ಫಿಲಿಪೈನ್ ದೇಶ ಅಧ್ಯಕ್ಷ ಗ್ಲೊರಿಯಾ ಅರ್ರೊಯೊ ಅವರು ದಶಕಗಳ ನಂತರ ಮೊದಲ ಬಾರಿಗೆ ಮಂಗಳವಾರದಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ವ್ಯವಸ್ಥಿತ ವ್ಯವಹಾರ, ಪ್ರೋತ್ಸಾಹ ಮತ್ತು ಎರಡೂ ದೇಶಗಳ ನಡುವೆ ರಾಜಕೀಯ ವಿಲೀನತೆಯೇ ಅವರ ಭೇಟಿಯ ಮುಖ್ಯ ಉದ್ದೇಶವಾಗಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಅಧ್ಯಕ್ಷ ಅರ್ರೊಯೊ ಅವರು ಪ್ರಧಾನಿ ಮನ್‌ಮೋಹನ್ ಸಿಂಗ್ ಅವರ ಭೇಟಿಯ ನಂತರ ರಾಜಧಾನಿಯಲ್ಲಿ ವ್ಯವಹಾರ ಮುಖಂಡರನ್ನು ಮತ್ತು ಮುಂಬೈನಲ್ಲಿ ಹಣಕಾಸಿನ ಕೇಂದ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.
ದಶಕಗಳ ನಂತರ ಮೊದಲ ಬಾರಿಗೆ ಫಿಲಿಫೈನ್ ಅಧ್ಯಕ್ಷ ಅರ್ರೊಯೊ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. 1997ರಲ್ಲಿ ಅಧ್ಯಕ್ಷ ಫಿಡೆಲ್ ರಾಮೊಸ್ ಅವರ ಭೇಟಿ ಕೊನೆಯದಾಗಿತ್ತು. ಉತ್ತಮ ವಿಲೀನತೆಗೆ ಭರವಸೆ ಮತ್ತು ಬಲವಾದ ಸಹಭಾಗಿತ್ವ ಭೇಟಿಯ ಉದ್ದೇಶವಾಗಿದೆ.
ಇದೇ ಕುರಿತಾಗಿ ಮಾತನಾಡಿದ ಜವಹರಲಾಲ್ ನೆಹರೂ ವಿಶ್ವವಿಧ್ಯಾಲಯದ ಅಂತಾರಾಷ್ಟ್ರೀಯ ಅದ್ಯಯನ ಕೇಂದ್ರದ ಪ್ರಾಧ್ಯಾಪಕ ಮೊಹಿನಿ ಕೌಲ್, ಭಾರತವು ಮಲೇಶಿಯಾ ಮತ್ತು ಥೈಲ್ಯಾಂಡಿನೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಿದ್ದು. ಕಳೆದ ಒಂದು ದಶಕದಿಂದ ಫಿಲಿಪೈನ್‌ನೊಂದಿಗೆ ದ್ವಿಪಕ್ಷೀಯ ಸಂಬಂಧಗಳಲ್ಲಿ ಸುಧಾರಣೆಯಾಗಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶೀಘ್ರ ಆರ್ಥಿಕ ಬೆಳವಣಿಗೆಯನ್ನು ಹೊಂದುತ್ತಿರುವ ಆಗ್ನೇಯ ಏಷಿಯಾದೊಡನೆ ಹೊಸ ವಿಲೀನತೆ ಸಾಧಿಸಲು ಭಾರತವು 1990ಗಲ್ಲಿ ಪೂರ್ವಾತ್ಯ ದೇಶಗಳೊಂದಿಗೆ ವಿದೇಶಿ ಸಂಬಂಧಗಳನ್ನು ದೃಡಗೊಳಿಸುವ ತನ್ನ ವಿದೇಶಾಂಗ ನೀತಿಯನ್ನು ಬಿಡುಗಡೆಗೊಳಿಸಿತ್ತು. ಆದರೆ ಭಾರತದ ಆಗಿನ ಪಟ್ಟಿಯಲ್ಲಿ ಫಿಲಿಫೈನ್ ದೇಶವು ಕಾಣಿಸಿಕೊಂಡಿರಲಿಲ್ಲ ಎಂದು ವಿವರಿಸಿದ್ದಾರೆ.
|