ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದ ಜತೆ ಪ್ರಭಾವ ಹೊಂದಿರುವ ರಾಷ್ಟ್ರಗಳು ಪ್ರತಿಭಟನಾಕಾರರ ಮೇಲೆ ದಾಳಿಯನ್ನು ನಿಲ್ಲಿಸುವಂತೆ ಅದರ ನಾಯಕರಿಗೆ ಸೂಚಿಸಬೇಕೆಂದು ಅಮೆರಿಕದ ಅಧ್ಯಕ್ಷ ಬುಷ್ ಶುಕ್ರವಾರ ತಿಳಿಸಿದರು.
ಶಾಂತಿಯುತವಾಗಿ ಬದಲಾವಣೆ ಬಯಸಿರುವ ಸ್ವಂತ ಜನರ ಮೇಲೆ ಬಲಪ್ರಯೋಗ ಸ್ಥಗಿತಗೊಳಿಸುವಂತೆ ಜುಂಟಾಗೆ ಆದೇಶ ನೀಡಬೇಕು ಮತ್ತು ಬರ್ಮದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಜುಂಟಾ ಜತೆ ಪ್ರಭಾವ ಹೊಂದಿರುವ ರಾಷ್ಟ್ರಗಳು ನಮ್ಮ ಜತೆ ಕೈಗೂಡಿಸಬೇಕೆಂದು ಬುಷ್ ಹೇಳಿದ್ದಾರೆ.
ಬುಷ್ ಹೇಳಿಕೆಯಿಂದ ಮ್ಯಾನ್ಮಾರ್‌ನಲ್ಲಿ ಉಲ್ಭಣಿಸಿದ ಬಿಕ್ಕಟ್ಟಿನ ಶಮನಕ್ಕೆ ಭಾರತ ಮತ್ತು ಚೀನಾ ನೆರವು ನೀಡಬೇಕೆಂಬ ವಿಶ್ವ ನಾಯಕರ ದನಿಗೆ ಇಂಬು ಸಿಕ್ಕಿದೆ."ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ ಬರ್ಮದ ಜನರು ಬೀದಿಗಳಿರುವುದನ್ನು ಜಗತ್ತು ವೀಕ್ಷಿಸುತ್ತಿದೆ. ಅಮೆರಿಕದ ಜನತೆ ಈ ದಿಟ್ಟ ವ್ಯಕ್ತಿಗಳಿಗೆ ಬೆಂಬಲವಾಗಿ ನಿಂತಿದೆ.
ಪ್ರಜಾಪ್ರಭುತ್ವಕ್ಕೆ ಕೂಗೆಬ್ಬಿಸಿರುವ ಶಾಂತಿಯುತ ಪ್ರತಿಭಟನೆಕಾರರು ಮತ್ತು ಬಿಕ್ಕುಗಳ ಬಗ್ಗೆ ನಮಗೆ ಹೆಮ್ಮೆ, ಅನುಕಂಪವಿದೆ" ಎಂದು ಮ್ಯಾನ್ಮಾರ್‌ನ ಹಳೆಯ ಹೆಸರನ್ನು ಉಲ್ಲೇಖಿಸಿ ಬುಷ್ ಹೇಳಿದರು.
|