ಶ್ರೀಲಂಕಾದ ಉತ್ತರ ಭಾಗದಲ್ಲಿ ಸೇನಾಪಡೆ ಮತ್ತು ಉಗ್ರರ ನಡುವೆ ಭಾರಿ ಕಾಳಗ ಮುಂದುವರೆದಿದ್ದು,29 ಉಗ್ರರು ಸಾವನ್ನಪ್ಪಿದ್ದು, 36 ಉಗ್ರರು ಗಾಯಗೊಂಡಿದ್ದಾರೆಂದು ಸೇನಾಪಡೆಯ ಮೂಲಗಳು ತಿಳಿಸಿವೆ.
ಜಾಫ್ನಾದ ಬಳಿ ಇರುವ ಕಿಲಾಲಿ ಸೈನಿಕ ಶಿಬಿರದ ಬಳಿ ಉಗ್ರರು ದಾಳಿಗೆ ಯತ್ನಿಸಿದಾಗ ಮರುದಾಳಿಯಲ್ಲಿ ಉಗ್ರರು ಹತರಾಗಿದ್ದು,ಸೇನಾಪಡೆ ಆಪಾರ ಪ್ರಮಾಣದ ಟಿ-56 ಅಟೋಮ್ಯಾಟಿಕ್ ರೈಫಲ್‌ಗಳನ್ನು, ಶಸ್ತ್ರಾಸ್ತ್ರಗಳನ್ನು ಸೇನಾಪಡೆ ವಶಪಡಿಸಿಕೊಂಡಿದೆ ಎಂದು ಸೇನಾಪಡೆಯ ವಕ್ತಾರರು ಹೇಳಿದ್ದಾರೆ.
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ 9 ಉಗ್ರರು ಸಾವನ್ನಪ್ಪಿದ್ದು, ಹಲವಾರು ಉಗ್ರರು ಗಾಯಗೊಂಡಿದ್ದಾರೆ ಎಂದು ಸೇನಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರ ರೇಡಿಯೊ ಸಂಪರ್ಕ ವ್ಯವಸ್ಥೆಯನ್ನು ಸೇನಾಪಡೆಗಳು ಧ್ವಂಸಗೊಳಿಸಿದ್ದು, ದಾಳಿಯಲ್ಲಿ ಕೆಲ ಸೈನಿಕರು ಗಾಯಗೊಂಡಿದ್ದು ಅವರನ್ನು ಹತ್ತಿರದ ಸೇನಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
|