ದಕ್ಷಿಣ ಆಫ್ಘಾನಿಸ್ತಾನದಲ್ಲಿ ನಡೆದ ಎರಡು ಪ್ರಮುಖ ಕದನಗಳಲ್ಲಿ ಅಮೆರಿಕ ನೇತೃತ್ವದ ಸಮ್ಮಿಶ್ರ ಪಡೆಗಳು ಯುದ್ಧವಿಮಾನಗಳ ನೆರವಿನೊಂದಿಗೆ ಸುಮಾರು 170 ತಾಲಿಬಾನ್ ಉಗ್ರಗಾಮಿಗಳನ್ನು ಹತ್ಯೆ ಮಾಡಿದೆ. ಅಮೆರಿಕ ಕೂಟದ ಸೈನಿಕನೊಬ್ಬ ಕೂಡ ಈ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.
ತಾಲಿಬಾನ್ ಭದ್ರಕೋಟೆ ಹೆಲ್ಮಂಡ್‌ನಲ್ಲಿ ಮಂಗಳವಾರ ಉಗ್ರರ ವಿರುದ್ಧ ಕದನ ಬುಧವಾರವೂ ಮುಂದುವರಿಯಿತು ಎಂದು ಹೇಳಿಕೆಯೊಂದು ತಿಳಿಸಿದೆ. ಕಾಲ್ದಳದ ಆರಂಭಿಕ ಅಂದಾಜಿನ ಪ್ರಕಾರ 104ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ. ಹೆಲ್ಮೆಂಡ್‌ನ ತಾಲಿಬಾನ್ ನಿಯಂತ್ರಿತ ಜಿಲ್ಲಾ ಕೇಂದ್ರ ಮುಸಾ ಖಲಾದಲ್ಲಿ ತಾಲಿಬಾನ್ ಉಗ್ರರ ವ್ಯಾಪಕ ಕಂದಕ ವ್ಯವಸ್ಥೆಯನ್ನು ನಾಶಪಡಿಸುವ ಗುರಿ ಹೊಂದಿದ್ದ ಸಮ್ಮಿಶ್ರ ಕೂಟ ಮತ್ತು ಆಫ್ಘನ್ ಪಡೆಗಳ ನಡುವೆ ಕದನ ನಡೆಯಿತು.
ತಾಲಿಬಾನ್ ಉಗ್ರರ ಇನ್ನೊಂದು ಅಡಗುತಾಣವಾದ ನೆರೆಯ ಉರುಜ್ಗಾನ್ ಪ್ರಾಂತ್ಯದಲ್ಲಿ ಕೂಡ ಮಂಗಳವಾರ 65 ಉಗ್ರರು ಹತರಾಗಿದ್ದರು.
|