ಆನ್‌ಲೈನ್ ಪತ್ರಿಕೋದ್ಯಮದ ಕನಸು ಕಾಣುತ್ತಿರುವವರಿಗಾಗಿ ಇದೋ ಒಂದು ಅವಕಾಶ. ಅಂತರ್ಜಾಲ ಜಗತ್ತಿನಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಹೊಸ ಸುಳಿಗಾಳಿ, 9 ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ "ವೆಬ್‌ದುನಿಯಾ"ದ ಕನ್ನಡ ಅಂತರ್ಜಾಲ ತಾಣ ವಿಭಾಗದಲ್ಲಿ ಉಪಸಂಪಾದಕರ ಹುದ್ದೆಗಳು ಖಾಲಿ ಇವೆ. ಕೆಲಸ ಮಾಡಬೇಕಿರುವುದು ಚೆನ್ನೈಯಲ್ಲಿ ಎಂಬುದನ್ನು ಮೊದಲೇ ಹೇಳಿಬಿಡುತ್ತೇವೆ.ನಮಗ್ಯಾರು ಬೇಕು?ಕನ್ನಡ ಭಾಷೆಯ ಮೇಲೆ ಹಿಡಿತ ಬೇಕೇ ಬೇಕು ಎಂಬುದು ನಿರ್ವಿವಾದ. ಜತೆಗೆ, ಇಂಗ್ಲಿಷ್ ಮಾತನಾಡಲು ಬಾರದಿದ್ದರೂ, ಸರಿಯಾಗಿ ಅರ್ಥೈಸಿಕೊಳ್ಳುವುದು ಕೂಡ ಅಷ್ಟೇ ಕಡ್ಡಾಯ. ಇಂಗ್ಲಿಷಿನಿಂದ ಕನ್ನಡಕ್ಕೆ ಸುದ್ದಿಗಳನ್ನು, ಮಾಹಿತಿಗಳನ್ನು ಸುಲಲಿತವಾಗಿ ತರ್ಜುಮೆ ಮಾಡಬಲ್ಲವರನ್ನೇ ನಾವು ಹುಡುಕುತ್ತಿರುವುದು. ಕನಿಷ್ಠ ಒಂದು ವರ್ಷ ಅನುಭವವಿದ್ದವರಾದರೆ ಅತ್ಯುತ್ತಮ ಮತ್ತು "ಖಂಡಿತವಾಗಿ ನಾನಿದನ್ನು ಮಾಡಬಲ್ಲೆ" ಎಂಬ ಆತ್ಮವಿಶ್ವಾಸವಿರುವ ಹೊಸಬರು ಕೂಡ ಅರ್ಜಿ ಗುಜರಾಯಿಸಬಹುದು.ಹೇಗಿರಬೇಕು?ರಾಜ್ಯದಲ್ಲಿ, ದೇಶದಲ್ಲಿ, ನಮ್ಮ ಸುತ್ತಲಿನ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದರ ಅರಿವಿರಬೇಕು. ಹೊಸ ಹೊಸ ಸುದ್ದಿ ತಿಳಿದುಕೊಳ್ಳುವ, ತಿಳಿಸುವ ಆಸಕ್ತಿಯಿರಬೇಕು. ತಮಿಳರ ನಾಡಿನಲ್ಲಿದ್ದುಕೊಂಡೂ ಕನ್ನಡದ ಹೆಸರಲ್ಲಿ ದುಡಿಯಬಲ್ಲೆ, ಕನ್ನಡಕ್ಕಾಗಿ ಕೈಯೆತ್ತಬಲ್ಲೆ, ಕನ್ನಡದ ಕೈಂಕರ್ಯ ಮಾಡಬಲ್ಲೆ ಎಂಬ ಆತ್ಮವಿಶ್ವಾಸವಿರಬೇಕು.ಕಂಪ್ಯೂಟರ್ ಏನೂಂತ ಗೊತ್ತಿದ್ದರಾಯಿತು, ಉಳಿದ ವಿಷಯಗಳನ್ನು ಕಲಿಸುವುದು ನಮ್ಮ ಜವಾಬ್ದಾರಿ. ಹೊಸ ಮಾಧ್ಯಮ ಎಂದೇ ಕರೆಯಲಾಗುವ ಇಂಟರ್ನೆಟ್ ಜರ್ನಲಿಸಂನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಯಸುವವರಿಗೆ ಅತ್ಯುತ್ತಮ ವೇದಿಕೆಯಿದು.ನಿಮ್ಮ ಹುಟ್ಟಿದ ದಿನಾಂಕ, ವಿಳಾಸ, ಅನುಭವ (ಇದ್ದರೆ) ವಿವರ, ವಿದ್ಯಾಭ್ಯಾಸ ವಿವರ, ಹವ್ಯಾಸ, ಇ-ಮೇಲ್ ವಿಳಾಸ ಸಹಿತ ಅರ್ಜಿಯನ್ನು ಕೆಳಗೆ ನೀಡಲಾದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಅದರ ಜತೆಗೇ, ನಿಮ್ಮ ಸಂಪರ್ಕ ದೂರವಾಣಿ ಸಂಖ್ಯೆ ಇರುವುದು ಅತ್ಯಗತ್ಯ.ಇ-ಮೇಲ್ (ಸಬ್ಜೆಕ್ಟ್ ಲೈನ್‌ನಲ್ಲಿ, "Application for Kannada Sub-Editor Post" ಅಂತ ನಮೂದಿಸಬೇಕು) ಅಥವಾ ಅಂಚೆ ಅರ್ಜಿಗಳು ನಮ್ಮನ್ನು ತಲುಪಲು ಅಕ್ಟೋಬರ್ 30, 2008 ಕೊನೆಯ ದಿನ. ಇರೋದು ಬೆರಳೆಣಿಕೆಯ ದಿನಗಳು. ತಡ ಮಾಡಬೇಡಿ.ಇ-ಮೇಲ್ ಮಾಡಬೇಕಾದ ವಿಳಾಸ:wdhrd@webdunia.com ಅಥವಾ avinash.b@webdunia.netಅಂಚೆ ಮೂಲಕವೂ ಅರ್ಜಿ ಕಳುಹಿಸಬಹುದು. ವಿಳಾಸ:Editor, KannadaWebdunia.Com (India) Pvt LtdNo.2, Kripa Shankari Street,Near Five LightsWest MambalamChennaiTamilnadu600 033 |