ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಇರಾನ್ ಮೇಲೆ ಒತ್ತಡ: ಸಮಯ ಕೇಳಿದ ರಷ್ಯಾ, ಚೀನಾ
ಯುರೇನಿಯಂ ಸಂವರ್ಧನೆ ಚಟುವಟಿಕೆಗಳನ್ನು ಸ್ಥಗಿತಗೊಳಿಸದಿದ್ದರೆ ಇರಾನ್ ಮೇಲೆ ಒತ್ತಡ ಹೇರುವುದಕ್ಕಾಗಿ, ಕಠಿಣ ನಿರ್ಬಂಧ ವಿಧಿಸುವ ನಿಟ್ಟಿನಲ್ಲಿ ನವೆಂಬರ್ ಮಧ್ಯದವರೆಗೆ ಕಾದುನೋಡಲು ವಿಶ್ವದ ಆರು ಪ್ರಮುಖ ರಾಷ್ಟ್ರಗಳು ನಿರ್ಧರಿಸಿವೆ. ಇದರೊಂದಿಗೆ ತೆಹ್ರಾನ್‌ನ ಮೇಲೆ ಒತ್ತಡ ಹೇರುವ ಅಮೆರಿಕ ಬೆಂಬಲಿತ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಇರಾನಿನ ವಿವಾದಿತ ಅಣುಶಕ್ತಿ ಕಾರ್ಯಕ್ರಮಕ್ಕೆ ಸಂಬಂಧಿಸಿ ಒತ್ತಡವನ್ನು ಬಲಪಡಿಸುವ ಪ್ರಯತ್ನಕ್ಕೆ ಬೆಂಬಲಿಸುವಂತೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವೀಟೋ ಅಧಿಕಾರವಿರುವ ಎರಡು ರಾಷ್ಟ್ರಗಳಾದ ರಷ್ಯಾ ಮತ್ತು ಚೀನಾದ ಮನವೊಲಿಸಲು, ಭದ್ರತಾ ಮಂಡಳಿಯ ಇತರ ಮೂರು ಖಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯ ವಿದೇಶಾಂಗ ಸಚಿವರು ವಿಫಲವಾಗಿದ್ದಾರೆ.

ವಿಶ್ವಸಂಸ್ಥೆಯ ಪರಮಾಣು ಮೇಲ್ವಿಚಾರಣಾ ಸಂಸ್ಥೆ - ಅಂತಾರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿ (ಐಎಇಎ) ಮತ್ತು ಐರೋಪ್ಯ ಒಕ್ಕೂಟಗಳ ವಿದೇಶಾಂಗ ನೀತಿ ವಿಭಾಗದ ಮುಖ್ಯಸ್ಥ ಜೇವಿಯರ್ ಸೊಲಾನಾ ನವೆಂಬರ್ ತಿಂಗಳೊಳಗೆ ಸಲ್ಲಿಸಲಿರುವ ವರದಿ ಧನಾತ್ಮಕವಾಗದಿದ್ದಲ್ಲಿ, ಮೂರನೇ ಸುತ್ತಿನ ನಿರ್ಬಂಧಗಳ ಕುರಿತ ಹೊಸ ನಿರ್ಣಯವನ್ನು ಅಂತಿಮಗೊಳಿಸಲಾಗುವುದು ಹಾಗೂ ಅದನ್ನು ಮತಕ್ಕೆ ಹಾಕುವುದಾಗಿ 5 ಖಾಯಂ ಸದಸ್ಯರು ಮತ್ತು ಜರ್ಮನಿಯ ಜಂಟಿ ಹೇಳಿಕೆಯೊಂದು ತಿಳಿಸಿದೆ.

ಆದರೆ, ಇರಾನಿಗೆ ಬಲವಾದ ಮತ್ತು ಕಠಿಣ ಸಂದೇಶ ನೀಡಲಾಗಿದೆ ಎಂದು ಅಮೆರಿಕ ರಾಜ್ಯಾಂಗ ಅಧೀನ ಕಾರ್ಯದರ್ಶಿ ನಿಕೋಲಾಸ್ ಬರ್ನ್ ಹೇಳಿಕೊಂಡಿದ್ದಾರೆ. ಸಭೆಯಲ್ಲಿ, ಅಮೆರಿಕವು ತ್ವರಿತ ಕ್ರಮಕ್ಕಾಗಿ ಒತ್ತಡ ಹೇರಿದ್ದರೆ, ರಷ್ಯಾವು ವಿವಾದ ಪರಿಹಾರ ಕುರಿತ ಮಾತುಕತೆಗಾಗಿ ಸಮಯಾವಾಕಾಶ ಕೋರಿದೆ ಎಂದು ರಾಯಭಾರಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.

ಐಎಇಎ ಇರಾನ್ ಪರಮಾಣುಶಕ್ತಿ ಕಾರ್ಯಕ್ರಮದ ವಿಷಯವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದು, ಇರಾನ್‌ನ ರಾಷ್ಟ್ರೀಯ ಭದ್ರತಾ ಮುಖ್ಯಸ್ಥ ಅಲ್ ಲಾರಿಜಾನಿ ಅವರೊಂದಿಗೆ ಮಾತುಕತೆ ನಡೆಸಲು ಸೊಲಾನಾರನ್ನು ಕೋರಲು, ಆರು ರಾಷ್ಟ್ರಗಳು ಒಪ್ಪಿವೆ.
ಮತ್ತಷ್ಟು
ಮಯನ್ಮಾರ್: ಪ್ರತಿಭಟನಾಕಾರರ ಮೇಲೆ ಮತ್ತೆ ಪ್ರಹಾರ
ಮ್ಯಾನ್ಮಾರ್: ದಾಳಿ ನಿಲ್ಲಿಸಲು ಬುಷ್ ಕರೆ
ರಷ್ಯದಲ್ಲಿ ತೇಲುವ ಅಣು ವಿದ್ಯುತ್ ಸ್ಥಾವರ
ಅಧ್ಭಕ್ಷ ಹುದ್ದೆ ಸ್ಪರ್ಧೆಗೆ ಮುಷರ್ರಫ್‌ಗೆ ಅನುಮತಿ
ಬಿಕ್ಕುಗಳ ಮೇಲೆ ಬಲಪ್ರಯೋಗಕ್ಕೆ ಖಂಡನೆ
ಪರಮಾಣು ಒಪ್ಪಂದದಿಂದ ಹಸಿರು ಕ್ರಾಂತಿ