ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಶಾಂತಿ ಭರವಸೆಯ ಒಪ್ಪಂದ: ಭುಟ್ಟೊ
PTI
60ನೇ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮುಂದಿನ ಪೀಳಿಗೆಗೆ ಶಾಂತಿಯ ಭರವಸೆ ನೀಡುವ ಒಪ್ಪಂದವನ್ನು ನೋಡಲು ಬಯಸುವುದಾಗಿ ಸ್ವಯಂ ಗಡೀಪಾರಾದ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, 1988ರ ಸಾರ್ಕ್ ನಾಯಕರ ಸಭೆಯಲ್ಲಿ ಸಾರ್ಕ್ ಸಂಘಟನೆಯನ್ನು ಸಾಂಸ್ಕೃತಿಕದಿಂದ ಆರ್ಥಿಕ ಸಂಘಟನೆಯಾಗಿ ಪರಿವರ್ತಿಸಲು ಭಾರತದ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಮತ್ತು ನಾನು ಕಾರ್ಯನಿರ್ವಹಿಸಿದ್ದಾಗಿ ಅವರು ಹೇಳಿದರು.

ಉಭಯ ರಾಷ್ಟ್ರಗಳ ನಡುವೆ ಪ್ರಸಕ್ತ ನಡೆಯುತ್ತಿರುವ ಜಂಟಿ ಮಾತುಕತೆಗೆ ಅವರು ಬೆಂಬಲ ವ್ಯಕ್ತಪಡಿಸಿದರು."ರಾಜೀವ್ ಗಾಂಧಿ ಮತ್ತು ನಾನು 1988ರಲ್ಲಿ ಈ ಪ್ರದೇಶದಲ್ಲಿ ಶಾಂತಿ ನಿರ್ಮಾಣಕ್ಕೆ ಪ್ರಯತ್ನಿಸಿದಾಗಿನಿಂದ ಭಾರತ ಮತ್ತು ಪಾಕಿಸ್ತಾನ ಬಹುದೂರ ಸಾಗಿದೆ.

ನಮ್ಮ ಪ್ರಯತ್ನವನ್ನು ಮಿಲಿಟರಿಯ ಒಂದು ಭಾಗ ಮತ್ತು ರಾಜಕೀಯ ವಿರೋಧಿಗಳು ಟೀಕಿಸಿದ್ದರು. ಆದರೆ ಈಗ ಮಿಲಿಟರಿ ಆಡಳಿತ ಮತ್ತು ವಿರೋದ ಪಕ್ಷಗಳು ಒಟ್ಟಿಗೆ ಬಂದಿರುವುದು ನನಗೆ ಅತ್ಯಂತ ತೃಪ್ತಿ ತಂದಿದೆ ಎಂದರು,

ಜಮ್ಮು ಕಾಶ್ಮೀರದ ಜನರು ಜಂಟಿ ಮಾತುಕತೆಗೆ ಬೆಂಬಲಿಸುವ ತನಕ ನಮ್ಮ ಬೆಂಬಲವೂ ಇರುತ್ತದೆ. ಆದರೆ ಜಂಟಿ ಮಾತುಕತೆಯ ಪ್ರಗತಿಯನ್ನು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.
ಮತ್ತಷ್ಟು
ಬಲೂಚಿಸ್ತಾನದಿಂದ ಮುಷರ್ರಫ್ ಪ್ರಚಾರ
ಮಿಲಿಟರಿ ಕಾರ್ಯಾಚರಣೆಗೆ ಖಂಡನೆ
ದುಬೈ: ಭಾರತೀಯ ಪತ್ರಕರ್ತರಿಬ್ಬರಿಗೆ ಜಾಮೀನು
ಸೇತುವೆ ಕುಸಿದು 27 ಕಾರ್ಮಿಕರ ಸಾವು
ಪ್ರತಿಪಕ್ಷದ ಮುಖಂಡರ ಬಂಧನಕ್ಕೆ ಖಂಡನೆ
ಭಾರಿ ಕಾಳಗ: 31 ಉಗ್ರರ ಸಾವು