ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮ್ಯಾಟ್: ನಿಖರತೆಯೇ ಇಲ್ಲಿ ಪ್ರಧಾನ!
ಮ್ಯಾನೇಜ್‌ಮೆಂಟ್ ಆಪ್ಟಿಟ್ಯೂಡ್ ಟೆಸ್ಟ್ (MAT-ಮ್ಯಾಟ್) ಸಮೀಪಿಸುತ್ತಿದೆ. ವರ್ಷದಲ್ಲಿ ನಾಲ್ಕು ಬಾರಿ ಅಂದರೆ, ಡಿಸೆಂಬರ್, ಫೆಬ್ರವರಿ, ಮೇ ಮತ್ತು ಸೆಪ್ಟೆಂಬರ್‌ಗಳಲ್ಲಿ ಆಯೋಜಿಸಲಾಗುವ ಈ ಪರೀಕ್ಷೆಯಲ್ಲಿ ಪ್ರತಿಬಾರಿಯೂ ಭಾರೀ ಸ್ಪರ್ಧೆ ಇರುತ್ತದೆ. ಫೆಬ್ರವರಿ ತಿಂಗಳ ಭಾಗವು 2ನೇ ತಾರೀಕಿಗೆ ದೇಶಾದ್ಯಂತ ಎಲ್ಲಾ ಪ್ರಮುಖ ನಗರಗಳಲ್ಲಿ ಮತ್ತು ವಿದೇಶದ ಕೆಲವು ನಗರಗಳಲ್ಲಿಯೂ ನಡೆಯಲಿದೆ.

ತಯಾರಿಗೆ ದಿನಗಳು ಬಹಳ ಕಡಿಮೆ. ಈ ಬಾರಿ ಮ್ಯಾಟ್ ಹೇಗಿರುತ್ತದೆ ಎಂಬುದು ವಿದ್ಯಾರ್ಥಿಗಳ ಆತಂಕ, ಕುತೂಹಲ. ಕಳೆದ ಬಾರಿ ನಡೆಸಿದ ಮ್ಯಾಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಸುಮಾರು 250ರಷ್ಟು ಪ್ರಮುಖ ಮ್ಯಾನೇಜ್‌ಮೆಂಟ್ ಸಂಸ್ಥೆ/ವಿಶ್ವವಿದ್ಯಾನಿಲಯಗಳಲ್ಲಿ ಸೀಟು ಪಡೆದಿದ್ದಾರೆ.

ಈ ಬಾರಿ ಹೇಗೆ?
ಕಳೆದ ಬಾರಿಯ ಪ್ರಶ್ನೆಪತ್ರಿಕೆ ನೋಡಿದಲ್ಲಿ, ಈ ಬಾರಿಯೂ ಮ್ಯಾಟ್ ಅದೇ ರೀತಿ ಇರಬಹುದು ಅನಿಸುತ್ತದೆ. ಕಳೆದ ವರ್ಷ ಮೇ ತಿಂಗಳ ಮ್ಯಾಟ್ ಪ್ರಶ್ನೆ ಪತ್ರಿಕೆ ಸಾಮಾನ್ಯಕ್ಕಿಂತ ತೀರಾ ಭಿನ್ನವಾಗಿತ್ತು. ಅಲ್ಲಿ ಯಾವುದೇ ಸೆಕ್ಷನ್ ಇರಲಿಲ್ಲ ಮತ್ತು ಕಠಿಣ ಪ್ರಶ್ನೆಗಳನ್ನೂ ಕೇಳಲಾಗಿರಲಿಲ್ಲ. ಯಾರ ಮೂಲ ಉದ್ದೇಶ ಸ್ಪಷ್ಟವಾಗಿತ್ತೋ, ಅವರಿಗೆ 2007ರ ಮ್ಯಾಟ್ ಪರೀಕ್ಷೆ ತೀರಾ ಸುಲಭವಾಗಿತ್ತು.

ಮ್ಯಾಟ್ ಪರೀಕ್ಷೆಯನ್ನು ಐದು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಅವೆಂದರೆ: ಲ್ಯಾಂಗ್ವೇಜ್ ಕಾಂಪ್ರಹೆನ್ಷನ್, ಮೆಥಮ್ಯಾಟಿಕಲ್ ಆಪ್ಟಿಟ್ಯೂಡ್, ಇಂಟಲಿಜೆನ್ಸ್ ಆಂಡ್ ಕ್ರಿಟಿಕಲ್ ರೀಸನಿಂಗ್, ಡೇಟಾ ಅನಾಲಿಸಿಸ್ ಆಂಡ್ ಸಫೀಷಿಯನ್ಸಿ ಮತ್ತು ಇಂಡಿಯನ್ ಆಂಡ್ ಗ್ಲೋಬಲ್ ಎನ್ವಯರ್ನಮೆಂಟ್. ಎಲ್ಲಾ ವಿಭಾಗಗಳೂ ಕಡ್ಡಾಯ ಮತ್ತು ಮೊದಲ ನಾಲ್ಕು ವಿಭಾಗಗಳ ಸ್ಕೋರಿಂಗನ್ನೇ ಪರಿಗಣಿಸಲಾಗುತ್ತದೆ. ಐದನೇ ವಿಭಾಗದ ಸ್ಕೋರನ್ನು ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಮತ್ತು ವಿಶ್ವವಿದ್ಯಾನಿಲಯಗಳು ತಮ್ಮ ತಮ್ಮ ನಿಯಮಗಳಿಗೆ ಅನುಸಾರವಾಗಿ ಪರಿಗಣಿಸುತ್ತವೆ.

ಲ್ಯಾಂಗ್ವೇಜ್ ಕಾಂಪ್ರಹೆನ್ಷನ್:
ಈ ವಿಭಾಗದಲ್ಲಿ ಒಟ್ಟು 20 ಶೇ. ಪ್ರಶ್ನೆಗಳಿರುತ್ತವೆ. ಇದರಲ್ಲಿ ರೀಡಿಂಗ್ ಕಾಂಪ್ರಹೆನ್ಷನ್ ಮತ್ತು ಇಂಗ್ಲಿಷ್ ಯೂಸೇಜ್ ಆಧಾರದಲ್ಲಿ ಪ್ರಶ್ನೆಗಳಿರುತ್ತವೆ. ಈ ಪ್ರಶ್ನೆಗಳ ಪ್ರಮಾಣ 40:60 ರಷ್ಟಾಗಿರುತ್ತದೆ.

ಮೆಥಮ್ಯಾಟಿಕಲ್ ಸ್ಕಿಲ್ಸ್ :
ಇದರಲ್ಲಿ ಅಂಕಗಣಿತ ಮತ್ತು ರೇಖಾಗಣಿತ/ಕ್ಷೇತ್ರಗಣಿತ ಸಂಬಂಧಿತ ಪ್ರಶ್ನೆಗಳಿರುತ್ತವೆ. ಇಷ್ಟೇ ಎಂಬ ಪ್ರಮಾಣದಲ್ಲಿ ಇಲ್ಲದಿದ್ದರೂ, ಈ ವಿಭಾಗದಲ್ಲಿ ಅಂಕ ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳೇ ಹೆಚ್ಚು ಇರುತ್ತವೆ.

ಡೇಟಾ ಅನಾಲಿಸಿಸ್ ಆಂಡ್ ಸಫೀಶಿಯನ್ಸಿ:
ಶೇ.20ರಷ್ಟು ಪ್ರಶ್ನೆಗಳು ಈ ವಿಭಾಗಕ್ಕೆ ಸೇರಿದವು. ಈ ವಿಭಾಗದಲ್ಲಿ ಡೇಟಾ ಸಫೀಶಿಯನ್ಸಿ, ಲಾಜಿಕಲ್ ರೀಸನಿಂಗ್, ಡೇಟಾ ಇಂಟರ್‌ಪ್ರಿಟೇಶನ್ ಮತ್ತು ಡೇಟಾ ಕಂಪೇರಿಸನ್‌ಗೆ ಸಂಬಂಧಿಸಿದ ಪ್ರಶ್ನೆಗಳು ಬರುತ್ತವೆ.

ಇಂಟೆಲಿಜೆನ್ಸ್ ಆಂಡ್ ಕ್ರಿಟಿಕಲ್ ರೀಸನಿಂಗ್:
ಇಡೀ ಪ್ರಶ್ನೆ ಪತ್ರಿಕೆಯಲ್ಲಿ ಇಂಟೆಲಿಜೆನ್ಸ್ ಆಂಡ್ ಕ್ರಿಟಿಕಲ್ ರೀಸನಿಂಗ್ ವಿಭಾಗದ ಪಾಲು ಶೇ.20. ಸಂಖ್ಯಾ ಪದ್ಧತಿ, ಅಸರ್ಷನ್ ಟೈಪ್, ಅನಾಲಿಟಿಕಲ್ ರೀಸನಿಂಗ್, ಲಾಜಿಕಲ್ ರೀಸನಿಂಗ್ ಮತ್ತು ಡೇಟಾ ಅನಾಲಿಸಿಸ್‌ಗಳು ಈ ವಿಭಾಗದ ಮುಖ್ಯ ಭಾಗಗಳು. ಈ ವಿಭಾಗಕ್ಕೆ ವಿಶೇಷ ತಯಾರಿ ನಡೆಸಬೇಕಾಗುತ್ತದೆ.

ಸಾಮಾನ್ಯ ಜ್ಞಾನ:
ಇದು ಮ್ಯಾಟ್‌ನ ಪ್ರಶ್ನೆಪತ್ರಿಕೆಯ ಐದನೇ ವಿಭಾಗ. ವ್ಯವಹಾರ ಜಗತ್ತಿನ ಸವಾಲು, ತಯಾರಕರ ಪಂಚ್ ಲೈನ್ ಮತ್ತು ಇತರ ಇದೇ ರೀತಿಯ ಪ್ರಶ್ನೆಗಳಿರುತ್ತವೆ. ಈ ವಿಭಾಗವು ಸ್ಕೋರಿಂಗ್‌ನಲ್ಲಿ ಸೇರಿಕೊಳ್ಳದಿದ್ದರೂ, ಇದನ್ನು ನಿರ್ಲಕ್ಷಿಸುವಂತಿಲ್ಲ. ಕೆಲವು ಮ್ಯಾನೇಜ್‌ಮೆಂಟ್ ಸಂಸ್ಥೆಗಳು ಮತ್ತು ವಿವಿಗಳು ಈ ವಿಭಾಗದ ಸ್ಕೋರಿಗೆ ಹೆಚ್ಚು ಮಹತ್ವ ನೀಡುತ್ತವೆ. ಇದು ಸುಲಭವಾಗಿರುತ್ತದೆಯಾದೆ ಮತ್ತು ವಿದ್ಯಾರ್ಥಿಗಳು ಸಾಧ್ಯವಿದ್ದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುವುದು ಒಳಿತು.

ಮ್ಯಾಟ್ ಪರೀಕ್ಷೆಗಾಗಿ ಕೆಲವು ಸಲಹೆಗಳು:
1. MAT ಎಂಬುದು CAT ಗಿಂತ ಸುಲಭ. CAT ಯಲ್ಲಿ ತೊಡಕಾದರೆ, ಒಂದಿಡೀ ವರ್ಷ ಕಾಯುವ ಬದಲು MAT ಪರೀಕ್ಷೆ ಬರೆದು ಉತ್ತಮ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಅವಕಾಶ ದೊರೆತರೆ ನಿಮ್ಮ ಭವಿಷ್ಯಕ್ಕೇ ಒಳಿತು.
2. MAT ಯಲ್ಲಿ ವಿಭಾಗಗಳಿರುವುದಿಲ್ಲ, ಆದರೆ ಪ್ರಶ್ನೆಗಳು ನಿರ್ದಿಷ್ಟ ಪ್ರಕಾರಕ್ಕೆ ಅನುಗುಣವಾಗಿ ವಿಂಗಡಿಸಲ್ಪಟ್ಟಿರುತ್ತವೆ.
3. MAT ನಲ್ಲಿ ದೊರೆತ ಅಂಕಗಳು ಸಿಇಟಿ-ಮಹಾರಾಷ್ಟ್ರದ ಅನುಸಾರ ಸ್ವೀಕಾರಯೋಗ್ಯ. ಅಂದರೆ ಮಹಾರಾಷ್ಟ್ರೇತರ ವಿದ್ಯಾರ್ಥಿಗಳಿಗೆ ಇದು ಅನುಕೂಲಕರ.
4. ಸಾಮಾನ್ಯ ಜ್ಞಾನವು MATಯದೇ ಭಾಗ. ಆದರೆ ಇದನ್ನು ಒಟ್ಟು ಸ್ಕೋರಿಂಗ್‌ನ ಭಾಗವಾಗಿ ಪರಿಗಣಿಸಲಾಗುವುದಿಲ್ಲ.
5. ಮೇ ಮತ್ತು ಸೆಪ್ಟೆಂಬರ್ ತಿಂಗಳವರೆಗೆ ಹೆಚ್ಚಿನ ಶಿಕ್ಷಣಸಂಸ್ಥೆಗಳು ಮತ್ತು ವಿವಿಗಳು ತಮ್ಮ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಿರುತ್ತವೆ. ಇದಕ್ಕಾಗಿ ಡಿಸೆಂಬರ್ ಅಥವಾ ಫೆಬ್ರವರಿಯಲ್ಲಿ ನಡೆಯುವ MAT ಮೇಲೆ ಹೆಚ್ಚಿನ ಗಮನ ನೀಡಬಹುದು.

ಸಾಧಾರ: PT ಎಜುಕೇಶನ್
ಮತ್ತಷ್ಟು
ಬಿಜೆಪಿಯ ಅಲ್ಪಸಂಖ್ಯಾತರ ಜಪ
ವೆಬ್‌ದುನಿಯಾ ಸಮೀಕ್ಷೆ: ಬಚ್ಚನ್, ಐಶ್, ಮೋದಿ, ಸಾನಿಯಾ ಶ್ರೇಷ್ಠರು
ಸಮೀಕ್ಷೆ -2007: ಹೆಗ್ಗಡೆ, ದ್ರಾವಿಡ್ ಶ್ರೇಷ್ಠರು
ತುತ್ತು ಅನ್ನ, ಬೊಗಸೆ ನೀರು, ಮತ್ತೊಂದು ಕಾರು!
ಸ್ವಪ್ನ ನಗರಿ ದುಃಸ್ವಪ್ನವಾದಾಗ...
ರಾಜಕೀಯ ಹತ್ಯೆಗಳ ತಾಣ ಉಪಖಂಡ