ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ಅಪಾಯ! ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಪ್‌ಡೇಟ್ ಮಾಡಿಕೊಳ್ಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಪಾಯ! ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಪ್‌ಡೇಟ್ ಮಾಡಿಕೊಳ್ಳಿ
WD
ವಿಶ್ವದಲ್ಲಿ ಅತ್ಯಂತ ಹೆಚ್ಚು ಬಳಸಲಾಗುತ್ತಿರುವ ಬ್ರೌಸರ್ ಎಂಬ ಹೆಗ್ಗಳಿಕೆಯುಳ್ಳ ಇಂಟರ್ನೆಟ್ ಎಕ್ಸ್‌ಪ್ಲೋರರ್‌ಗೆ ಸಂಬಂಧಿಸಿದಂತೆ ಸುರಕ್ಷತೆಯ ತ್ವರಿತವಾದ ತೇಪೆಯೊಂದನ್ನು ಮೈಕ್ರೋಸಾಫ್ಟ್ ಕಾರ್ಪೊರೇಶನ್ ಅವಸರವಸರವಾಗಿ ಬಿಡುಗಡೆ ಮಾಡಿ ರವಾನಿಸಿದೆ.

ಈ ಸುರಕ್ಷತಾ ವೈಫಲ್ಯದಿಂದಾಗಿ ವಿಶ್ವಾದ್ಯಂತ ಹ್ಯಾಕರ್‌ಗಳು ಲಕ್ಷಾಂತರ ಕಂಪ್ಯೂಟರುಗಳ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಇದಕ್ಕಾಗಿ ಮೈಕ್ರೋಸಾಫ್ಟ್ ತ್ವರಿತ ಕ್ರಮ ಕೈಗೊಂಡಿದೆ. ವಾಸ್ತವವಾಗಿ ಪ್ರತಿ ತಿಂಗಳ ಎರಡನೇ ಮಂಗಳವಾರ ಯಾವುದೇ ಸಾಫ್ಟ್‌ವೇರ್ ಸಂಬಂಧಿತ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡುವ ಮೈಕ್ರೋಸಾಫ್ಟ್, ಈ ಬಾರಿ ಬುಧವಾರವೇ ಈ ತ್ವರಿತ ಕ್ರಮ ಕೈಗೊಂಡಿರುವುದರಿಂದ ಸಮಸ್ಯೆಯ ಗಂಭೀರತೆ ಎಷ್ಟೆಂಬುದನ್ನು ಅರ್ಥೈಸಿಕೊಳ್ಳಬಹುದು.

ವಿಂಡೋಸ್ ಅಪ್‌ಡೇಟ್ ಲಕ್ಷಣವು ಸಕ್ರಿಯವಾಗಿರುವ ಕಂಪ್ಯೂಟರುಗಳ ಬ್ರೌಸರ್‌ಗಳಿಗೆ ಬುಧವಾರವೇ ಈ ಸೆಕ್ಯುರಿಟಿ ಅಪ್‌ಡೇಟ್ ರವಾನೆಯಾಗಿದೆ.

ಈ ಸುರಕ್ಷತೆ ವೈಫಲ್ಯವು, ಇತರ ಕಂಪ್ಯೂಟರುಗಳನ್ನು ಹ್ಯಾಕರ್‌ಗಳು ಇನ್‌ಫೆಕ್ಟೆಡ್ ವೆಬ್‌ಸೈಟ್‌ಗಳ ಮೂಲಕ ನಿಯಂತ್ರಣಕ್ಕೆ ತೆಗೆದುಕೊಂಡು, ಅದರೊಳಗಿದ್ದ ಖಾಸಗಿ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ. ಬಳಕೆದಾರರು ಇಂಥ ವೆಬ್‌ಸೈಟುಗಳಿಂದ ಏನನ್ನೂ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿಲ್ಲ, ಕೇವಲ ತಮ್ಮ ಕಂಪ್ಯೂಟರಿನಲ್ಲಿ ಅವುಗಳನ್ನು ಓಪನ್ ಮಾಡಿದರಾಯಿತು. ಹ್ಯಾಕರ್‌ಗಳು ತಮ್ಮ ಕೆಲಸ ಪೂರೈಸಿಕೊಳ್ಳುತ್ತಾರೆ.

ಇಂಥ ವೆಬ್‌ಸೈಟ್‌ಗಳಿಗೆ ಅಪಾಯಕಾರಿ ಕೋಡ್‌ಗಳನ್ನು ಅಳವಡಿಸಲಾಗಿದ್ದು, ಅವು ಸ್ವಯಂಚಾಲಿತವಾಗಿ ಸಂದರ್ಶಕರ ಕಂಪ್ಯೂಟರಿಗೆ ಇನ್‌ಫೆಕ್ಟ್ ಆಗುತ್ತವೆ. ವಿಶೇಷವಾಗಿ ಇಂಟರ್ನೆಟ್ ಎಕ್ಸ್‌ಪ್ಲೋರರ್-7 ಬಳಸುತ್ತಿರುವ ಬಳಕೆದಾರರು ಈ ಸುರಕ್ಷತಾ ಸಮಸ್ಯೆಗೆ ಈಡಾಗಿದ್ದಾರೆ ಎಂದು ಮೈಕ್ರೋಸಾಫ್ಟ್ ಹೇಳಿದ್ದರೂ, ಇತರ ಆವೃತ್ತಿ ಬಳಸುತ್ತಿರುವವರೂ ಈ ಬಗ್ಗೆ ಸೂಕ್ತ ಎಚ್ಚರಿಕೆ ತೆಗೆದುಕೊಳ್ಳುವಂತೆ ಅದು ಸೂಚಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರ ನಿಗ್ರಹ: ಹೊಸ ಕಾನೂನಿನಲ್ಲಿ ಏನೇನಿದೆ?
ಇದೋ ಬಂದಿದೆ 3-ಜಿ ಸೌಲಭ್ಯ: ಏನಿದು?
ಲಷ್ಕರ್ ಸಂಘಟನೆ ಹುಟ್ಟುಹಾಕಿದ್ದು ಯಾರು?
2008ರ ಶ್ರೇಷ್ಠರು ಯಾರು? ವೆಬ್‌ದುನಿಯಾ ಸಮೀಕ್ಷೆ
ಧಿಕ್ಕಾರವಿರಲಿ ಓಟ್ ಬ್ಯಾಂಕ್ ರಾಜಕಾರಣಿಗಳಿಗೆ!
'ಧರ್ಮ ರಾಜಕೀಯ' ಬೇಡ, ರಾಜಕೀಯ ಧರ್ಮ ಇರಲಿ