ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣ್ಣ-ತಮ್ಮಂದಿರ ಜಗಳದಲ್ಲಿ ಎಸ್ಪಿ ನಲುಗೀತಾ?  Search similar articles
PTI
ನಂಬಿದ ದೇವರೇ ಇಲ್ಲ ಎಂದರೆ ನಂಬಿದವನ ಪರಿಸ್ಥಿತಿ ಏನಾಗಬೇಡ? ಇದೇ ಪರಿಸ್ಥಿತಿಯನ್ನು ಕಾಂಗ್ರೆಸ್ ಇಂದು ಎದುರಿಸುತ್ತಿದೆ. ಸಂಸತ್ತಿನಲ್ಲಿ ಮಂಡಿಸಲಿರುವ ವಿಶ್ವಾಸ ಮತಯಾಚನೆಯಿಂದ ಪಾರಾಗಲು ಸಮಾಜವಾದಿ ಪಕ್ಷವನ್ನು ಕಾಂಗ್ರೆಸ್ ನಂಬಿ ಕುಳಿತಿದೆ. ಆದರೆ ಕಾರ್ಪೋರೇಟ್ ಜಗತ್ತಿನ ದೈತ್ಯ ಮುಖೇಶ್ ಅಂಬಾನಿಗೆ ಆಶ್ರಯ ನೀಡಿ, ಆಶ್ರಯ ಪಡೆದಿರುವ ಸಮಾಜವಾದಿ ಅವರ ಕೈಯಿಂದಲೇ ಹೋಳಾಗುವ ಸಾಧ್ಯತೆ ಇದೆ.

ತನ್ನ ಕಿರಿಯ ಸಹೋದರ ಅನಿಲ್ ಅಂಬಾನಿಯೊಂದಿಗೆ ಹೊಂದಿರುವ ಬದ್ಧ ವೈರತ್ವವೇ ಸಮಾಜವಾದಿ ಪಕ್ಷವನ್ನು ಒಡೆಯುವುದಕ್ಕೆ ಮುಖೇಶ್ ಅಂಬಾನಿಗೆ ಕಾರಣವಾಗಿರಬಹುದು. ಅನಿಲ್ ಅಂಬಾನಿ, ಸೋನಿಯಾ ಗಾಂಧಿ ಅವರ ವಿಶೇಷ ಕೃಪಾಕಟಾಕ್ಷಕ್ಕೆ ಪಾತ್ರರಾದ ವ್ಯಕ್ತಿ. ಹೀಗಾಗಿ ಅವರ ಒಡೆತನದಲ್ಲಿ ಇರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ವಿಶೇಷ ತೆರಿಗೆ ಸೌಲಭ್ಯಗಳನ್ನು ಪಡೆದುಕೊಳ್ಳುತ್ತದೆ. ಒಂದು ವೇಳೆ ಯುಪಿಎ ಸರಕಾರ ನಿರಾಂತಕವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಸಫಲವಾದಲ್ಲಿ ಅನಿಲ್ ಅಂಬಾನಿಗೆ ದೊರೆಯುತ್ತಿರುವ ವಿಶೇಷ ತೆರಿಗೆ ಸೌಲಭ್ಯಗಳು ಅಡೆತಡೆ ಇಲ್ಲದೇ ಮುಂದುವರಿಯುತ್ತವೆ. ಇದು ಅಣ್ಣನಾಗಿರುವ ಮುಖೇಶ್ ಅಂಬಾನಿಗೆ ಬೇಡ. ಅಣ್ಣ-ತಮ್ಮಂದಿರ ಜಗಳದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಹಾಳಾಯಿತಂತೆ ಎಂಬುದು ಸಾಂದರ್ಭಿಕ ರಾಜಕೀಯ ಗಾದೆಯಾಗಬಹುದು.
PTI


ಮುಖೇಶ್ ಅಂಬಾನಿಯವರ ಸೂಚನೆಯನುಸಾರ ನಾಗರಿಕ ಅಣು ಶಕ್ತಿ ಒಪ್ಪಂದದ ವಿಚಾರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಮುನ್ನ ಸಮಾಜವಾದಿ ಪಕ್ಷ ಕೆಲ ಷರತ್ತುಗಳನ್ನು ವಿಧಿಸಿದೆ. ಅದರಲ್ಲಿಯೂ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರಿಯನ್ನು ಸಮಾಜವಾದಿ ಪಕ್ಷ ಗುರಿಯಾಗಿರಿಸಿದ್ದು ಗುಟ್ಟಾಗಿ ಉಳಿದಿರುವ ವಿಚಾರವೇನಲ್ಲ. ಎಸ್ಪಿಯ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಅವರಂತೂ ನೇರವಾಗಿ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವೊರಾರನ್ನು ಸಚಿವ ಸಂಪುಟದಿಂದ ಕೈಬಿಡಲೇ ಬೇಕು ಎಂದು ಷರತ್ತು ವಿಧಿಸಿದ್ದಾರೆ. ದೇವೊರಾ ಅನಿಲ್ ಅವರ ರೀಲ್‌ನ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ರಪ್ತು ಆಧಾರಿತ ಉದ್ದಿಮೆ ಎಂಬ ಮಾನ್ಯತೆಯ ರದ್ದು ಮತ್ತು ಖಾಸಗಿ ಪೆಟ್ರೋಲಿಯಂ ಸಂಸ್ಕರಣಾ ಘಟಕಗಳ ಮೇಲೆ ಶೇ 50ರಷ್ಟು ಲಾಭದ ತೆರಿಗೆ ವಿಧಿಸಬೇಕು ಎಂದು ಹೇಳಿದ್ದಾರೆ. ಒಟ್ಚಿನಲ್ಲಿ ಅನಿಲ್ ಅಂಬಾನಿಯವರನ್ನು ಹಣಿಯುವುದಕ್ಕೆ ಅಮರ್ ಸಿಂಗ್ ಇಲ್ಲವೇ ಸಮಾಜವಾದಿ ಪಕ್ಷವನ್ನು ಮುಂದಿಟ್ಟುಕೊಂಡು ಮುಖೇಶ್ ಅಂಬಾನಿ ಕಾರ್ಯತಂತ್ರ ರೂಪಿಸುತ್ತಿದ್ದಾರೆನ್ನಲಾಗುತ್ತಿದೆ.

ರಾಜಕೀಯ ದಾಳಗಳು ಮತ್ತು ಸಮೀಕರಣಗಳು ಬದಲಾಗುತ್ತಿದ್ದಂತೆ, ಕಾಂಗ್ರೆಸ್ ಕೂಡ ಅಧಿಕಾರವನ್ನು ಅನುಭವಿಸಬೇಕು ಎನ್ನುವ ಒಂದೇ ಉದ್ದೇಶದಿಂದ ರೀಲ್‌ಗೆ ಸೇರಿದ್ದ ಏರ್ ಬಸ್ ಎ-319 ಮತ್ತು ಫಾಲ್ಕನ್ 900 ವಿಮಾನಗಳನ್ನು 57 ಕೋಟಿ ರೂಗಳ ಸುಂಕ ಬಾಕಿ ಇದೆ ಎಂದು ಕೇಂದ್ರ ಸರಕಾರ ಜಪ್ತಿ ಮಾಡಿಕೊಂಡಿದೆ.

ತನ್ನ ಪಕ್ಷದ ಮುಖೇಶ್ ಅಂಬಾನಿ ಅವರ ಕಾರ್ಪೋರೇಟ್ ಜಗತ್ತು ವಿಸ್ತರಿಸುವುದಕ್ಕೆ ನೆರವು ನೀಡುವ ನಿಟ್ಟಿನಲ್ಲಿ, ಅವರ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕಾಗಿ (3ಜಿ ಸ್ಪೆಕ್ಟ್ರಮ್) ಪರವಾನಗಿ ನೀಡಬೇಕು ಎಂದು ಕೇಳಿಕೊಂಡಿದ್ದು, ಈ ಮೂಲದಿಂದ ಕೇಂದ್ರ ಸರಕಾರಕ್ಕೆ 43ರಿಂದ 52 ಸಾವಿರ ಕೋಟಿ ರೂಗಳ ತೆರಿಗೆ ಸಂದಾಯ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಾಯ್ದುಕೊಂಡರೂ ಅಣ್ಣ-ತಮ್ಮಂದಿರ ಹಗ್ಗ ಜಗ್ಗಾಟದಲ್ಲಿ ಎಷ್ಟು ಕಾಲ ಬಾಳಬಹುದು ಎಂಬ ಪ್ರಶ್ನೆ ಉದ್ಭವಿಸಿದೆ. ಸರಕಾರ ಬದುಕಲು ಅವಕಾಶ ನೀಡಿದರೂ, ಅಣ್ಣತಮ್ಮಂದಿರಿಬ್ಬರೂ ಅದರಿಂದ ಪ್ರಯೋಜನ ಪಡೆಯುವುದಂತೂ ಖಂಡಿತ ಎಂಬುದರಲ್ಲಿ ಎರಡು ಮಾತಿಲ್ಲ!
ಮತ್ತಷ್ಟು
ಗೌಡ್ರ ಕಣ್ಣು ಕೇಂದ್ರದ್ ಮ್ಯಾಗೆ...!
ನೀವು ಪ್ರಧಾನಿಯಾದರೆ?....
ವೀರ ಯೋಧ, ಶ್ರೇಷ್ಠ ವ್ಯಕ್ತಿ ಮಣಿಕ್‌ಶಾ
ಭಾರತೀಯ ನೃತ್ಯಕ್ಕೆ ಜಾಗತಿಕ ಮನ್ನಣೆ ದೊರಕಿಸಿದ ಗುರು ಗೋಪೀನಾಥ್  
ವೆಬ್‌ದುನಿಯಾ ಬದಲಾಗಿದೆ...
ನಿರೀಕ್ಷಿಸಿ... ವೆಬ್‌ದುನಿಯಾ ಬದಲಾಗುತ್ತಿದೆ...!