ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿರೀಕ್ಷಿಸಿ... ವೆಬ್‌ದುನಿಯಾ ಬದಲಾಗುತ್ತಿದೆ...!  Search similar articles
ಬದಲಾವಣೆಯೇ ಜಗದ ನಿಯಮ...

ಭಾರತದ ಮೊದಲ ಬಹುಭಾಷಾ ಪೋರ್ಟಲ್, ನಿಮ್ಮ ಮೆಚ್ಚಿನ ವೆಬ್‌ದುನಿಯಾ ಡಾಟ್ ಕಾಂ ತನ್ನ ಒಂಬತ್ತು ವರ್ಷಗಳ ಪ್ರಗತಿಯ ಪಥದಲ್ಲಿ ಅದೆಷ್ಟೋ ಮಜಲುಗಳನ್ನು ದಾಟಿ ಬಂದಿದೆ. ಕನ್ನಡ ಸಹಿತ ದೇಶದ ಒಂಬತ್ತು ಭಾಷೆಗಳಲ್ಲಿ ಸೇವೆಗಳನ್ನು ಒದಗಿಸುತ್ತಿರುವ ವೆಬ್‌ದುನಿಯಾ ಇದೀಗ ಓದುಗರು, ಅಭಿಮಾನಿಗಳು ಪ್ರೀತಿಯಿಟ್ಟು ನೀಡಿದ ಸಲಹೆ ಸೂಚನೆಗಳ ಮೇರೆಗೆ ತನ್ನ ವಿನ್ಯಾಸವನ್ನು ಬದಲಾಯಿಸಿಕೊಳ್ಳಲಿದ್ದು, ಇದು ನಮ್ಮ ಅಭಿಮಾನಿ ಓದುಗ ವರ್ಗಕ್ಕೆ ಇಷ್ಟವಾಗಬಹುದು ಎಂಬುದು ನಮ್ಮ ಅನಿಸಿಕೆ.

ಈಗಾಗಲೇ ಜಗತ್ತಿನಾದ್ಯಂತ ಕನ್ನಡಿಗರ ಮನೆ-ಮನ ಗೆದ್ದಿರುವ ವೆಬ್‌ದುನಿಯಾ, ಓದುಗರ ಇಷ್ಟಗಳಿಗೆ ಯಾವತ್ತೂ ಸ್ಪಂದಿಸುತ್ತಿದ್ದು, ಅವರಿಗೆ ಹೊಸದೇನಾದರೂ ನೀಡಬೇಕೆಂಬ ನಮ್ಮ ತುಡಿತವನ್ನು ಈಡೇರಿಸುವಲ್ಲಿ ಇದೊಂದು ಪ್ರಯತ್ನ.

ಒಂದು ವರ್ಷದ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿರುವ 'ವೆಬ್‌ದುನಿಯಾ ಕನ್ನಡ', ಹೊಸ ಬಣ್ಣ, ಹೊಸ ವಿನ್ಯಾಸ, ಹೊಸ ರೂಪ, ಹೊಚ್ಚ ಹೊಸ ಆಯ್ಕೆಗಳೊಂದಿಗೆ ನಿಮ್ಮೆದುರಿಗೆ ಬರಲಿದೆ. ಇದರ ಹಿಂದೆ ವೆಬ್‌ದುನಿಯಾ ತಂಡದ ನಿರಂತರ ಪರಿಶ್ರಮ ಇದ್ದೇ ಇದೆ. ಅದಕ್ಕೂ ಹೆಚ್ಚು ಪ್ರಬುದ್ಧ ಓದುಗರಾದ ನಿಮ್ಮ ಅಮೂಲ್ಯ ಸಲಹೆಗಳಿವೆ, ಟೀಕೆಗಳಿವೆ, ಟಿಪ್ಪಣಿಗಳಿವೆ. ಬದಲಾವಣೆಗಳಿಗೆ ಸ್ಪಂದಿಸುತ್ತಾ ನೀವೇ ನಮ್ಮ ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದೀರಿ ಎಂಬುದಕ್ಕೆ ನಾವಂತೂ ಕೃತಜ್ಞರು, ನಿಮ್ಮ ಅಭಿಮಾನವೇ ನಮಗೆ ಪ್ರೇರಣೆ ಎಂದು ಈ ಸಂದರ್ಭದಲ್ಲಿ ನಾವು ಹೇಳಲಿಚ್ಛಿಸುತ್ತೇವೆ.

ಸದ್ಯಕ್ಕೆ ಈ ಬದಲಾವಣೆಯು ನಮ್ಮ ಮುಖ ಪುಟಕ್ಕಷ್ಟೇ ಸೀಮಿತವಾಗಿರುತ್ತದೆ. ಹೊಸ ವಿನ್ಯಾಸದಲ್ಲಿ ಓದುಗರಿಗೆ ವೆಬ್‌ದುನಿಯಾದ ಹೂರಣಗಳಿಗೆ ಸುಲಭವಾಗಿ ಅರಿತು ಓದುವಂತಹ ಅವಕಾಶಗಳಿವೆ. ಒಳಗಿನ ಪುಟಗಳನ್ನು ಸುಲಭವಾಗಿ ಪ್ರವೇಶಿಸುವ ನೇರ ದಾರಿಗಳಿರುತ್ತವೆ. ಇದರೊಂದಿಗೆ ನಮ್ಮ ಇತರ ಸೇವೆಗಳಾದ ವೆಬ್‌ದುನಿಯಾ ಮೇಲ್, ಗೇಮ್ಸ್, ಕ್ವೆಸ್ಟ್, ಬ್ಲಾಗ್, ಜ್ಯೋತಿಷ್ಯ, ಶುಭಾಶಯಪತ್ರ ಮುಂತಾದವುಗಳೂ ಆಕರ್ಷಕ ರೂಪದೊಂದಿಗೆ ನಿಮಗೆ ಲಭ್ಯವಾಗಲಿವೆ. ಇವುಗಳೆಲ್ಲ ಮುಖಪುಟದಲ್ಲೇ ಸುಲಭವಾಗಿ ನಿಮ್ಮನ್ನು ಆಕರ್ಷಿಸಲಿವೆ.

ವೆಬ್‌ದುನಿಯಾದ ಈ ಹೊಸತನಕ್ಕೆ ನಮ್ಮ ಓದುಗರಿಗೆ ಧನ್ಯವಾದ ಸಲ್ಲಬೇಕಾದ್ದು ನಿಸ್ಸಂಶಯ. ನಿಮ್ಮ ಸಲಹೆಗಳಿಂದಲೇ ಮೂಡಿಬಂದಿರುವ ಈ ಹೊಸ ಮುಖಪುಟ ನಿಮಗೆ ಇಷ್ಟವಾಗಬಹುದು ಎಂಬುದು ನಮ್ಮ ನಿರೀಕ್ಷೆ. ಇನ್ನು ಸ್ವಲ್ಪವೇ ಕಾಯಿರಿ. ನಾವು ಹೊಸತನದ ಹೊಸರೂಪದೊಂದಿಗೆ ನಿಮ್ಮೆದುರು ಕಾಣಿಸಿಕೊಳ್ಳಲಿದ್ದೇವೆ.

ಮತ್ತೊಮ್ಮೆ ಧನ್ಯವಾದ!
-ಸಂಪಾದಕ
ಮತ್ತಷ್ಟು
ಜನರ ಚಡಪಡಿಕೆಯ ಬೆಂಕಿಗೆ ಪೆಟ್ರೋಲ್!
ಹೊಸ ಸರಕಾರ: ನಿರೀಕ್ಷೆಗಳು ಸಾವಿರ
ನಗರ ಸಭೆಯಿಂದ ಮುಖ್ಯಮಂತ್ರಿ ಗಾದಿಯವರೆಗೆ...  
ಗೆದ್ದ ಮತದಾರ; ಸೋತ ಕುತಂತ್ರ
ಪ್ರೇಮ, ಕಾಮ, ಆಡಂಬರ: ನರಕವಾಗುತ್ತಿದೆ ನಗರ
ಪ್ರಶ್ನೆ ನಿಮ್ಮದು, ಉತ್ತರ ನಿಮ್ಮದು!