ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಇಬ್ಬರು ಏಷ್ಯದ ಬಾಲಕರಿಗೆ ಇರಿತ
ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಏಷ್ಯದ ಇಬ್ಬರು ಬಾಲಕರಿಗೆ ಇರಿದು ಗಾಯಗೊಳಿಸಿದ ಘಟನೆ ಗ್ಲಾಸ್ಗೊ ನಗರ ಕೇಂದ್ರದಲ್ಲಿ ಸಂಭವಿಸಿದೆ. 17ರ ವಯೋಮಾನದ ಇಬ್ಬರು ಬಾಲಕರು ನಗರದ ಟ್ರಾಂಗೇಟ್ ಬಳಿ 11.30ಕ್ಕೆ ಹಾದುಹೋಗುವಾಗ 9 ಬಿಳಿಯ ಯುವಕರು ಅವರನ್ನು ಸಂಧಿಸಿ ದಾಳಿ ಮಾಡಿದರು.

ಇಬ್ಬರು ಬಾಲಕರನ್ನು ಗ್ಲಾಸ್ಗೊ ಆಸ್ಪತ್ರೆಗೆ ಸೇರಿಸಲಾಗಿದೆ. ಒಬ್ಬನಿಗೆ ಬೆನ್ನಿನಲ್ಲಿ ಇರಿತದ ಗಾಯಕ್ಕೆ ಚಿಕಿತ್ಸೆ ನೀಡಲಾಗಿದೆ. ಇನ್ನೊಬ್ಬ ಬಾಲಕನನ್ನು ತೆಲೆಗೆ ಉಂಟಾದ ಗಾಯಕ್ಕೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಗ್ಲಾಸ್ಗೊ ವಿಮಾನನಿಲ್ದಾಣ ದಾಳಿಯ ಬಳಿಕ ಜನಾಂಗೀಯ ಹಿಂಸಾಚಾರಗಳು ಉಲ್ಬಣಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜು.1 ಮತ್ತು 27ರ ನಡುವೆ 258 ಜನಾಂಗೀಯ ದಾಲಿಗಳು ನಡೆದಿದ್ದು, ಅವುಗಳಲ್ಲಿ 31 ವಿಮಾನನಿಲ್ದಾಣ ಘಟನೆಗೆ ಸಂಬಂಧಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಮತ್ತಷ್ಟು
"ಇಂಡಿಯ ಅಟ್ ಸಿಕ್ಸ್ಟಿ" ಉದ್ಘಾಟನೆ
ಟೈಟಾನಿಕ್ ಕೀಗೆ 90,000 ಪೌಂಡ್‌
ಲಂಡನ್: ಏಷ್ಯ ಮಹಿಳೆಯರ ಆತ್ಮಹತ್ಯೆ
ಭಾರತದ ಭೇಟಿಗೆ ಚೀನಿಯರ ಕುತೂಹಲ
ಭುಟ್ಟೋ ಜತೆ ನೂತನ ಐಎಸ್ಐ ಚರ್ಚೆ
ಯೋಗ ಶಿಬಿರಕ್ಕೆ ಬೆದರಿಕೆ: ನಿರಾಕರಿಸಿದ ಮಾವೋವಾದಿಗಳು