ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೀವು ಪ್ರಧಾನಿಯಾದರೆ?....  Search similar articles
WD
ಯಾವತ್ತಿದ್ದರೂ ನೀವು ದೇಶದ ಪ್ರಧಾನಿಯಾಗುವ ಬಗ್ಗೆ ಕನಸು ಕಂಡಿದ್ದೀರಾ? ಇದೋ, ನಿಮಗೊಂದು ಅವಕಾಶ. ನೀವು ಕೂಡ ಈ ಭಾರೀ ಹೊಣೆಗಾರಿಕೆಯ, ಬೆಂಕಿಯಷ್ಟು ಬಿಸಿಯಾಗಿರುವ ಸ್ಥಾನದಲ್ಲಿ ಕೂರಬಹುದು. ಬಜೆಟ್ ಮತ್ತು ಜನಸಾಮಾನ್ಯರ ನಡುವೆ ಸಮತೋಲನ ಸಾಧಿಸುವುದು ಹೇಗೆಂಬುದನ್ನು ತಿಳಿಯಬಹುದು.

ನೀವೇ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಥಾನದಲ್ಲಿದ್ದರೆ ಏನು ಮಾಡುವಿರಿ ಅಂತ ಯೋಚಿಸಿ. ವೆಬ್‌ದುನಿಯಾ ಹೊಸದಾಗಿ ಬಿಡುಗಡೆ ಮಾಡಿರುವ ಆ ಆನ್‌ಲೈನ್ ಗೇಮ್‌ನಲ್ಲಿ ಜನ ಸಾಮಾನ್ಯರು ಕೆಳಗೆ ಬೀಳದಂತೆ ನೋಡಿಕೊಳ್ಳುವುದು ಪ್ರಧಾನಿಯಾಗಲಿರುವ ನಿಮ್ಮ ಜವಾಬ್ದಾರಿ.

ಈಗ ನಿಮಗಿರುವ ಸವಾಲೆಂದರೆ, ಫಲಕದಲ್ಲಿ ಇತರ ವಿಷಯಗಳನ್ನು ಬಿಟ್ಟು ಬಿಡುತ್ತಾ, ಸಾಮಾನ್ಯ ಜನರನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು. ಬಜೆಟ್ ಎಂದರೆ ‘ಫಲಕ’ ಹಾಗೂ “ಸಾಮಾನ್ಯ ಜನ” ಎಂದರೆ ಫಲಕದಲ್ಲಿರುವ ವ್ಯಕ್ತಿ ಎಂದು ತಿಳಿದುಕೊಳ್ಳೋಣ. ಆದರೆ ನೆನಪಿರಲಿ, ಪ್ರಧಾನಮಂತ್ರಿಯಾಗುವುದು ಮಕ್ಕಳಾಟವಲ್ಲ. ನೀವು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಗೆ ನೀವು ಜವಾಬ್ದಾರಿ ವಹಿಸಬೇಕಾಗುತ್ತದೆ.

ಸಾಮಾನ್ಯ ವ್ಯಕ್ತಿಯ ಬಗ್ಗೆ ಜಾಗರೂಕರಾಗಿರಿ, ಏಕೆಂದರೆ ಇತ್ತೀಚಿನ ಪೆಟ್ರೋಲ್ ಬೆಲೆಗಳ ಏರಿಕೆ ಬಗ್ಗೆ ಅವರು ಆಕ್ರೋಶಗೊಂಡಿದ್ದಾರೆ. ಎಚ್ಚರದಿಂದಿರಿ, ಸಾಮಾನ್ಯ ಜನರು ಫಲಕದ ಮೇಲೆ ಬೀಳದಂತೆ ಎಚ್ಚರವಹಿಸಿ, ಇಲ್ಲದಿದ್ದಲ್ಲಿ ನಿಮ್ಮ ಆಟ ಮುಗಿದು ಹೋಗುತ್ತದೆ. ಫಲಕದಿಂದ ಕೆಳಬೀಳಿಸುವ ಪ್ರತಿಯೊಂದು ವಸ್ತುವಿಗೂ ನೀವು 100 ಅಂಕಗಳನ್ನು ಪಡೆದುಕೊಳ್ಳುತ್ತೀರಿ. ನೀವು ಗೆಲ್ಲುತ್ತೀರೋ ಅಥವಾ ಸೋಲುತ್ತೀರೋ ಎಂದು ನೋಡೋಣ!

ಆಟವಾಡುವುದು ಹೇಗೆ? ಫಲಕವನ್ನು ಸಮತೋಲನದಲ್ಲಿರಿಸಲು ಕರ್ಸರ್ ಅನ್ನು ಫಲಕದ ಮೇಲೆ ಅಡ್ಡವಾಗಿ ಚಲಿಸಿ. ಉದಾಹರಣೆಗೆ, ಬಲಭಾಗದಲ್ಲಿ ಫಲಕವನ್ನು ಮೇಲಕ್ಕೆ ಎತ್ತಲು ಕರ್ಸರನ್ನು ಬಲಭಾಗಕ್ಕೆ ಚಲಿಸಿ ಫಲಕವನ್ನು ಬಲಗಡೆಗೆ ವಾಲಿಸಬೇಕಾದರೆ ಕರ್ಸರನ್ನು ಎಡಗಡೆಗೆ ಚಲಿಸಿ.

ಈ ಆಟ ಆಡಬೇಕಿದ್ದರೇ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು
ವೀರ ಯೋಧ, ಶ್ರೇಷ್ಠ ವ್ಯಕ್ತಿ ಮಣಿಕ್‌ಶಾ
ಭಾರತೀಯ ನೃತ್ಯಕ್ಕೆ ಜಾಗತಿಕ ಮನ್ನಣೆ ದೊರಕಿಸಿದ ಗುರು ಗೋಪೀನಾಥ್  
ವೆಬ್‌ದುನಿಯಾ ಬದಲಾಗಿದೆ...
ನಿರೀಕ್ಷಿಸಿ... ವೆಬ್‌ದುನಿಯಾ ಬದಲಾಗುತ್ತಿದೆ...!
ಜನರ ಚಡಪಡಿಕೆಯ ಬೆಂಕಿಗೆ ಪೆಟ್ರೋಲ್!
ಹೊಸ ಸರಕಾರ: ನಿರೀಕ್ಷೆಗಳು ಸಾವಿರ