ಅವಿನಾಶ್ ಬಿ. ಅದೊಂದು ಕಾಲವಿತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತ ಜಗತ್ತನ್ನು ಪುರುಷರೇ ಆಳುತ್ತಿದ್ದರು. ಮಹಿಳಾ ಕಲಾವಿದರು ತೀರಾ ಖಾಸಗಿ, ಮನೆ ಸಮಾರಂಭದ ಹಾಡುಗಾರಿಕೆಗೆ ಮಾತ್ರವೇ ಸೀಮಿತವಾಗಿದ್ದ ಕಾಲವದು. ಅಂಥ ಸಂದರ್ಭದಲ್ಲಿ ಈ ಪುರುಷ ಪ್ರಾಧಾನ್ಯ ಕ್ಷೇತ್ರದಲ್ಲಿ ಮಹಿಳಾ ಪಾರುಪತ್ಯಕ್ಕೆ ಮುನ್ನುಡಿ ಹಾಡಿದವರು ಡಿ.ಕೆ.ಪಟ್ಟಮ್ಮಾಳ್. ಅಂಥ ಮಹಾನ್ ಕಲಾವಿದೆ, ಸಂಗೀತ ಸರಸ್ವತಿ ಗುರುವಾರ ಚೆನ್ನೈಯ ಕೊಟ್ಟೂರುಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಜೀವನದ ಸಂಗೀತ ಕಛೇರಿಗೆ ಮಂಗಳ ಹಾಡಿದ್ದಾರೆ.WD ಕರ್ನಾಟಕ ಸಂಗೀತದ ಪಿತಾಮಹ ಎಂದೇ