ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪತ್ರಿಕೋದ್ಯಮದಲ್ಲಿ ಕೈಯಾಡಿಸಲಿರುವ ಪ್ರಿನ್ಸ್ ವಿಲಿಯಂ
ಬ್ರಿಟಿಷ್ ಸಿಂಹಾಸನದ ಭಾವೀ ವಾರಸುದಾರ ರಾಜಕುಮಾರ ವಿಲಿಯಮ್ ಈಗ ಸಂವಿಧಾನದ ನಾಲ್ಕನೇ ಆಧಾರ ಸ್ತಂಭದತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಅಂದರೆ ಪತ್ರಿಕೋದ್ಯಮದಲ್ಲಿ ತಮ್ಮ ವೃತ್ತಿಸಾಮರ್ಥ್ಯ ಪರೀಕ್ಷಿಸಲು ನಿರ್ಧರಿಸಿದ್ದಾರೆ.

ಈ ರಾಜಕುಮಾರನನ್ನು ಸಾರ್ವಜನಿಕ ಜೀವನಕ್ಕೆ ಮತ್ತು ಅಂತಿಮವಾಗಿ ಸಿಂಹಾಸನವೇರುವುದಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ವಿಲಿಯಮ್‌ಗೆ ಯಾವುದೆಲ್ಲಾ ವೃತ್ತಿಯ ಅನುಭವ ಒದಗಿಸಬಹುದು ಎಂದು ಯೋಚಿಸುತ್ತಿರುವ ಕ್ಲಿಯರೆನ್ಸ್ ಹೌಸ್ ಚರ್ಚಿಸಿದ ವಿಭಾಗಗಳಲ್ಲಿ ಪತ್ರಿಕೋದ್ಯಮವೂ ಒಂದು.

ಗಾರ್ಡಿಯನ್ ವರದಿ ಪ್ರಕಾರ, ಮಾಧ್ಯಮಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಆತನಿಗೆ ಒಳ್ಳೆಯದು ಎಂದು ಕ್ಲಿಯರೆನ್ಸ್ ಹೌಸ್‌ನಲ್ಲಿ ರಾಜಕುಮಾರನ ಭವಿಷ್ಯ ನಿರ್ಣಯ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ ವಿಲಿಯಮ್, ಡಯಾನಾ ಸಾವಿಗೆ ಕಾರಣ ಎನ್ನಲಾಗುತ್ತಿರುವ 'ಪಾಪರಾಝಿ' ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳು ಕಡಿಮೆ. ಅದರ ಬದಲು ಪ್ರಮುಖ ರಾಷ್ಟ್ರೀಯ ದೈನಿಕವೊಂದರಲ್ಲಿ ಕೆಲಸ ಮಾಡಬಹುದು. ಆತನಿಗೆ ಬೈಲೈನ್ ಕೂಡ ಬಹುತೇಕ ನಿರ್ಧರಿಸಲಾಗಿದೆ. ಆತ ಬರೆಯುವ ಲೇಖನಗಳಿಗೆ 'ವಿಲಿಯಮ್ ವೇಲ್ಸ್' ಎಂಬ ಬೈಲೈನ್ ಬಳಸುವ ಯೋಚನೆ ನಡೆದಿದೆ.

ಈಗಾಗಲೇ ರಾಯಲ್ ಆರ್ಮಿಯಲ್ಲಿ ಸೇವೆ ಸಲ್ಲಿಸಿರುವ ವೇಲ್ಸ್ ರಾಜಕುಮಾರ ವಿಲಿಯಮ್, ಸದ್ಯಕ್ಕೆ ಪೈಲಟ್ ಆಗುವ ನಿಟ್ಟಿನಲ್ಲಿ ಲಿಂಕನ್‌ಶೈರ್‌ನಲ್ಲಿ ರಾಯಲ್ ಏರ್‌ಫೋರ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾನೆ. ವರ್ಷಾಂತ್ಯದಲ್ಲಿ ಆತ ರಾಯಲ್ ನೌಕಾಪಡೆಯಲ್ಲೂ ಕೆಲಸದ ಅನುಭವ ಪಡೆಯಲಿದ್ದಾನೆ.

ಅದರ ನಂತರ ಸಲಹೆಗಾರರು ಆತನಿಗೆ ಮಾನವಾಸಕ್ತಿಯ ಜೀವನದಲ್ಲಿ ತರಬೇತಿ ನೀಡಲು ಬಯಸಿದ್ದು, ಮುಂದೊಂದು ದಿನ ಆತ ಯಾವ ರೀತಿ ದೇಶ ಆಳಬೇಕು ಎಂಬುದನ್ನು ನಿರ್ಧರಿಸುವಲ್ಲಿ ಈ ರೀತಿಯ ಶಿಕ್ಷಣ ಅತ್ಯಗತ್ಯವಾಗಿರುತ್ತದೆ.

ಆತ ಸಶಸ್ತ್ರಪಡೆಗಳ ಬಗ್ಗೆ ತಿಳಿದುಕೊಂಡಿದ್ದಾನೆ. ಈಗ ದೇಶದ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದು ಅಧಿಕಾರಿಗಳು ಹೇಳಿರುವುದನ್ನು ಬ್ರಿಟಿಷ್ ದೈನಿಕ ಗಾರ್ಡಿಯನ್ ವರದಿ ಮಾಡಿದೆ.

ವಿಲಿಯಮ್‌ಗೆ ತರಬೇತಿ ನೀಡಲು ಉದ್ದೇಶಿಸಲಾಗಿರುವ ಇತರ ಆಯ್ಕೆಗಳೆಂದರೆ ವಿದೇಶಾಂಗ ಕಚೇರಿ ಅಥವಾ ಪೌರಸೇವೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಲು ಯಾವುದಾದರೂ ಸರಕಾರಿ ಕಚೇರಿ.
ಮತ್ತಷ್ಟು
ಗಣರಾಜ್ಯೋತ್ಸವ ದಿನಾಚರಣೆಗಾಗಿ ವಿಶೇಷ ಪುಟ
ದೇವೇಗೌಡ್ರ ಮಾತು ಕನ್ನಡಿಗರೆಲ್ಲಾ ಒಪ್ತಾರೆ!
ಮ್ಯಾಟ್: ನಿಖರತೆಯೇ ಇಲ್ಲಿ ಪ್ರಧಾನ!
ಬಿಜೆಪಿಯ ಅಲ್ಪಸಂಖ್ಯಾತರ ಜಪ
ವೆಬ್‌ದುನಿಯಾ ಸಮೀಕ್ಷೆ: ಬಚ್ಚನ್, ಐಶ್, ಮೋದಿ, ಸಾನಿಯಾ ಶ್ರೇಷ್ಠರು
ಸಮೀಕ್ಷೆ -2007: ಹೆಗ್ಗಡೆ, ದ್ರಾವಿಡ್ ಶ್ರೇಷ್ಠರು