ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಧನ ಬೆಲೆ ಏರಿಕೆ: ಅಂತಿಮ ಹೊರೆ ಜನರ ಮೇಲೆ
ಕೇಂದ್ರ ಸರಕಾರವು ಗುರುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸಿದೆ. ಪೆಟ್ರೋಲ್‌ಗೆ 2 ರೂ. ಹಾಗೂ ಡೀಸೆಲ್ ಲೀಟರೊಂದರ 1.15 ರೂ.ನಷ್ಟು ಹೆಚ್ಚಿಸಿರುವುದರಿಂದ ಗ್ರಾಹಕರ ಮೇಲೆ ಹೊಡೆತ ಬಿದ್ದಿರುವುದು ಸಹಜ.

ಟ್ರಾಫಿಕ್ ಜಾಮ್‌ನಿಂದ ಬೇಸುತ್ತು ದ್ವಿಚಕ್ರ ವಾಹನವೇ ಲೇಸು ಅನ್ನುತ್ತಿದ್ದವರೀಗ ವಾಹನ ಮಾರಿ ಬಿಡುವುದೇ ಒಳಿತು ಎನ್ನುವ ನಿರ್ಧಾರ ತಳೆಯುವಷ್ಟು ಬೇಸತ್ತಿದ್ದಾರೆ.

"ತಮಗಿಷ್ಟ ಬಂದ ಸಂದರ್ಭದಲ್ಲಿ ತೈಲ ಬೆಲೆ ಏರಿಕೆ ಮಾಡುತ್ತಾರೆ. ಆದರೆ ಸಂಬಳ ವರ್ಷಕ್ಕೊಮ್ಮೆ ಮಾತ್ರ ಏರುವುದು. ಬೆಲೆ ಏರಿಕೆಯಾದಾಗಲೆಲ್ಲಾ ಸಂಬಳವೂ ಏರುವಂತಿದ್ದರೆ ಬಿಸಿ ತಟ್ಟುತ್ತಿರಲಿಲ್ಲ" ಎಂಬುದು ಬಹುತೇಕ ವಾಹನ ಮಾಲೀಕರ ಅಭಿಪ್ರಾಯ.

ಈ ಮಧ್ಯೆ ತೈಲ ಬೆಲೆ ಹೆಚ್ಚಿಸಿದ ಬೆನ್ನಲ್ಲೆ ಪ್ರಯಾಣದರ ಹೆಚ್ಚುತ್ತದೆ. ಆದರೆ ಒಂದೊಮ್ಮೆ ತೈಲ ಬೆಲೆ ಇಳಿಸಿದರೆ ಇದಾವುದರಲ್ಲಿಯೂ ಇಳಿಕೆ ಕಂಡು ಬರುವುದಿಲ್ಲ. ಎಲ್ಲ ಹೊರೆಯೂ ಪ್ರಯಾಣಿಕರ ಮೇಲೆ ಎಂಬುದು ಜನರ ಗೋಳು.

ಇನ್ನು ಏರಿಕೆ ಬಿಸಿ ಆಟೋ ಚಾಲಕರಿಗೂ ತಪ್ಪಿದ್ದಲ್ಲ. ಇತ್ತೀಚೆಗಷ್ಟೆ ಆಟೋದರದ ಬಗ್ಗೆ ಎದ್ದಿರುವ ವಿವಾದದಿಂದ ಇನ್ನು ಹೊರಬಂದಿರದ ಚಾಲಕರಿಗೆ ತೈಲೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈ ಏರಿಕೆಯಿಂದ ಜೇಬಿಗೆ ಕತ್ತರಿ ಬಿದ್ದಿದೆ, ಜೀವನಕ್ಕೂ ಕಷ್ಟವಾಗುತ್ತದೆ ಎಂಬುದು ಅವರ ಗೋಳು.
ಮತ್ತಷ್ಟು
ಮದುವೆ ವಿಷಯದಲ್ಲೂ ಈತ ಚಿನ್ನದ ಹುಡುಗನೇ
ಪತ್ರಿಕೋದ್ಯಮದಲ್ಲಿ ಕೈಯಾಡಿಸಲಿರುವ ಪ್ರಿನ್ಸ್ ವಿಲಿಯಂ
ಗಣರಾಜ್ಯೋತ್ಸವ ದಿನಾಚರಣೆಗಾಗಿ ವಿಶೇಷ ಪುಟ
ದೇವೇಗೌಡ್ರ ಮಾತು ಕನ್ನಡಿಗರೆಲ್ಲಾ ಒಪ್ತಾರೆ!
ಮ್ಯಾಟ್: ನಿಖರತೆಯೇ ಇಲ್ಲಿ ಪ್ರಧಾನ!
ಬಿಜೆಪಿಯ ಅಲ್ಪಸಂಖ್ಯಾತರ ಜಪ