ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಪ್ರತಿಪಕ್ಷದ ಮುಖಂಡರ ಬಂಧನಕ್ಕೆ ಖಂಡನೆ
ಅಧ್ಯಕ್ಷೀಯ ಚುನಾವಣೆಗೆ ಮುನ್ನ ಪ್ರತಿಪಕ್ಷದ ನಾಯಕರನ್ನು ಬಂಧಿಸುತ್ತಿರುವ ಸರ್ಕಾರದ ಕ್ರಮವನ್ನು ಪಾಕಿಸ್ತಾನ ಮಾಧ್ಯಮ ಖಂಡಿಸಿದೆ. ಪಾಕಿಸ್ತಾನ ದಿನಪತ್ರಿಕೆ "ನ್ಯೂಸ್" ತನ್ನ ಸಂಪಾದಕೀಯದಲ್ಲಿ ಈ ಬಗ್ಗೆ ಬರೆದಿದ್ದು, ಪ್ರತಿಪಕ್ಷದ ಸಂಸತ್ ಸದಸ್ಯರು ಸಂಸತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದಂತೆ ಸರ್ಕಾರ ಬಂಧಿಸಿರುವುದು ಬಹುಶಃ ಇದೇ ಮೊದಲ ಬಾರಿ" ಎಂದು ತಿಳಿಸಿದೆ.

ಮುಷರ್ರಫ್ ಕ್ರಮದಿಂದ ದೇಶದಲ್ಲಿ ರಾಜಕೀಯ ಕ್ಷೋಬೆ ಉಂಟಾಗಬಹುದು ಮತ್ತು ಪ್ರತಿಪಕ್ಷಕ್ಕೆ ಅನೂಕೂಲ ಕಲ್ಪಿಸುತ್ತದೆ ಎಂದು ಪತ್ರಿಕೆಗಳು ಎಚ್ಚರಿಸಿವೆ.

ಪ್ರತಿಪಕ್ಷದ ಯಾವುದೇ ಅಹಿತಕಾರಿ ನಿಲುವನ್ನು ತಡೆಯಲು ಈ ದಾಳಿಯನ್ನು ಮಾಡಲಾಗಿದೆ. ಸರ್ಕಾರದ ದೃಷ್ಟಿಯಲ್ಲಿ ಮುಷರ್ರಫ್ ಅವರು ಸುಸೂತ್ರವಾಗಿ ಅಧ್ಯಕ್ಷರಾಗಲು ಇದು ಅಡ್ಡಿಯಾಗುತ್ತದೆ ಎಂದು ಹೇಳಿದ ಪತ್ರಿಕೆ ಮುಷರ್ರಫ್ ಆಡಳಿತಕ್ಕೆ ಕಷ್ಟದ ದಿನಗಳು ಕಾದಿವೆ ಎಂದು ಎಚ್ಚರಿಸಿದೆ.
ಮತ್ತಷ್ಟು
ಭಾರಿ ಕಾಳಗ: 31 ಉಗ್ರರ ಸಾವು
ಏಷ್ಯದ ಮಕ್ಕಳ ಕಳ್ಳಸಾಗಣೆ
ಇಬ್ಬರು ಏಷ್ಯದ ಬಾಲಕರಿಗೆ ಇರಿತ
"ಇಂಡಿಯ ಅಟ್ ಸಿಕ್ಸ್ಟಿ" ಉದ್ಘಾಟನೆ
ಟೈಟಾನಿಕ್ ಕೀಗೆ 90,000 ಪೌಂಡ್‌
ಲಂಡನ್: ಏಷ್ಯ ಮಹಿಳೆಯರ ಆತ್ಮಹತ್ಯೆ