ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಫಿಲಿಫೈನ್ಸ್ ಅಧ್ಯಕ್ಷ ಗ್ಲೊರಿಯಾ ಭಾರತ ಪ್ರವಾಸ
ದಶಕದ ನಂತರ ಫಿಲಿಫೈನ್ಸ್ ಅಧ್ಯಕ್ಷರು ಭಾರತಕ್ಕೆ ಪ್ರಥಮ ಬಾರಿಗೆ ಮಂಗಳವಾರದಂದು ಆಗಮಿಸಿ, ಉಭಯ ರಾಷ್ಟ್ರಗಳ ಶಕ್ತಿ ಸಂವರ್ಧನೆ ಕುರಿತು ಚರ್ಚಿಸಲಿದ್ದಾರೆ.

ಫಿಲಿಪೈನ್ ದೇಶ ಅಧ್ಯಕ್ಷ ಗ್ಲೊರಿಯಾ ಅರ್ರೊಯೊ ಅವರು ವ್ಯವಸ್ಥಿತ ವ್ಯವಹಾರ, ಪ್ರೋತ್ಸಾಹ ಮತ್ತು ಎರಡೂ ದೇಶಗಳ ನಡುವೆ ರಾಜಕೀಯ ವಿಲೀನತೆಯೇ ಕುರಿತು ಚರ್ಚಿಸಲಿದ್ದಾರೆಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಅಧ್ಯಕ್ಷ ಅರ್ರೊಯೊ ಅವರು ಪ್ರಧಾನಿ ಮನ್‌ಮೋಹನ್ ಸಿಂಗ್ ಅವರ ಭೇಟಿಯ ನಂತರ ರಾಜಧಾನಿಯಲ್ಲಿ ವ್ಯವಹಾರ ಮುಖಂಡರನ್ನು ಮತ್ತು ಮುಂಬೈನಲ್ಲಿ ಹಣಕಾಸಿನ ಕೇಂದ್ರವನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.

ದಶಕಗಳ ನಂತರ ಮೊದಲ ಬಾರಿಗೆ ಫಿಲಿಫೈನ್ ಅಧ್ಯಕ್ಷ ಅರ್ರೊಯೊ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. 1997ರಲ್ಲಿ ಅಧ್ಯಕ್ಷ ಫಿಡೆಲ್ ರಾಮೊಸ್ ಅವರ ಭೇಟಿ ಕೊನೆಯದಾಗಿತ್ತು. ಉತ್ತಮ ವಿಲೀನತೆಗೆ ಭರವಸೆ ಮತ್ತು ಬಲವಾದ ಸಹಭಾಗಿತ್ವ ಭೇಟಿಯ ಉದ್ದೇಶವಾಗಿದೆ.

ಇದೇ ಕುರಿತಾಗಿ ಮಾತನಾಡಿದ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಅದ್ಯಯನ ಕೇಂದ್ರದ ಪ್ರಾಧ್ಯಾಪಕ ಮೊಹಿನಿ ಕೌಲ್, ಭಾರತವು ಮಲೇಶಿಯಾ ಮತ್ತು ಥೈಲ್ಯಾಂಡಿನೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಿದ್ದು. ಕಳೆದ ಒಂದು ದಶಕದಿಂದ ಫಿಲಿಪೈನ್‌ನೊಂದಿಗೆ ದ್ವಿಪಕ್ಷೀಯ ಸಂಬಂಧಗಳಲ್ಲಿ ಸುಧಾರಣೆಯಾಗಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಭಾರತಕ್ಕೆ ಫಿಲಿಫೈನ್ ಅಧ್ಯಕ್ಷ ಗ್ಲೊರಿಯಾ ಭೇಟಿ
ಮುಷರಫ್ ವಿರುದ್ಧ ಪ್ರತಿಭಟನೆ: ಸಚಿವರಿಗೆ ಥಳಿತ
ಇರಾನ್ ಮೇಲೆ ಒತ್ತಡ: ಸಮಯ ಕೇಳಿದ ರಷ್ಯಾ, ಚೀನಾ
ಮಯನ್ಮಾರ್: ಪ್ರತಿಭಟನಾಕಾರರ ಮೇಲೆ ಮತ್ತೆ ಪ್ರಹಾರ
ಮ್ಯಾನ್ಮಾರ್: ದಾಳಿ ನಿಲ್ಲಿಸಲು ಬುಷ್ ಕರೆ
ರಷ್ಯದಲ್ಲಿ ತೇಲುವ ಅಣು ವಿದ್ಯುತ್ ಸ್ಥಾವರ