ಅವಿನಾಶ್ ಬಿ. WD ಶಾಂತಿಯುತ ಚಳವಳಿ ನಡೆಸುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಿ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಹೊಡೆದೋಡಿಸಿ 65 ವರ್ಷಗಳ ಸ್ವಾತಂತ್ರ್ಯದ ಬಳಿಕ ಹೊಸದೊಂದು ವರ್ಷವು ಇಷ್ಟು ಕೆಟ್ಟದಾಗಿ ದಬ್ಬಾಳಿಕೆಯಿಂದಲೇ ಆರಂಭವಾಗಿರುವುದು ಜನ ಸಾಮಾನ್ಯನ ದುರಂತ! ಗಾಂಧೀವಾದಿ ಅಣ್ಣಾ ಹಜಾರೆಯವರಿದ್ದ ಮಯೂರ್‌ಗಂಜ್ ಮನೆಯೊಳಗೆ ಯಾವುದೇ ಸೆಕ್ಷನ್ 144 ಇಲ್ಲದಿದ್ದರೂ, ಅಥವಾ ಅವರು ಯಾವುದೇ ಅಪರಾಧ ಕೃತ್ಯಗಳನ್ನು ಎಸಗಲು ಹೊರಟಿಲ್ಲ ಎಂಬುದು ಹಾಲಿನಷ್ಟೇ ಬೆಳ್ಳಗಿನ ಸತ್ಯವಾಗಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು