ಮಹಿಳೆಯೊಬ್ಬಳ ವಿರುದ್ಧ ಅವಮಾನಕಾರಿಯಾಗಿ ಲೇಖನ ಪ್ರಕಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತಿಂಗಳ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ಮೂಲದ ಇಬ್ಬರು ಪತ್ರಕರ್ತರಿಗೆ ಯುಎಇ ಉಪಾದ್ಯಕ್ಷ ಮತ್ತು ಪ್ರಧಾನಿ ಶೇಖ್ ಮಹ್ಮದ್ ಬಿನ್ ರಶಿದ್ ಅಲ್ ಮುಕ್ತಮ್ ಜಾಮೀನು ನೀಡಿದ್ದಾರೆ.
ತಮ್ಮ ಕರ್ತವ್ಯ ನಿರ್ವಹಿಸಿದ ಪತ್ರಕರ್ತರನ್ನು ಜೈಲು ಶಿಕ್ಷೆಗೆ ಗುರಿ ಮಾಡುವುದು ಸರಿಯಲ್ಲ ಎಂದು ನೀಡಿರುವ ಆದೇಶದಲ್ಲಿ ಒಂದು ಪಕ್ಷ ಪತ್ರಕರ್ತರು ತಪ್ಪಿತಸ್ಥರು ಎಂದು ದೃಡಪಟ್ಟಲ್ಲಿ ಅವರ ವಿರುದ್ಧ ಬೇರೆ ಹಾದಿಯಲ್ಲಿ ಕ್ರಮ ತೆಗೆದುಕೊಳ್ಳಬಹುದು ಎಂದು ವಿದೇಶಾಂಗ ಸಚಿವ ಮತ್ತು ರಾಷ್ಟ್ರೀಯ ಮಾದ್ಯಮ ಮಂಡಳಿ ಅಧ್ಯಕ್ಷ ಅಬ್ದುಲ್ಲಾ ಬಿನ್ ಜಾಯೆದ್ ಘೋಷಿಸಿದ್ದಾರೆ.
ಪತ್ರಕರ್ತನೊರ್ವನನ್ನು ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಮಾಡಿರುವ ಲೋಪದೋಷ ಇಲ್ಲವೆ ಅಪರಾಧಗಳಿಗೆ ಸಂಬಂಧಿಸಿದಂತೆ ಬಂಧಿಸುವುದು ಆಗಲಿ. ಜೈಲು ಶಿಕ್ಷೆಗೆ ಗುರಿಪಡಿಸುವುದು ಮಾಡತಕ್ಕದ್ದಲ್ಲ. ಪತ್ರಕರ್ತನು ಒಂದು ಸಂದರ್ಭದಲ್ಲಿ ಮಾದ್ಯಮದ ಕಾನೂನುಗಳನ್ನು ಉಲ್ಲಂಘಿಸಿದಲ್ಲಿ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಆದರೆ ಜೈಲು ಶಿಕ್ಷೆಯಾಗಿರ ಕೂಡದು ಎಂದು ಜಾಮೀನು ಆದೇಶದಲ್ಲಿ ತಿಳಿಸಲಾಗಿದೆ.
ಖಲೀಜ್ ಟೈಮ್ಸ್ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಮೂಲದ ಇಬ್ಬರು ಹಿರಿಯ ಪತ್ರಕರ್ತರಾದ ಎಸ್ ಕೆ ಗಂಗಾಧರನ್ ಮತ್ತು ಇಜಿಪ್ತ ಮೂಲದ ಹಿರಿಯ ಪತ್ರಕರ್ತ ಇರಾನಿ ಮಹಿಳೆಯೊರ್ವಳಿಗೆ ಅವಮಾನವಾಗುವ ರೀತಿಯಲ್ಲಿ ಲೇಖನ ಪ್ರಕಟಿಸಿದ್ದರು.
ದುಬೈ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಪತ್ರಕರ್ತರು ದೋಷಿಗಳು ಎಂದು ನ್ಯಾಯಾಲಯ ತೀರ್ಪು ನೀಡಿ ಎರಡು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.
|