ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಸೇತುವೆ ಕುಸಿದು 27 ಕಾರ್ಮಿಕರ ಸಾವು
ವಿಯೆಟ್ನಾಂನ ದಕ್ಷಿಣ ನಗರ ಕ್ಯಾನ್ ಥೋನಲ್ಲಿ ನಿರ್ಮಿಸುತ್ತಿದ್ದ ಸೇತುವೆ ಬುಧವಾರ ಕುಸಿದುಬಿದ್ದು, ಕನಿಷ್ಠ 27 ಕಾರ್ಮಿಕರು ಸತ್ತಿದ್ದಾರೆ. ಅಪಘಾತ ಸಂಭವಿಸಿದಾಗ, ಸೇತುವೆ ಕೆಳಗೆ ಅಟ್ಟಣಿಗೆಯಲ್ಲಿ 100 ಕಾರ್ಮಿಕರಿದ್ದರು ಮತ್ತು ಸೇತುವೆಯ ಮೇಲೆ 150 ಕಾರ್ಮಿಕರು ಕೆಲಸ ಮಾಡುತ್ತಿದ್ದರೆಂದು ಕ್ಯಾನ್ ಥೋ ಪೊಲೀಸ್ ಅಧಿಕಾರಿ ತಿಳಿಸಿದರು.

ಸತ್ತವರ ಸಂಖ್ಯೆ ನಿಖರವಾಗಿ ತಿಳಿದಿಲ್ಲ ಎಂದು ಹೇಳಿದ ಅವರು, ಸುಮಾರು 100 ಜನರು ಸತ್ತಿರಬಹುದು ಅಥವಾ ನಾಪತ್ತೆಯಾಗಿರಬಹುದು ಎಂದರು. ಹಾವ್ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿದ್ದ ಸೇತುವೆಯ ಅಟ್ಟಣಿಗೆ ಬೆಳಿಗ್ಗೆ 8.30ಕ್ಕೆ ಕುಸಿದಾಗ ನಮಗೆ ಭಾರೀ ಶಬ್ದ ಕೇಳಿತು.

ಬಳಿಕ ಧೂಳಿನ ಮೋಡ ಆವರಿಸಿತು ಹಾಗೂ ಅವಶೇಷಗಳಲ್ಲಿ ಸಿಕ್ಕಿದ ಕಾರ್ಮಿಕರ ಆಕ್ರಂದನ ಕೇಳಿಬಂತು ಎಂದು ಸೇತುವೆ ಎಂಜಿನಿಯರ್ ಹೇಳಿಕೆಯನ್ನು ಉಲ್ಲೇಖಿಸಿ ರಾಜ್ಯ ಸ್ವಾಮ್ಯದ ಆನ್‌ಲೈನ್ ಸುದ್ದಿಪತ್ರಿಕೆ ವರದಿಮಾಡಿದೆ.

ಗಾಯಾಳುಗಳ ಪ್ರಾಣವುಳಿಸಲು ನಾವು ವಿದ್ಯಾರ್ಥಿಗಳು ಮತ್ತು ಸೇನಾ ಕಾರ್ಯಕರ್ತರಿಗೆ ರಕ್ತದಾನ ಮಾಡುವಂತೆ ಕೋರಿದ್ದೇವೆ ಎಂದು ಉಪಸಾರಿಗೆ ಸಚಿವರು ತಿಳಿಸಿದ್ದಾರೆ.
ಮತ್ತಷ್ಟು
ಪ್ರತಿಪಕ್ಷದ ಮುಖಂಡರ ಬಂಧನಕ್ಕೆ ಖಂಡನೆ
ಭಾರಿ ಕಾಳಗ: 31 ಉಗ್ರರ ಸಾವು
ಏಷ್ಯದ ಮಕ್ಕಳ ಕಳ್ಳಸಾಗಣೆ
ಇಬ್ಬರು ಏಷ್ಯದ ಬಾಲಕರಿಗೆ ಇರಿತ
"ಇಂಡಿಯ ಅಟ್ ಸಿಕ್ಸ್ಟಿ" ಉದ್ಘಾಟನೆ
ಟೈಟಾನಿಕ್ ಕೀಗೆ 90,000 ಪೌಂಡ್‌