ಬ್ರಿಟನ್‌ನ ಗಾಂಜಾ ಬೆಳೆಯ ಕಾರ್ಖಾನೆಗಳಲ್ಲಿ ಕೆಲಸ ಮಾಡಲು 13 ವರ್ಷದಷ್ಟು ಎಳೆಯ ಪ್ರಾಯದ ಆಗ್ನೇಯ ಏಷ್ಯದ ಮಕ್ಕಳನ್ನು ಕಳ್ಳಸಾಗಣೆ ಮಾಡುತ್ತಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಈ ಕಾರ್ಖಾನೆಗಳಲ್ಲಿ ವಾರಕ್ಕೆ ಒಬ್ಬ ಬಾಲಕನನ್ನಾದರೂ ಕಾರ್ಖಾನೆಗಳಿಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಅಂಕಿಅಂಶ ರುಜುವಾತು ಮಾಡಿದೆ.
ಬ್ರಿಟನ್‌ನ ಉಪನಗರ ಮತ್ತು ಪಟ್ಟಣಗಳಲ್ಲಿ ಮಕ್ಕಳನ್ನು ಸೆರೆಯಿಡಲಾಗುತ್ತಿದ್ದು, ಕಳೆದ ವರ್ಷ ಈ ವ್ಯವಹಾರ ಐದು ಪಟ್ಟು ಹೆಚ್ಚಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಬ್ರಿಟನ್‌ನ ಗಾಂಜಾ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಲು ಕೆಲವು ಸಂಘಟಿತ ಅಪರಾದ ಗ್ಯಾಂಗ್‌ಗಳು ಲಗ್ಗೆಇಟ್ಟಿವೆ ಎಂದು ಪೊಲೀಸರು ನಂಬಿದ್ದಾರೆ.
ಮೂರು ಕೋಣೆಯ ಮನೆಯನ್ನು ಗಾಂಜಾ ಕಾರ್ಖಾನೆಯಾಗಿ ಪರಿವರ್ತಿಸುವ ಮೂಲಕ ಗ್ಯಾಂಗ್‌ಗಳು ಪ್ರತಿವರ್ಷ 300,000 ಪೌಂಡ್ ಲಾಭಗಳಿಸುತ್ತಿದೆ.ಮಕ್ಕಳನ್ನು ಗಾಂಜಾ ಗಿಡಗಳನ್ನು ಪೋಷಿಸಲು ಕರೆತರಲಾಗುತ್ತದೆ.
ಮನೆಗಳಲ್ಲಿ ಬಂಧಿಯಾಗುವ ಮಕ್ಕಳು ತಪ್ಪಿಸಿಕೊಳ್ಳದಂತೆ ಬಾಗಿಲು, ಕಿಟಕಿಗಳನ್ನು ಮುಚ್ಚಿ ಅಪಾಯಕಾರಿ ವಿದ್ಯುತ್ ಶಾಕ್ ನೀಡುವ ವೈರಿಂಗ್ ಮಾಡಲಾಗುತ್ತದೆ. ಪೊಲೀಸರು ನಿತ್ಯ ಎರಜು ಮನೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ.
ಗಾಂಜಾ ಬೆಳೆಗೆ ಬಲವಂತದ ದುಡಿಮೆಗೆ ಒಡ್ಡಲು ಬಾಲಕರನ್ನು ಖರೀದಿ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ಬಾಲವೇಶ್ಯಾವಾಟಿಕೆ, ಮಕ್ಕಳ ಲಂಪಟ ಸಾಹಿತ್ಯ ಮತ್ತು ಲೈಂಗಿಕ ಉದ್ದೇಶಗಳಿಗೆ ಮಕ್ಕಳ ಕಳ್ಳಸಾಗಣೆ ತಡೆಯ ನಿರ್ದೇಶಕ ಕ್ರಿಶ್ಚೈನ್ ಬೆಡ್ಡೊ ತಿಳಿಸಿದರು.
|