ಇಲ್ಲಿನ ಕ್ಯಾಬೇಜ್‌ಟೌನ್‌ನಲ್ಲಿರುವ ವಿಂಚೆಸ್ಟರ್ ಪಬ್ಲಿಕ್ ಶಾಲೆಯ ಮಕ್ಕಳು ಹೊಸ ಹೀರೊ ಕಡೆ ನೋಟ ಹರಿಸಿದ್ದಾರೆ. ಆಶ್ಚರ್ಯಕರವೆಂದರೆ ಹೊಸ ಹೀರೊ ಹಾಲಿವುಡ್ ದಂತಕತೆಯಲ್ಲ ಅಥವಾ ಪಾಪ್ ಸ್ಟಾರ್ ಅಲ್ಲ.
ಆದರೆ ಶಾಂತಿ ದೂತ ಮಹಾತ್ಮ ಗಾಂಧಿ. ಅಂತಾರಾಷ್ಟ್ರೀಯ ಅಹಿಂಸಾ ದಿನಕ್ಕೆ ಹೊಂದಿಕೆಯಾಗುವಂತೆ ಕೆನಡಾ ಚಾರಿಟಿ ವಿಶ್ವ ಶಿಕ್ಷಣ ಸಂಸ್ಥೆ ಪೈಲಟ್ ಯೋಜನೆ ಮೂಲಕ ಶಾಲಾ ವಿದ್ಯಾರ್ಥಿಗಳಲ್ಲಿ ಮಹಾತ್ಮನ ಆದರ್ಶಗಳನ್ನು ಪ್ರಚಾರ ಮಾಡುತ್ತಿದೆ.
ಎಲ್ಲ ಪಾಪ್ ತಾರೆಯರು ಮನರಂಜನೆ ನೀಡುತ್ತಾರೆ. ಆದರೆ ಗಾಂಧಿಯಂತ ಮಹಾತ್ಮರು ಜಗತ್ತನ್ನೇ ಬದಲಿಸುತ್ತಾರೆ. ಗಾಂಧಿ ಮಹಾನ್ ಕಲ್ಪನೆಗಳನ್ನು ಹೊಂದಿದ್ದ ಬುದ್ಧಿವಂತ ವ್ಯಕ್ತಿಯಾಗಿದ್ದು, ಅವು ಇನ್ನೂ ಆಧುನಿಕ ಜಗತ್ತಿನಲ್ಲಿ ಕೆಲಸ ಮಾಡುತ್ತಿದೆ ಎಂದು 12 ವರ್ಷ ವಯಸ್ಸಿನ ಶಶ್‌ವಾತ್ ಕೊಯಿರಾಲಾ ಹೇಳುತ್ತಾನೆ."
ಗಾಂಧಿಯ ಜೀವನ ಮತ್ತು ಅವರ ಅಹಿಂಸೆ, ಕರುಣೆ ಮತ್ತು ಸತ್ಯದ ಬಗ್ಗೆ ಪ್ರಭಾವಶಾಲಿ ಬೋಧನೆಗಳನ್ನು ಕುರಿತು ವಿಂಚೆಸ್ಟರ್ ಶಾಲೆಯ ವಿದ್ಯಾರ್ಥಿಗಳು ಪ್ರಬಂಧಗಳನ್ನು ಬರೆದಿದ್ದಾರೆ.
ಮೋನಿಕಾ ಗುಡಿವಾಡ ಸದಾ ಜಗಳವಾಡುವ ಪ್ರವೃತ್ತಿ ಹೊಂದಿದ್ದಳು.ಆದರೆ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಗಾಂಧಿ ನನಗೆ ಸ್ಫೂರ್ತಿ ನೀಡಿದರು. ಕಣ್ಣಿಗೆ ಕಣ್ಣು ತೆಗೆದುಕೊಳ್ಳುವುದರಿಂದ ಇಡೀ ವಿಶ್ವವೇ ಕುರುಡಾಗುತ್ತದೆ ಎಂಬ ಗಾಂಧಿ ನುಡಿಯನ್ನು ಅವಳು ಉಲ್ಲೇಖಿಸಿದಳು.
|