ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಹಬ್ಬದ ಸಂಭ್ರಮದ ವಂಚನೆ ತಡೆಗೆ 12 ಸೂತ್ರಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಬ್ಬದ ಸಂಭ್ರಮದ ವಂಚನೆ ತಡೆಗೆ 12 ಸೂತ್ರಗಳು
ಕ್ರಿಸ್‌ಮಸ್ ಹಬ್ಬದ ಅವಧಿಯಲ್ಲಿ ಶೇ.77 ರಷ್ಟು ಅಂಗಡಿಗಳ ಮಾಲೀಕರು ಕನಿಷ್ಟ ಅರ್ಧದಷ್ಟಾದರೂ ವಹಿವಾಟನ್ನು ಆನ್‌ಲೈನ್ ಮೂಲಕ ನಡೆಸುವ ಆಸಕ್ತಿಯನ್ನು ಹೊಂದಿದ್ದಾರೆ ಎಂದು ಐಎಂಆರ್‌ಜಿ ವರದಿಯಲ್ಲಿ ತಿಳಿಸಿದೆ.ಆನ್‌ಲೈನ್ ವಹಿವಾಟು ಹೆಚ್ಚಾದಂತೆ ವಂಚನೆ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ.ನಿಮ್ಮ ಒಳ್ಳೆಯ ವಸ್ತುಗಳನ್ನು ಮಾತ್ರ ಗ್ರಾಹಕರು ಆಯ್ಕೆ ಮಾಡುತ್ತಾರೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ನಿಮ್ಮ ವಹಿವಾಟು ವಂಚನೆ ಮುಕ್ತವಾಗಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಇಲ್ಲಿವೆ ಹನ್ನೆರಡು ಸೂಚನೆಗಳು.

1) ನಿಮ್ಮ ವಹಿವಾಟಿಗೆ ವಂಚನೆಯಿಂದ ಹಾನಿಯಾಗುತ್ತಿರುವ ಮೊತ್ತವನ್ನು ಪರಿಷ್ಕರಿಸಿ.ನಿಮ್ಮ ಲಾಭಕ್ಕಿಂತ ಹಾನಿ ಹೆಚ್ಚಾಗಿದೆ ಎಂದಾದಲ್ಲಿ ನಿಮಗೆ ಎದುರಾಗಿರುವ ಹಾನಿಯ ಮೊತ್ತವನ್ನು ಖಚಿತಪಡಿಸಲು ಅಲ್ಪಮೊತ್ತ ಪಾವತಿಸುವ ಹಣವನ್ನು ಲಕ್ಷಿಸಬೇಡಿ.ವಂಚನೆ ಪತ್ತೆ ಸ್ಕ್ರೀನ್ ಮೂಲಕ ಹಾನಿಯ ಮೊತ್ತ ಪತ್ತೆಯಾದಲ್ಲಿ ಅದನ್ನು ತಡೆಯಲು ವಂಚನೆ ಪತ್ತೆ ಸ್ಕ್ರೀನ್ ಅಳವಡಿಸುವ ಮೂಲಕ ಹಾನಿಯನ್ನು ಕಡಿಮೆಗೊಳಿಸಬಹುದು.

2) ವಂಚನೆ ಪತ್ತೆ ಸ್ಕ್ರೀನ್‌ನಲ್ಲಿ ಸರಿಯಾದ ಡಟಾ ಅಳವಡಿಸಲಾಗಿದೆ ಎನ್ನುವುದು ಖಚಿತಪಡಿಸಿಕೊಳ್ಳಿ. ನಿಮ್ಮಲ್ಲಿರುವ ಬೇಡಿಕೆ ಪತ್ರಗಳನ್ನು ನಿಖರವಾಗಿದ್ದಲ್ಲಿ ಮಾತ್ರ ಸ್ಕ್ರೀನಿಂಗ್ ವ್ಯವಸ್ಥೆಗೆ ಹಾನಿಗೊಳಗಾದ ವಹಿವಾಟು ಪರಿಕ್ಷೀಸಲು ಸಾಧ್ಯವಾಗುತ್ತದೆ.

3) ಕ್ರಿಸ್‌ಮಸ್‌ನಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಆನ್‌ಲೈನ್ ಮೂಲಕ ಶಾಂಪಿಗ್‌ಗೆ ಮೊರೆಹೋಗಿ ಕೆಲ ಬದಲಾವಣೆಗಳಾಗಬಹುದು. ವಂಚನೆ ಪತ್ತೆ ಸಾಧನವನ್ನು ವರ್ಷಪೂರ್ತಿ ಪ್ರಯೋಗಿಸಲಾಗದು. ಹಬ್ಬದ ಸಂದರ್ಭಗಳಲ್ಲಿ ಮಾತ್ರ ವಂಚನೆ ಪತ್ತೆ ಸ್ಕ್ರೀನ್ ಉಪಯೋಗಿಸಬಹುದು. ಗ್ರಾಹಕರು ಹೆಚ್ಚಿನ ಹಣವನ್ನು ಖರೀದಿಗಾಗಿ ವ್ಯಯಿಸಲು ಸಿದ್ದರಿದ್ದಾರೆ.ಆದ್ದರಿಂದ ಹಬ್ಬ ದ ಸಂದರ್ಭಗಳಾಗಲಿ ಸಾಮಾನ್ಯ ದಿನಗಳಾಗಲಿ ಗ್ರಾಹಕರ ಬೇಡಿಕೆಗಳನ್ನು ನಿರ್ಲಕ್ಷಿಸದಿದ್ದಲ್ಲಿ ಉತ್ತಮ ವಹಿವಾಟು ನಡೆಸಬಹುದಾಗಿದೆ.

4) ಜಾಗತಿಕವಾಗಿ ಹಾಗೂ ಸ್ಥಳೀಯವಾಗಿ ಗ್ರಾಹಕರ ಕಳೆದುಹೋದ ಕ್ರೆಡಿಟ್ ಹಾಗೂ ಡೆಬಿಟ್‌ ಕಾರ್ಡ್‌ಗಳ ಮಾಹಿತಿಯನ್ನು ಸಂಗ್ರಹಿಸಿದಲ್ಲಿ ನಿಮ್ಮ ವಂಚನೆ ಪತ್ತೆ ಸ್ಕ್ರೀನ್ ಮೂಲಕ ವಂಚಕ ಗ್ರಾಹಕರನ್ನು ಪತ್ತೆ ಮಾಡಲು ಸಹಕಾರಿಯಾಗುತ್ತದೆ.

5) ಸಾಗರೋತ್ತರ ಗ್ರಾಹಕರ ಬೇಡಿಕೆಗಳನ್ನು ಪೂರೈಸುವ ಬಗ್ಗೆ ಚಿಂತೆ ಬೇಡ. ಆಧುನಿಕ ವಂಚನೆ ಪತ್ತೆ ಉಪಕರಣಗಳ ಮೂಲಕ ಜಗತ್ತಿನಾದ್ಯಂತದ ವಹಿವಾಟನ್ನು ಕಂಡುಹಿಡಿಯಬಹುದಾಗಿದೆ.ವಿದೇಶಿ ಗ್ರಾಹಕರು ನಿಮ್ಮ ವಹಿವಾಟು ಉನ್ನತಿಗೆ ಕಾರಣವಾಗಬಹುದಾಗಿದೆ.

6) ಗ್ರಾಹಕರ ಹೆಚ್ಚಿನ ಬೇಡಿಕೆಗಳು ಬಂದಾಗ ಉಡುಗೊರೆಗಳು ನಿಜವಾದ ಗ್ರಾಹಕರಿಗೆ ತಲುಪುತ್ತಿದೇಯೇ ಎನ್ನುವುದು ಖಚಿತಪಡಿಸಿಕೊಳ್ಳಿ. ನಿಮಗೆ ಬೇಡಿಕೆ ಸಲ್ಲಿಸಿದ ಕಂಪ್ಯೂಟರ್‌ನ ಬೆರಳಚ್ಚಿನಿಂದ ನೀವು ನಿಜವಾದ ಗ್ರಾಹಕರನ್ನು ಕಂಡುಹಿಡಿಯಬಹುದು.ಕಂಪ್ಯೂಟರ್‌ನಲ್ಲಿ ವಿಭಿನ್ನ ಸೂಚನೆಗಳಿದ್ದಲ್ಲಿ ನಿಮ್ಮ ವಂಚನೆ ಶಂಕೆಯನ್ನು ನಿಜವಾಗಿಸಬಹುದು.

7) ಹಬ್ಬದ ಸಂದರ್ಭಗಳ ವಹಿವಾಟನ್ನು ಪರೀಕ್ಷಿಸಿ. ಪ್ರತಿಯೊಂದು ವಹಿವಾಟನ್ನು ಪರೀಕ್ಷಿಸಿ ವಂಚನೆ ಪತ್ತೆ ಸ್ಕ್ರೀನ್‌ಗೆ ಹಾಕುವುದರಿಂದ ಹನಿಯಾದ ಮೊತ್ತವನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ.

8) ಗ್ರಾಹಕರಿಗೆ ಸಮಯದ ಉಡುಗೊರೆ ನೀಡಿ. ಹಬ್ಬದ ಸಂದರ್ಭಗಳಲ್ಲಿ ನಿಮ್ಮಂತೆ ಗ್ರಾಹಕರು ಕೂಡಾ ಬಿಜಿಯಾಗಿರುತ್ತಾರೆ.ಗ್ರಾಹಕರ ನಿರ್ಧಾರದ ಬೇಡಿಕೆ ಬರುವವರೆಗೆ ನಿರೀಕ್ಷಿಸಿ. ಇದರಿಂದಾಗಿ ನಿಮ್ಮ ವಂಚನೆ ಪತ್ತೆ ಯಂತ್ರಕ್ಕೆ ಸಮಯ ದೊರೆತಂತಾಗುತ್ತದೆ.

9) ಗ್ರಾಹಕರ ಬೇಡಿಕೆಗಳನ್ನು ಆನ್‌ಲೈನ್ ಮುಖಾಂತರ ಮತ್ತು ಫೋನ್‌ ಮುಖಾಂತರ ತೆಗೆದುಕೊಳ್ಳುತ್ತಿದ್ದಿರಾ? ನಿಮ್ಮ ವಂಚನೆ ಪತ್ತೆ ಯಂತ್ರ ಏಕಕಾಲಕ್ಕೆ ಎರಡು ಚಾನೆಲ್‌ಗಳಿಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ವೆಬ್‌ಸೈಟ್‌ ಮೂಲಕ ಬೇಡಿಕೆ ಸಲ್ಲಿಸುತ್ತಿದ್ದ ಗ್ರಾಹಕ ಅಕಸ್ಮಿಕವಾಗಿ ಅದನ್ನು ತಿರಸ್ಕರಿಸಿ ಅದೇ ಕಾರ್ಡ್ ಮೂಲಕ ನಿಮಗೆ ಬೇರೆ ಹೆಸರಿನಲ್ಲಿ ಕರೆ ಮಾಡಿದಲ್ಲಿ ಅದನ್ನು ಗುರುತಿಸಲು ನಿಮಗೆ ಸಾಧ್ಯವೆ?

11) ವಂಚನೆ ಪತ್ತೆ ಸ್ಕ್ರೀನ್‌ನ ಮೊದಲ ಹಂತವನ್ನು ದಾಟಿದ ಮಾತ್ರಕ್ಕೆ ನಂಬುವ ಅಗತ್ಯವಿಲ್ಲ. ಒಂದು ಬಾರಿ ಗ್ರಾಹಕರು ಬೇಡಿಕೆ ಸಲ್ಲಿಸಿದ ನಂತರ ಗ್ರಾಹಕರಿಗೆ ಕೆಲ ಬದಲಾವಣೆಗಳನ್ನು ಮಾಡಲು ಅನುಮತಿ ನೀಡಿದಲ್ಲಿ. ನೀವು ವಂಚನೆಗೊಳಗಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ವಂಚಕ ಗ್ರಾಹಕರು ನಿಮಗೆ ಬೇಡಿಕೆ ಸಲ್ಲಿಸುವ ಸಂದರ್ಭದಲ್ಲಿ ನಿಖರವಾದ ವಿವರಣೆಗಳನ್ನು ನೀಡಿರುತ್ತಾರೆ.ಹಿಂದಿನ ವಹಿವಾಟನ್ನು ಪರಿಶೀಲಿಸಿ ಗ್ರಾಹಕರ ವಿಳಾಸವನ್ನು ಪರೀಕ್ಷಿಸಿದ ನಂತರ ಬೇಡಿಕೆಗಳ ಬದಲಾವಣೆಗಳನ್ನು ಮಾಡಬಹುದು.

11) ವೀಸಾ ಮತ್ತು ಮಾಸ್ಟರ್‌ಕಾರ್ಡ್‌ಗಳ ಭದ್ರತಾ ಕೋಡ್‌ನ್ನು ನಿಖರವಾಗಿ ಕಾರ್ಯಗತಗೊಳಿಸಿದಲ್ಲಿ ವಂಚನೆಯನ್ನು ಕೆಲ ಮಟ್ಟಿಗೆ ತಪ್ಪಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ವೀಸಾ ಮತ್ತು ಮಾಸ್ಟರ್‌ಕಾರ್ಡ್‌ಗಳ ದುರುಪಯೋಗವಾಗುವುದನ್ನು ವಂಚನೆ ಪತ್ತೆ ಯಂತ್ರದ ಮೂಲಕ ತಪ್ಪಿಸಬಹುದಾಗಿದೆ.

12) ಆಧುನಿಕ ಪ್ರಸ್ತುತ ಐಜಿ ಜಿಯೊಲೋಕೆಶನ್ ಟೂಲ್‌ಗಳನ್ನು ಬಳಸುವುದರಿಂದ ಉಪಗ್ರಹ ಆಧಾರಿತ ಸಂಪರ್ಕಗಳಿಂದ ವಂಚನೆಗೊಳಗಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ನಿಮ್ಮಲ್ಲಿರುವ ಅತ್ಯಾಧುನಿಕ ವಂಚನೆ ಪತ್ತೆ ಸಾಧನದಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಅವಕಾಶ ದೊರೆತು ವಂಚನೆ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಡಾ. ಅಕಿಫ್ ಖಾನ್

ಪ್ರೋವೈಡರ್ ಆಫ್ ಎಲೆಕ್ಟ್ರಾನಿಕ್ ಪೇಮೆಂಟ್ ಸಲ್ಯೂಶನ್ಸ್
ಗ್ರಾಹಕರ ಮತ್ತು ತಾಂತ್ರಿಕ ಸೇವಾವಿಭಾಗ,
ಸೈಬರ್ ಸೊರ್ಸ್
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನವೇ ಸುರಕ್ಷಿತ ಹೂಡಿಕೆ: ಹಣಕಾಸು ತಜ್ಞರ ಹೇಳಿಕೆ
ವೆಬ್‌ದುನಿಯಾದಲ್ಲಿ ಉಪಸಂಪಾದಕರ ಹುದ್ದೆ ಖಾಲಿ ಇದೆ
ಸಿಡಿಯಲಿರುವ ಸಿದ್ದು: ರಾಜ್ಯ ರಾಜಕೀಯದಲ್ಲಿ ಸಂಚಲನ
ಕನ್ನಡಿಗ ಈ ಅರವಿಂದ ಅಡಿಗ, ಯಾವೂರಿನ ಹುಡುಗ?
ವಿಶ್ವ ಸೃಷ್ಟಿಯ ಮರ್ಮವರಿಯಲು ಬಿಗ್ ಬ್ಯಾಂಗ್ ಮಹಾಪ್ರಯೋಗ !
ಆಪರೇಶನ್ ಕಮಲ ಕಳಂಕದೊಂದಿಗೆ ಬಿಜೆಪಿ ಶತದಿನ