತಕ್ಷಣವೇ ಯಾರು ಯಾವ ಸ್ಥಾನ ಪಡೆದಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಗಿತ್ತು.

ಫಲಿತಾಂಶದ ಪೂರ್ಣ ರೂಪ ಇಲ್ಲಿದೆ.

ಮುಕ್ತ ಸಮೀಕ್ಷೆಯಲ್ಲಿ ಭಾಗವಹಿಸಿ ನಿಮ್ಮದೇ ಜನಮತ ರೂಪಿಸಿದ ಕನ್ನಡ ಕುಲಕೋಟಿಗೆ ವೆಬ್‌ದುನಿಯಾ ಬಳಗದಿಂದ ಅನಂತಾನಂತ ಧನ್ಯವಾದಗಳು.
ಮತ್ತಷ್ಟು
ತುತ್ತು ಅನ್ನ, ಬೊಗಸೆ ನೀರು, ಮತ್ತೊಂದು ಕಾರು!
ಸ್ವಪ್ನ ನಗರಿ ದುಃಸ್ವಪ್ನವಾದಾಗ...
ರಾಜಕೀಯ ಹತ್ಯೆಗಳ ತಾಣ ಉಪಖಂಡ
ಹೋರಾಟವೇ ಬದುಕಾಗಿಸಿದ ಬೇನಜೀರ್
ವೆಬ್‌ದುನಿಯಾ ಸಮೀಕ್ಷೆ - 2007
ಮೋದಿ, ಮಾಧ್ಯಮ ಮತ್ತು ರಾಜಕೀಯ