ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ > ನೈತಿಕ ಅಧಃಪತನ: ಡ್ಯಾಡಿ-ಮಮ್ಮಿ ಆಗೋ ಮಕ್ಕಳು!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೈತಿಕ ಅಧಃಪತನ: ಡ್ಯಾಡಿ-ಮಮ್ಮಿ ಆಗೋ ಮಕ್ಕಳು!
ಓಹ್ ಬ್ರಿಟನ್! ಶೇಕ್ಸ್‌ಪಿಯರ್, ಚರ್ಚಿಲ್, ಇಂಗ್ಲೆಂಡಿನ ರಾಣಿ, ಜಗಮಗಿಸುವ ಲಂಡನ್ ಮಳಿಗೆಗಳು, ವರ್ಣಮಯ ನಗರಿ, ಮಾತ್ರವಲ್ಲ, ಒಂದು ಕಾಲದಲ್ಲಿ ಭಾರತವನ್ನೂ ಆಳಿದ ಬ್ರಿಟಿಷರ ನಾಡು... ಹೀಗೆಲ್ಲಾ ನಾವು ಬ್ರಿಟಿಷರ ನಾಡನ್ನು ನೆನಪಿಸಿಕೊಳ್ಳುತ್ತೇವೆ. ಆದರೆ ಈಗ ಅಲ್ಲೇನಾಗುತ್ತಿದೆ? ಪಶ್ಚಿಮ ಯೂರೋಪಿನಲ್ಲೇ ಅತ್ಯಂತ ಹೆಚ್ಚು ಹದಿಹರೆಯದ ಗರ್ಭಿಣಿಯರು, ಮೇರೆ ಮೀರುವ ಕುಡಿತದಿಂದಾಗಿ ಭವ್ಯ ಭವಿಷ್ಯದ ಭಾವೀ ಪ್ರಜೆಗಳಾದ ತರುಣವೃಂದ ಬೀದಿಯಲ್ಲೇ ಕುಡಿದು ತೂರಾಡುತ್ತಿರುವುದು, ಮಾತ್ರವಲ್ಲ, ದೇಶದ ಚುಕ್ಕಾಣಿ ಹಿಡಿಯಬೇಕಿರುವ ಕೈಗಳಲ್ಲಿ ಚಾಕು-ಚೂರಿಗಳಿಂದೊಡಗೂಡಿದ ಮಾರಣಾಂತಿಕ ಕಾರ್ಯಗಳು!

ಹೌದು. ನೀವು ನಂಬಲೇಬೇಕು. ಬ್ರಿಟನ್ ಇತ್ತೀಚೆಗೆ ಜಾಗತಿಕವಾಗಿ ಗುರುತಿಸಿಕೊಳ್ಳುತ್ತಿರುವುದು ಬೇಡವಾದ ಸಂಗತಿಗಳಿಗೇ. 13 ವರ್ಷದ ಅಲ್ಫೀ ಎಂಬ ಹುಡುಗ ಮತ್ತು 15ರ ಹರೆಯದ ಆತನ ಗರ್ಲ್ ಫ್ರೆಂಡ್ ಶಾಂಟೆಲಿ ಅವರು ಕಳೆದ ವಾರ 'ಹೆತ್ತವರು' ಎಂಬ ಪಟ್ಟ ಏರಿದರು! ಈ ಸುದ್ದಿ ಮಾಧ್ಯಮ ಲೋಕದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಆಲ್ಫೀ 13 ವರ್ಷ ಬಿಡಿ, ಕೇವಲ 10 ವರ್ಷದ ಪ್ರಾಯದ ಹುಡುಗನಂತೆ ಕಾಣುತ್ತಿದ್ದಾನೆ, ಆದರೂ ಅವನೀಗ 'ಅಪ್ಪ'! ತನ್ನ ಪುಟ್ಟ ಮಗಳನ್ನು ಆಡಿಸಲು ಆರಂಭಿಸಿದ್ದಾನೆ! ಇದು ಬ್ರಿಟನ್‌ನ ಸಾಮಾನ್ಯ ಜನರೂ ಅರಗಿಸಿಕೊಳ್ಳಲಾಗದ ಸತ್ಯ.

ಬ್ರಿಟನ್‌ನ ಮಾಜಿ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರ ಪತ್ರಿಕಾ ಕಾರ್ಯದರ್ಶಿಯಾಗಿದ್ದ ಸರ್ ಬರ್ನಾರ್ಡ್ ಇಂಗಮ್ ಹೇಳುತ್ತಾರೆ: "ದೇಶವು ಸಾಮಾಜಿಕವಾಗಿ ಈ ಮಟ್ಟಕ್ಕೆ ಪತನವಾಗಿರುವುದು ರಾಜಕೀಯ ವಲಯವನ್ನೇ ಹತಾಶೆಯಲ್ಲಿ ಕೆಡಹಿದೆ".

'ನಾವು ಹಾದಿ ತಪ್ಪುತ್ತಿದ್ದೇವೆ ಎಂಬುದರ ಮುನ್ಸೂಚನೆಯಿದು. ಜನರಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದರ ಮಧ್ಯೆ ವ್ಯತ್ಯಾಸವೇ ಗೊತ್ತಾಗುತ್ತಿಲ್ಲ. ಸಮಾಜವು ಇಂತಹ ಸಂಗತಿಗಳ ಆಧಾರದಲ್ಲಿ ಮುಂದುವರಿಯುವುದು ಅಸಾಧ್ಯ ಎಂಬುದು ಯಾರೂ ಒಪ್ಪತಕ್ಕ ವಿಷಯ. ಬಹುಶಃ ಇದು ಅಧಃಪತನ ಕಂಡ ಬ್ರಿಟನ್‌ನ ಮತ್ತೊಂದು ಮುಖ' ಎಂದಿದ್ದಾರೆ ಅವರು ವಿಷಾದದಿಂದಲೇ.

ಪಾನ ಕೇಳಿಗಳು, ಹಿಂಸಾಚಾರವೇ ಮೈವೆತ್ತಂತಿರುವ ಯುವ ಮನಸ್ಸುಗಳು... ಇವುಗಳೆಲ್ಲಾ ಬ್ರಿಟನ್‌ನ ಗುಣಮಟ್ಟ, ಶಿಸ್ತು ಮತ್ತು ನೈತಿಕ ಅಧಃಪತನದ ಸಂಕೇತಗಳು. ಪಾನಕೇಳಿಗಳಿಂದಾಗಿ 20ರ ಆಸುಪಾಸಿನಲ್ಲಿರುವ ಯುವಕರಲ್ಲಿಯೇ ಪಿತ್ತಜನಕಾಂಗ ಸಂಬಂಧಿತ ರೋಗಗಳು ಹೆಚ್ಚಾಗಿವೆ ಎಂಬುದು ಕೂಡ ಇತ್ತೀಚೆಗಿನ ಅಧ್ಯಯನದಿಂದ ತಿಳಿದುಬಂದ ಅಂಶ.

ಯಾವುದೇ ರಾತ್ರಿ ನೋಡಿ, ಲಂಡನ್‌ನ ಭೂಗತ ಸಬ್‌ವೇಗಳಲ್ಲಿ ಕುಡಿದು ತೂರಾಡುತ್ತಾ ನಡೆಯುತ್ತಿರುವ ಯುವ ಜನಾಂಗವನ್ನು ಕಾಣಬಹುದು. ಹೆಚ್ಚಾಗಿ ಗೆಳೆಯರು ಅವರನ್ನು ಮೇಲೆತ್ತುತ್ತಿರುತ್ತಾರೆ, ಆದರೆ ಯಾರೂ ಇಲ್ಲದಿದ್ದರೆ, ಪೊಲೀಸರು ಬರುವವರೆಗೂ ಅವರು ರಸ್ತೆಯಲ್ಲೇ ಬಿದ್ದಿರುತ್ತಾರೆ.

ಇಷ್ಟು ಮಾತ್ರವೇ? ಚಾಕು-ಚೂರಿ ಸಂಸ್ಕೃತಿಯೂ ಬ್ರಿಟನ್ನನ್ನು ಬಲಿತೆಗೆದುಕೊಳ್ಳುತ್ತಿದೆ. ಕೇವಲ ಒಂದು ವರ್ಷದ ಹಿಂದೆ ಹೋಲಿಸಿದರೆ, 2008ರ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಆಗಿರುವ ಚಾಕು ತೋರಿಸಿ ಸುಲಿಗೆ/ದರೋಡೆ ಮಾಡುವ ಅಪರಾಧಗಳು ಶೇ.18ರಷ್ಟು ಹೆಚ್ಚಳ ಕಂಡಿವೆ. ಇದು ಹೇಳಿದ್ದು ಬೇರಾರೂ ಅಲ್ಲ, ಸರಕಾರವು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಿದ ಅಂಕಿಅಂಶವೇ.

ಆಗಾಗ್ಗೆ, ಜಗಳಗಳು ಹದಿಹರೆಯದವರು ಇರಿದುಕೊಲ್ಲುವುದರೊಂದಿಗೆ ಮುಕ್ತಾಯ ಕಂಡ ಉದಾಹರಣೆಗಳೂ ಹೆಚ್ಚಾಗುತ್ತಿವೆ. 'ಹ್ಯಾರಿ ಪಾಟರ್' ಚಿತ್ರವೊಂದರಲ್ಲಿ ನಟಿಸಿದ್ದ 18ರ ಹರೆಯದ ತರುಣ ರಾಬ್ ನಾಕ್ಸ್‌ನನ್ನು ಕಳೆದ ಮೇ ತಿಂಗಳಲ್ಲಿ ಚಾಕುವಿನಿಂದ ತಿವಿದು ಸಾಯಿಸಲಾಗಿದ್ದರೆ, ಟಿವಿ ನಟಿಯೊಬ್ಬಳ 16ರ ಹರೆಯದ ಸಹೋದರ ಬೆನ್ ಕಿನ್ಸೆಲ್ಲಾ ಎಂಬಾತ ಜೂನ್ ತಿಂಗಳಲ್ಲಿ ಇರಿತಕ್ಕೆ ಬಲಿಯಾಗಿದ್ದ. ಇವರಿಬ್ಬರೂ ಜಗಳವೊಂದನ್ನು ಬಿಡಿಸಲು ಹೋದವರು! ಸುದ್ದಿಯಾಗದ ಅದೆಷ್ಟೋ ಇಂಥ ಪ್ರಕರಣಗಳು ಘಟಿಸುತ್ತಿವೆ.

ಆಲ್ಫೀ-ಶಾಂಟೆಲಿ ಎಂಬಿಬ್ಬರು ಹದಿಹರೆಯದ ಜೋಡಿ 'ಪೇರೆಂಟ್ಸ್' ಎಂದು ಕರೆಯಲ್ಪಟ್ಟ ಸುದ್ದಿ ಲಂಡನ್ ಟ್ಯಾಬ್ಲಾಯ್ಡ್ ಪತ್ರಿಕೆಗಳಲ್ಲಿ ಭರ್ಜರಿಯಾಗಿ ಪ್ರಚಾರ ಪಡೆದಿವೆ. ಕೆಲವರಂತೂ ಪದೇ ಪದೇ ಈ ವಿಷಯವನ್ನು ವೈಭವೀಕರಿಸುತ್ತಿರುವ ಮಾಧ್ಯಮಗಳ ಬಗೆಗೂ ಕೆಂಡ ಕಾರಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಬ್ ಪ್ರಕರಣ: ಹತ್ತು ದಿಕ್ಕು ಹಲವು ಧ್ವನಿ
ಬೆಳಗಾವಿ ಅಧಿವೇಶನದ 'ಪ್ರಹಸನ'
ಅನೇಕತೆಯಲ್ಲಿ ಏಕತೆ: ಗಣರಾಜ್ಯೋತ್ಸವ ಪೆರೇಡ್‌ನ ಹೆಮ್ಮೆ
ಕಲಾಪ: ನಾಯಕರು ಒಳಗೆ, ನೈತಿಕತೆ ಹೊರಗೆ!
ಎಂಇಎಸ್: ಭಾಷೆಯ ಹೆಸರಲ್ಲಿ ದ್ವೇಷದ ಬೀಜ
ಸತ್ಯಂ ರಾಜು: ನೆಲದ ಕಾನೂನು v/s ನೆಲದ ಪ್ರೀತಿ