ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಅಣು ಒಪ್ಪಂದದ ಜಾರಿಗೆ ಚಿದಂಬರಂ ಕರೆ
ಅಮೆರಿಕದ ಜತೆ ಪರಮಾಣು ಒಪ್ಪಂದದಿಂದ ಪರಮಾಣು ಏಕಾಂಗಿತನಕ್ಕೆ ಅಂತ್ಯಹೇಳುವ ಅವಕಾಶ ಸೇರಿದಂತೆ ಸಿಗುವ ಎಲ್ಲ ಅವಕಾಶಗಳನ್ನು ಕೈಬಿಟ್ಟರೆ ಭಾರತಕ್ಕೆ ಅದೊಂದು ವ್ಯರ್ಥ ಪ್ರಯತ್ನವಾಗುತ್ತದೆ ಎಂದು ವಿತ್ತ ಸಚಿವ ಪಿ. ಚಿದಂಬರಂ ಗುರುವಾರ ತಿಳಿಸಿದರು.
.
ಪರಮಾಣು ಒಪ್ಪಂದದ ಬಗ್ಗೆ ಪೆನ್ಸಿಲ್‌ವೇನಿಯಾ ವಿ.ವಿ. ವಾರ್ಟಾನ್ ಶಾಲೆ ವಿದ್ಯಾರ್ಥಿಗಳ ಜತೆ ಮಾತನಾಡುತ್ತಿದ್ದ ಅವರು, 123 ಒಪ್ಪಂದದ ಅನುಷ್ಠಾನಕ್ಕೆ ಭಾರತ ಮುಂದುವರೆದು ಮುಂದಿನ ಕ್ರಮಗಳನ್ನು ಮುಗಿಸಬೇಕು ಎಂದು ಅವರು ನುಡಿದರು.

ಒಪ್ಪಂದಕ್ಕೆ ಅನುಕೂಲವಾದ ಅನೇಕ ಅಂಶಗಳಿವೆ ಎಂದು ನಂಬಿರುವುದಾಗಿ ವಾರ್ಟನ್ ನಾಯಕತ್ವ ಉಪನ್ಯಾಸ ನೀಡುತ್ತಾ ಅವರು ಹೇಳಿದರು. ಭಾರತ ಇಂಧನದ ಅವಕಾಶ ಪಡೆಯುವುದರ ಜತೆಗೆ 22 ಪರಮಾಣು ಸ್ಥಾವರಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ನಡೆಸಬೇಕಾದ ಅಗತ್ಯವಿದೆ. ಜತೆಗೆ ಪರಮಾಣು ಒಂಟಿತನದಿಂದ ಅದು ಹೊರಬರಬೇಕಾಗಿದೆ ಎಂದು ವಿತ್ತಸಚಿವರು ಹೇಳಿದರು.

1974ರ ಅಣ್ವಸ್ತ್ರ ಪರೀಕ್ಷೆ ಬಳಿಕ ಭಾರತಕ್ಕೆ ಅಂತಾರಾಷ್ಟ್ರೀಯ ದಿಗ್ಭಂಧನ ಹೇರಲಾಯಿತು ಮತ್ತು 1998ರ ಪರೀಕ್ಷೆ ಬಳಿಕ ಪರಮಾಣು ಒಂಟಿತನ ಪೂರ್ಣಗೊಂಡಿತು. ಆದರೆ ನಾಗರಿಕ ಪರಮಾಣು ಒಪ್ಪಂದವು ಭಾರತವು ಎನ್‌ಪಿಟಿಗೆ ಸಹಿ ಹಾಕದೆಯೇ ಏಕಾಂಗಿತನಕ್ಕೆ ತೆರೆಎಳೆಯುತ್ತದೆ ಎಂದು ಹೇಳಿದರು.
ಮತ್ತಷ್ಟು
ಮುಷರ್ರಫ್ ನಾಮಪತ್ರ ಸಲ್ಲಿಕೆ
170 ತಾಲಿಬಾನ್ ಉಗ್ರರ ಹತ್ಯೆ
ಮಯನ್ಮಾರ್- ಬೌದ್ಧಕೇಂದ್ರಗಳ ಮೇಲೆ ದಾಳಿ
ಶಾಂತಿ ಭರವಸೆಯ ಒಪ್ಪಂದ: ಭುಟ್ಟೊ
ಬಲೂಚಿಸ್ತಾನದಿಂದ ಮುಷರ್ರಫ್ ಪ್ರಚಾರ
ಮಿಲಿಟರಿ ಕಾರ್ಯಾಚರಣೆಗೆ ಖಂಡನೆ