ಒಂದೊಮ್ಮೆ ಅಮೆರಿಕ ಭಾರತದ ಜತೆ ನಾಗರಿಕ ಪರಮಾಣು ಒಪ್ಪಂದವನ್ನು ಅಂತಿಮಗೊಳಿಸಿದರೆ, ಎರಡನೆ ಹಸಿರುಕ್ರಾಂತಿ ಆರಂಭಿಸುವ ಮೂಲಕ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ಜನರ ಆಕಾಂಕ್ಷೆಗಳನ್ನು ಈಡೇರಿಸಲು ನೆರವಾಗುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಂಡೋಲೀಜಾ ರೈಸ್ ಗುರುವಾರ ತಿಳಿಸಿದರು.
ಇಂಧನ ಭದ್ರತೆ ಮತ್ತು ಹವಾಮಾನ ಬದಲಾವಣೆ ಕುರಿತು ಪ್ರಮುಖ ಆರ್ಥಿಕತೆಗಳ ಅಮೆರಿಕ ಪ್ರಾಯೋಜಿತ ಎರಡು ದಿನಗಳ ಸಭೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡುತ್ತಿದ್ದ ಅವರು, ಹವಾಮಾನ ಬದಲಾವಣೆ ನಿಭಾಯಿಸಲು ಹೊಸ ಅಂತಾರಾಷ್ಟ್ರೀಯ ಒಮ್ಮತ ಮೂಡಿಸುವ ಜವಾಬ್ದಾರಿ ಜಾಗತಿಕ ನಾಯಕರಿಗಿದೆ ಎಂದು ಹೇಳಿದರು.
ಹವಾಮಾನ ಬದಲಾವಣೆ ನಿಜವಾದ ಸಮಸ್ಯೆಯಾಗಿದ್ದು, ಮಾನವ ಜನಾಂಗ ಅದಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದೆ. ಜಾಗತಿಕ ನಾಯಕರಾಗಿ ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಹೊಸ ಅಂತಾರಾಷ್ಟ್ರೀಯ ಒಮ್ಮತ ಬೆಸೆಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
|