ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಸು ,ಸುರ್ಜಿತ್ ನಿರ್ಗಮನ: ಹಿರಿಯರ ಯುಗಾಂತ್ಯ
ಜ್ಯೋತಿಬಸು ಹಾಗೂ ಹರಿಕಿಶನ್ ಸಿಂಗ್ ಸುರ್ಜಿತ್ ಅವರು ಪಾಲಿಟ್‌ಬ್ಯೂರೋದಿಂದ ನಿರ್ಗಮಿಸಿರುವುದರೊಂದಿಗೆ,90 ವರ್ಷದ ಇತಿಹಾಸವಿರುವ ಕಮ್ಯೂನಿಸ್ಟ್ ಚಳುವಳಿಯ ಭಾಗವಾದ ಸಿಪಿಐ(ಎಂ)ಪಕ್ಷದ ಒಂಬತ್ತು ಸಂಸ್ಥಾಪಕ ಸದಸ್ಯರ ಯುಗವೊಂದು ಅಂತ್ಯವಾದಂತಾಗಿದೆ.

ಹಿರಿಯ ನಾಯಕ ಜ್ಯೋತಿಬಸು ಪಾಲಿಟ್‌ಬ್ಯೂರೋದ ವಿಶೇಷ ಅತಿಥಿ ಸದಸ್ಯರಾಗಿದ್ದು, ಸಿಐಟಿಯು ಮುಖ್ಯಸ್ಥ ಸಮರ್‌ ಮುಖರ್ಜಿ(95) ಅವರೊಂದಿಗೆ ಹರಿಕಿಶನ್ ಸುರ್ಜಿತ್ ಕೇಂದ್ರ ಸಮಿತಿಯ ವಿಶೇಷ ಅತಿಥಿ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮುಖರ್ಜಿ ಇಂದು ಆರಂಭವಾದ 19ನೇಯ ಸಿಪಿಐ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿದ ಅತಿ ಹಿರಿಯ ವ್ಯಕ್ತಿಯಾಗಿದ್ದಾರೆ.

ಕಮ್ಯೂನಿಸ್ಟ್ ಪಕ್ಷ (ಸಿಪಿಐ) 1921ರಲ್ಲಿ ಆರಂಭವಾಗಿದ್ದು,1964ರಲ್ಲಿ ವಿಭಜನೆಯಾಗಿ ಸಿಪಿಐ(ಎಂ) ಪಕ್ಷವಾಗಿ ಹೊರಹೊಮ್ಮಿತು. 1939ರಲ್ಲಿ ಆರ್. ಉಮಾನಾಥ್ ಹಾಗೂ ಬೆನೊಡೆ ದಾಸ್ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅತಿ ಹೆಚ್ಚು ವರ್ಷಗಳ ಕಾಲ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ.

ಪಶ್ಚಿಮ ಬಂಗಾಲದ ಬೆನೊಡೆ ದಾಸ್ ಪಕ್ಷದ ಮುನ್ನಡೆಗಾಗಿ ನಡೆದ ಹೋರಾಟದಲ್ಲಿ 11ವರ್ಷಕ್ಕಿಂತಲೂ ಹೆಚ್ಚು ಜೈಲು ವಾಸ ಅನುಭವಿಸಿದ್ದಾರೆ.ಉಮಾನಾಥ್ ಅವರನ್ನು ಪಾಲಿಟ್‌ಬ್ಯೂರೋದಿಂದ ಕೇಂದ್ರ ಸಮಿತಿಗೆ ನೇಮಕ ಮಾಡಿ ಪಕ್ಷ ಆದೇಶ ಹೊರಡಿಸಿದೆ.

ಪಕ್ಷದ ಹಿರಿಯ ನಾಯಕರು ಪಾಲಿಟ್‌ಬ್ಯೂರೋದಿಂದ ನಿರ್ಗಮಿಸುವುದರೊಂದಿಗೆ ಪಕ್ಷದ ಮುನ್ನಡೆಯ ಜವಾಬ್ದಾರಿಯನ್ನು ಕಿರಿಯರ ಹೆಗಲಿಗೆ ನೀಡಿದ್ದಾರೆ.

ಪಕ್ಷದ ಕಿರಿಯರ ಸಾಲಿನಲ್ಲಿ ಕೇರಳದ ಶೆಬ್ಬೀರ್ .ಕೆ ಮತ್ತು ಎಂ. ಸ್ವರಾಜ್ 28ರ ಹರೆಯದವರಾಗಿದ್ದು, 27ರ ಹರೆಯದ ರೀಟಾಬ್ರತಾ ಬ್ಯಾನರ್ಜಿ ಅತಿ ಕಿರಿಯ ವೀಕ್ಷಕರಾಗಿದ್ದಾರೆ.

2005ರಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ದೆಹಲಿ ಮೂಲದ ಸೆಹೆಬಾ ಫಾರೂಖಿ 19 ನೇಯ ಸಿಪಿಐ (ಎಂ) ಕಾರ್ಯಾಕಾರಿ ಸಭೆಯಲ್ಲಿ ಪಕ್ಷದೊಂದಿಗೆ ಅತಿ ಕಡಿಮೆ ಅವಧಿಯ ಸಂಪರ್ಕಹೊಂದಿದ ಭಾಗವಹಿಸಿದ ಅತಿಥಿಗಳಲ್ಲಿ ಒಬ್ಬರಾಗಿದ್ದಾರೆ.

19 ನೇಯ ಸಿಪಿಐ(ಎಂ) ಕಾರ್ಯಕಾರಿ ಸಭೆಯಲ್ಲಿ ಒಟ್ಟು 787 ಅತಿಥಿಗಳು ಹಾಗೂ ವೀಕ್ಷಕರು ಭಾಗವಹಿಸಿದ್ದಾರೆ. ಕಳೆದ ಕಾರ್ಯಕಾರಿ ಸಭೆಗೆ ಹೋಲಿಸಿದಲ್ಲಿ ಶೇ ರಷ್ಟು ಹೆಚ್ಚಾಗಿದ್ದು, 87 ಮಹಿಳೆಯರು ಭಾಗವಹಿಸಿದ್ದರು. 718 ಅತಿಥಿಗಳಲ್ಲಿ 69 ವೀಕ್ಷಕರು ಆರು ದಿನಗಳ ಕಾರ್ಯಕಾರಿ ಸಭೆಯಲ್ಲಿ ಪಾಲ್ಗೊಂಡಿದ್ದರು.


ಮತ್ತಷ್ಟು
ತೆಂಡುಲ್ಕರ್ ನಿವೃತ್ತಿ, ಸಿಪ್ಪಿಯಿಂದ ಶೋಲೇ ರಿಮೇಕ್!
'ಹೊಗೆ'ಯ ಬೆಂಕಿಗೆ ಕರುಣಾನಿಧಿಯಿಂದ ತುಪ್ಪ
ಕೊಂಚಕಾಲ ದೂರ ಇರಿ: ದಲ್ಲಾಳಿಗಳ ಸಲಹೆ
ರಾಜ್ಯ ರಾಜಕೀಯದಲ್ಲಿ 'ತ್ರಿಶಂಕು ಸ್ಥಿತಿ'
ದುರ್ಬಲವಾಗುತ್ತಿರುವ ಶೇರು ವ್ಯವಹಾರ
ತೆರಿಗೆ ಉಳಿತಾಯಕ್ಕೆ ಬಂಡವಾಳ ಹೂಡಿಕೆಯೇ ಪರಿಹಾರ