ಅವಿನಾಶ್ ಬಿ. PTI ದೇಶದೊಳಗೇ ಅವಿತುಕೊಂಡು ಬಾಂಬ್ ದಾಳಿ ನಡೆಸುತ್ತಾ, ವಿಧ್ವಂಸಕ ಕೃತ್ಯ ನಡೆಸುತ್ತಿರುವ ಉಗ್ರಗಾಮಿಗಳನ್ನಾಗಲೀ, ಹಗಲು ದರೋಡೆ ಮಾಡುವ ಭ್ರಷ್ಟ ಅಧಿಕಾರಿಗಳನ್ನಾಗಲೀ ಶಿಕ್ಷಿಸಲು ನಮಗೆ ಸಾಧ್ಯವಾಗುತ್ತಲೇ ಇಲ್ಲ. ಆದರೆ, ಭ್ರಷ್ಟಾಚಾರ ನಿಲ್ಲಿಸಿ, ವಿದೇಶದಲ್ಲಿ ಭ್ರಷ್ಟರು ಕೂಡಿಟ್ಟಿರುವ ಕಾಳಧನ ಭಾರತಕ್ಕೆ ತಂದು, ಜನಕಲ್ಯಾಣಕ್ಕೆ ವಿನಿಯೋಗಿಸಿ ಎಂದು ಸತ್ಯ-ಆಗ್ರಹ ಮಾಡುತ್ತಿರುವ ನಿರಾಯುಧ, ನಿಷ್ಪಾಪಿ ಜನ ಸಾಮಾನ್ಯರ ಮೇಲೆ ನಿರ್ದಾಕ್ಷಿಣ್ಯವಾಗಿ ದೌರ್ಜನ್ಯ ನಡೆಸುತ್ತೇವೆ. ಕೊಲೆಗಡುಕರಿಗೆ ನ್ಯಾಯಾಲಯ ದಂಡನೆ ವಿಧಿಸಿದರೂ ಶಿಕ್ಷೆ ಜಾರಿಗೊಳಿಸಲು ಹಿಂದೆ