ಚುನಾವಣೆಗಳು ಮತ್ತೆ ಬಂದಿವೆ! ರಾಜಕಾರಣಿಗಳು ಮತದಾನವೆಂಬ ಯುದ್ಧದಲ್ಲಿ ಜಯಗಳಿಸಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ನೀವು ಪ್ರಜೆಗಳೇ ಪ್ರಭುಗಳು ಎಂದು ನಂಬಿರುವ ನಾಗರಿಕರು. ದುಷ್ಟಶಕ್ತಿಗಳನ್ನು ಹೋಗಲಾಡಿಸಲು ನಿಮ್ಮಲ್ಲಿ ಮತದಾನವೆಂಬ ಅಸ್ತ್ರವಿದೆ.ರಾಜಕೀಯ ಎಂಬುದೊಂದು ಆಟವೇ ಆಗಿಬಿಟ್ಟಿದೆ. ಜನಸಾಮಾನ್ಯರಿಗೆ ಈ ರಾಜಕಾರಣಿಗಳ ವೋಟು ಬ್ಯಾಂಕ್ ರಾಜಕಾರಣ ನೋಡಿ ನೋಡಿ ಸಾಕಾಗಿದೆ. ಅವರು ಮತಗಳನ್ನು ಹೇಗೆ ಕಬಳಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರೋ ಸಂಗತಿ. ಹೀಗಾಗಿ ನಿಮ್ಮ ಮನರಂಜನೆಗೆ ವೆಬ್‌ದುನಿಯಾ ಪರಿಚಯಿಸುತ್ತಿದೆ ಹೊಸದೊಂದು ಆನ್‌ಲೈನ್ ಆಟವನ್ನು.ಈ ಆಟದಲ್ಲಿ ನೀವು ಯಾವ ರಾಜಕೀಯ ಪಕ್ಷವನ್ನು ಬೆಂಬಲಿಸಿ ಗೆಲ್ಲಿಸುತ್ತೀರಿ ಅನ್ನುವುದು ಮುಖ್ಯ. ರಾಜಕೀಯ ಪಕ್ಷದ ಪ್ರತಿನಿಧಿಯಾಗಲಿರುವ ನಿಮ್ಮ ಆಟದ ಮೇಲೆ ಫಲಿತಾಂಶ ಪ್ರಕಟವಾಗುತ್ತದೆ ಎಂಬುದು ನೆನಪಿರಲಿ.ವೆಬ್‌ದುನಿಯಾ ಗೇಮ್ಸ್ ನಿಮಗೆ ಈ ಹೊಸ ಗೇಮ್ ಪರಿಚಯಿಸುತ್ತಿದೆ. ಈ ರಾಜಕೀಯ ಎಂಬ ಚದುರಂಗದಾಟದಲ್ಲಿ, ಭಾರತದ ಆರು ರಾಜ್ಯಗಳ ಗೇಮ್ ಇಲ್ಲಿ ಲಭ್ಯವಿದೆ.ಇಲ್ಲಿ ಕೊಟ್ಟಿರುವ ಸೂಚನೆಗಳನ್ನು ಗಮನಿಸಿದರೆ ಸಾಕು. ನೀವೂ ರಾಜಕೀಯ ಪಕ್ಷದ ಗೆಲುವಿಗಾಗಿ ದುಡಿದಂತಾಗುತ್ತದೆ.ಆಟವಾಡೋದು ಹೇಗೆ?ನಿಮಗಿಷ್ಟವಾದ ಪಕ್ಷವನ್ನು ಆರಿಸಿಕೊಳ್ಳಿ. ಇಲ್ಲಿ ಚುನಾವಣೆ ಆರು ರಾಜ್ಯಗಳಲ್ಲಿ, ಆರು ಹಂತಗಳಲ್ಲಿ ನಡೆಯುತ್ತದೆ.ಯಾವುದೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಾದಲ್ಲಿ ನೀವು ಕನಿಷ್ಠ ಶೇಕಡಾ 51ರಷ್ಟು ಸೀಟು ಹೊಂದಿರಲೇಬೇಕು. ಇಲ್ಲಿ ತೋರಿಸಲಾಗುವ ಭಾರತ ದೇಶದ ನಕ್ಷೆಯ ಪ್ರಕಾರ ನೀವು ಯಾವುದೇ ರಾಜ್ಯದಿಂದ ಸ್ಪರ್ಧಿಸಬಹುದು. ನೀವು ಚುನಾವಣೆಯಲ್ಲಿ ಸ್ಪರ್ಧಿಸಿದ ರಾಜ್ಯಗಳಲ್ಲಿ ಗೆದ್ದರೆ ಅಲ್ಲಿ 'ರೈಟ್' ಅಥವಾ 'ಸರಿ' ಚಿಹ್ನೆ ಮುಖಾಂತರ ತೋರಿಸಲಾಗುತ್ತದೆ. ಒಂದು ವೇಳೆ ಸೋತಲ್ಲಿ 'X' ಚಿಹ್ನೆ ಹಾಕಲಾಗುತ್ತದೆ. ಯಾವುದೇ ಹಂತದಲ್ಲಿ ನೀವು ಮತ್ತೆ ಆಡುವಂತಿಲ್ಲ.ಅರ್ಧದಲ್ಲಿ ಆಟ ನಿಲ್ಲಿಸಿ ಹೋಗಿದ್ದ ಆಟವನ್ನು ಪುನರಾರಂಭಿಸಲು ನೀವು ಮತ್ತೆ ಲಾಗಿನ್ ಆಗುವುದು ಕಡ್ಡಾಯ. ಪ್ರತೀ ಹಂತದ ಆಟದ ನಂತರ ನೀವು ಪೂರ್ಣಾಂಕಗಳನ್ನು ನೋಡಬಹುದು. ಮತ್ತೊಂದು ವಿಷಯ ಗಮನದಲ್ಲಿರಲಿ - ಒಂದು ವೇಳೆ ನೀವು ವಿರೋಧ ಪಕ್ಷದವರ ಬ್ಯಾಲೆಟ್‌ಗೆ ಓಟು ಒತ್ತಿದಲ್ಲಿ ಅಂಕವನ್ನು ಕಳೆಯಲಾಗುತ್ತದೆ. ಗುರಿಯನ್ನು ವ್ಯರ್ಥ ಮಾಡಬೇಡಿ, ಜತೆಗೆ ಸಮಯವನ್ನು ಉಳಿಸಿ. ನೀವು ರಾಷ್ಟ್ರದ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುತ್ತೀರೋ ಇಲ್ಲವೋ ಅನ್ನುವುದನ್ನು ಸಮಯ ಮಾತ್ರ ತಿಳಿಸಬಹುದು. ನಿಮ್ಮ ಪಾರ್ಟಿಯ ಬಗ್ಗೆ ನಿಮಗೆಷ್ಟು ಅಭಿಮಾನವಿದೆ ಎಂಬುದು ನಮಗೂ ಗೊತ್ತು. ನಿಮಗಿಷ್ಟವಾದ ಪಕ್ಷವನ್ನು ಆಯ್ಕೆ ಮಾಡಿ ಮತ್ತು ಗೆಲ್ಲಿಸಿ. ಇನ್ನೇನು ತಡ... ನೀವು ರಾಜಕೀಯ ಆಟ ಆಡಿರಿ... ಇಲ್ಲಿ ಕ್ಲಿಕ್ ಮಾಡಿ... ಶುಭವಾಗಲಿ... |