ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೀರ ಯೋಧ, ಶ್ರೇಷ್ಠ ವ್ಯಕ್ತಿ ಮಣಿಕ್‌ಶಾ  Search similar articles
ND
ಅಮೃತಸರದ ಪಾರ್ಸಿ ಕುಟುಂಬವೊಂದರಲ್ಲಿ 1914ರ ಏಪ್ರಿಲ್ 3ರಂದು ಜನಿಸಿದ ಸಾಮ್ ಬಹದ್ದೂರ್ ಎಂದೇ ಪ್ರಸಿದ್ಧವಾಗಿದ್ದ ಸಾಮ್ ಹಾರ್ಮುಸ್‌ಜಿ ಪ್ರಾಮ್‌ಜಿ ಜಮ್‌ಶೇಡ್‌ಜಿ ಮಣಿಕ್‌ಶಾ ಶಾಲಾಜೀವನವನ್ನು ಅಮೃತಸರದಲ್ಲಿ ಕಳೆದು, ಕಾಲೇಜು ಶಿಕ್ಷಣವನ್ನು ನೈನಿತಾಲ್‌ನ ಶೇರ್‌ವುಡ್ ಕಾಲೇಜಿನಲ್ಲಿ ಪಡೆದರು. 1932ರಲ್ಲಿ ಅವರು ಭಾರತೀಯ ಸೇನೆ ಸೇರಿದರು.

ಆನಂತರ, ಇಂಡಿಯನ್ ಮಿಲಿಟರಿ ಆಕಾಡೆಮಿಯಿಂದ ಉತ್ತೀರ್ಣರಾಗಿ ರಾಯಲ್ ಸ್ಕೌಟ್ಸನಲ್ಲಿ ದ್ವಿತೀಯ ಲೆಫ್ಟಿನೆಂಟ್ ಆಗಿ ನಿಯುಕ್ತರಾದರು. ಬಳಿಕ 12ನೆ ಫ್ರಾಂಟಿಯರ್ ಫೋರ್ಸ್ ರೈಫಲ್ಸ್ ಸೇರ್ಪಡೆಯಾದರು.

ಒಬ್ಬ ಯೋಧನಾಗಿ ಅವರ ಜೀವನದ ಮೊದಲ ಸಂತೋಷದ ಕ್ಷಣ, ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಒದಗಿಬಂತು. ಆ ಸಮಯ ಅವರು ಬರ್ಮಾ ಕಾರ್ಯಾಚರಣೆಯಲ್ಲಿ ನಿರತರಾದರು ಮತ್ತು ಜಪಾನ್ ಸೇನೆಯ ವಿರುದ್ಧ ಪ್ರತ್ಯಾಕ್ರಮಣ ನಡೆಸಿದ ಸಂದರ್ಭದಲ್ಲಿ ಯುದ್ಧ ಭೂಮಿಯಲ್ಲಿ ಗಾಯಗೊಂಡರು. ಅವರು ಯುದ್ಧಭೂಮಿಯಲ್ಲಿ ಗಾಯಗೊಂಡಿದ್ದಾಗ ಅವರಿಗೆ ಮಿಲಟರಿ ಕ್ರಾಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಾಗಾಲ್ಯಾಂಡ್‌ ಗಲಭೆಯ ಯಶಸ್ವಿ ನಿರ್ವಹಣೆಗಾಗಿ ಅವರಿಗೆ 1968ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1969ರ ಜೂನ್ 7ರಂದು ಅವರು ಭಾರತೀಯ ಸೇನೆಯ ಅಧಿಕಾರ ವಹಿಸಿಕೊಂಡರು.

1971ರಲ್ಲಿ ಪೂರ್ವ ಪಾಕಿಸ್ತಾನದಿಂದ ಭಾರತಕ್ಕೆ ನಿರಾಶ್ರಿತರ ಒಳನುಸುಳುವಿಕೆಯ ಪರಿಸ್ಥಿಯು ಪೂರ್ಣ ಪ್ರಮಾಣದ ಯುದ್ಧವಾಗಿ ಪರಿವರ್ತಿತವಾದಾಗ ಮಿಲಿಟರಿಯಲ್ಲಿ ಮಣಿಕ್‌ಶಾರ ದೀರ್ಘ ಅನುಭವಕ್ಕೆ ಸವಾಲು ಎದುರಾಗಿದ್ದು ಅವರು ಅದನ್ನು ಸಮರ್ಥವಾಗಿ ಎದುರಿಸಿದರು.

ಈ ಸಂದರ್ಭದಲ್ಲಿ ಸೇನೆಯನ್ನು ಹುರಿದುಂಬಿಸುವುದರೊಂದಿಗೆ ನುರಿತ ಯುದ್ಧ ತಂತ್ರ ಹೂಡಿ ತಮ್ಮ ಅಸಾಧರಣ ಸಾಮರ್ಥ್ಯ ಮೆರೆಯುವ ಮೂಲಕ ವಿಜಯದ ರೂವಾರಿಯಾಗಿದ್ದರು. ಕೇವಲ 14 ದಿನಗಳಲ್ಲಿ ಪಾಕಿಸ್ತಾನವು ಷರತ್ತಿಲ್ಲದೆ ಶರಣಾಗಿತ್ತು.

ದೇಶಕ್ಕಾಗಿ ತಮ್ಮ ನಿಸ್ವಾರ್ಥ ಸೇವೆಗಾಗಿ 1972ರಲ್ಲಿ ಪದ್ಮ ವಿಭೂಷಣದಿಂದ ಗೌರವಿಸಲ್ಪಟ್ಟ ಶ್ರೀಯುತರು ಜನವರಿ 1,1973ರಂದು ಫೀಲ್ಡ್ ಮಾರ್ಷಲ್ ಆಗಿ ನಿಯುಕ್ತರಾಗಿದ್ದರು. ನಾಲ್ಕು ದಶಕಗಳ ಕಾಲ ಮಿಲಿಟರಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಜನವರಿ15,1973ರಲ್ಲಿ ಮಿಲಿಟರಿ ಸೇವೆಯಿಂದ ನಿವೃತ್ತರಾದರು.

ತದನಂತರ ಆನೇಕ ಸಂಸ್ಥೆಗಳಲ್ಲಿ ಯಶಸ್ವಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಲ್ಲದೆ, ಪಾರ್ಸಿ ಮತ್ತು ಜೊರಾಸ್ಟ್ರಿಯನ್ ಸಾಂಸ್ಕೃತಿಕ ಉಳಿವಿಗಾಗಿ ಯುನೆಸ್ಕೊದ ಪಾರ್‌ಜೊರ್ ಯೋಜನೆಯ ಆಜೀವನ ಪ್ರೋತ್ಸಾಹಕರಾಗಿದ್ದರು.

ಸುದೀರ್ಘ ಕಾಲ ಅರ್ಥಪೂರ್ಣ ಬದುಕು ನಡೆಸಿದ ಸಾಮ್ ಬಹಾದ್ದೂರ್ ಅವರು ಗುರುವಾರ ತಡರಾತ್ರಿ ವಿಧಿವಶರಾಗಿದ್ದು, ಅವರ ಮರಣದಿಂದ ಮುಖ್ಯವಾದ ಕಾಲಘಟ್ಟವೊಂದು ಕೊನೆಗೊಂಡಂತಾಗಿದೆ.
ಮತ್ತಷ್ಟು
ಭಾರತೀಯ ನೃತ್ಯಕ್ಕೆ ಜಾಗತಿಕ ಮನ್ನಣೆ ದೊರಕಿಸಿದ ಗುರು ಗೋಪೀನಾಥ್  
ವೆಬ್‌ದುನಿಯಾ ಬದಲಾಗಿದೆ...
ನಿರೀಕ್ಷಿಸಿ... ವೆಬ್‌ದುನಿಯಾ ಬದಲಾಗುತ್ತಿದೆ...!
ಜನರ ಚಡಪಡಿಕೆಯ ಬೆಂಕಿಗೆ ಪೆಟ್ರೋಲ್!
ಹೊಸ ಸರಕಾರ: ನಿರೀಕ್ಷೆಗಳು ಸಾವಿರ
ನಗರ ಸಭೆಯಿಂದ ಮುಖ್ಯಮಂತ್ರಿ ಗಾದಿಯವರೆಗೆ...