ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಹತ್ಯೆಗೆ ಸಂಚು:ಡಯಾನಗೆ ಆವರಿಸಿದ ಭಯ
WD
ರಾಜಕುಮಾರಿ ಡಯಾನ ಮತ್ತು ಅವಳ ಸ್ನೇಹಿತ ದೋದಿ ಅಲ್ ಫಯಾದ್ ಸಾವಿನ ಕೊನೆಗಳಿಗೆಯ ಆಘಾತಕಾರಿ ಚಿತ್ರಗಳನ್ನು ಅವರ ಸಾವಿನ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರಿಗೆ ಬುಧವಾರ ತೋರಿಸಲಾಯಿತು.

ನ್ಯಾಯಮೂರ್ತಿ ಕೊರೋನರ್ ನ್ಯಾಯಮೂರ್ತಿ ಸ್ಕಾಟ್ ಬೇಕರ್ ಹಿಂದೆಂದೂ ನೋಡಿರದ ಈ ಚಿತ್ರಗಳನ್ನು ಅಧಿಕೃತ ವೆಬ್‌ಸೈಟ್‌ಗೆ ಹಾಕಿದ್ದು, ಡಯಾನ ಜೀವಂತವಿರುವ ಕೊನೆಯ ಚಿತ್ರ ಮತ್ತು ಆಕೆಯ ಜೀವವುಳಿಸಲು ಮಾಡಿದ ಹೋರಾಟದ ರೇಖಾ ದೃಶ್ಯಗಳನ್ನು ತೋರಿಸುತ್ತದೆ.

ಪ್ಯಾರಿಸ್‌ನ ಸುರಂಗದಲ್ಲಿ ಮರ್ಸಿಡಿಸ್ ಕಾರು ಅಪಘಾತಕ್ಕೆ ಕೆಲವೇ ನಿಮಿಷಗಳ ಮುನ್ನ ಮರ್ಸಿಡೀಸ್‌ನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ದಂಪತಿಯನ್ನು ಒಂದು ಚಿತ್ರ ತೋರಿಸುತ್ತದೆ. ಚಿತ್ರದಲ್ಲಿ ರಾಜಕುಮಾರಿ ಹಿಂಭಾಗದ ಕಿಟಕಿಯಿಂದ ನೋಡುವ ದೃಶ್ಯ ಕಾಣುತ್ತದೆ.

ರಾಜಕುಟುಂಬವು ಕಾರುಅಪಘಾತದ ಮೂಲಕ ತನ್ನನ್ನು ಹತ್ಯೆಮಾಡಲು ರಹಸ್ಯ ಸಂಚು ನಡೆಸಿದೆಯೆಂದು ದೀರ್ಘಕಾಲದಿಂದ ರಾಜಕುಮಾರಿಗೆ ಭಯಆವರಿಸಿದ ವಿಷಯ ತನಿಖೆಯಿಂದ ಬಹಿರಂಗಪಟ್ಟಿದೆ.

ಡಯಾನ ವಕೀಲ ಲಾರ್ಡ್ ಮಿಶ್ಚನ್ ಮತ್ತು ರಾಜಕುಮಾರಿ ತನ್ನ ಬಟ್ಲರ್‌ ಪಾಲ್ ಬರೆಲ್‌ಗೆ ಬರೆದಿರುವ ಎರಡು ಟಿಪ್ಪಣಿಗಳನ್ನು ವಿಚಾರಣೆಯಲ್ಲಿ ನೀಡಲಾಗಿದ್ದು, ಈ ಬಗ್ಗೆ ಕಳವಳ ವ್ಯಕ್ತವಾಗಿರುವುದು ಬೆಳಕಿಗೆ ಬಂದಿದೆ.

ರಾಜಕುಮಾರ ಚಾರ್ಲ್ಸ್‌ನಿಂದ ವಿಚ್ಛೇದನ ಪಡೆಯುವ ಒಂದು ವರ್ಷದ ಮುಂಚೆ ಡಯಾನ ಕೆನ್ಸಿಂಗ್‌ಟನ್ ಅರಮನೆಯಲ್ಲಿ ಲಾರ್ಡ್ ಮಿಶ್ಚನ್ ಅವರನ್ನು ಭೇಟಿ ಮಾಡಿ ತನ್ನನ್ನು ಇಲ್ಲವಾಗಿಸಲು ರಾಜಕುಟುಂಬ ಸಂಚು ನಡೆಸಿದ ವಿಷಯವನ್ನು ನಂಬಿಕಾರ್ಹ ಮೂಲಗಳು ತಿಳಿಸಿದೆಯೆಂದು ಹೇಳಿದ್ದಳು.

ಡಯಾನ ಪಾಲ್ ಬರೆಲ್‌ಗೆ ಬರೆದಿರುವ ಟಿಪ್ಪಣಿಯನ್ನು ನ್ಯಾಯಾಧೀಶರಿಗೆ ತೋರಿಸಲಾಯಿತು. ಕಾರಿನ ಬ್ರೇಕ್ ವೈಫಲ್ಯದ ಮೂಲಕ ಅಪಘಾತ ಮಾಡಿಸಿ ಟಿಗ್ಗಿಯ ಜತೆ ವಿವಾಹಕ್ಕೆ ದಾರಿ ಸುಗಮಗೊಳಿಸಲು ತಮ್ಮ ಪತಿ ಸಂಚು ನಡೆಸಿದ್ದಾರೆಂದು ಆ ಟಿಪ್ಪಣಿಯಲ್ಲಿ ಡಯಾನ ಬರೆದಿದ್ದಳು.
ಮತ್ತಷ್ಟು
ಪರಮಾಣು ಒಪ್ಪಂದ:ಬರ್ನ್ಸ್ ಆಶಯ
ಕೆನಡಾ ಯೋಜನೆ:ಗಾಂಧಿಯ ಸಮೀಪ ಮಕ್ಕಳು
ಕಿಯಾನಿ ಪಾಕ್ ಸೇನಾ ಮುಖ್ಯಸ್ಥ
ಸೋನಿಯಾ ಗಾಂಧಿ ಭಾಷಣ
ಫಿಲಿಫೈನ್ಸ್ ಅಧ್ಯಕ್ಷ ಗ್ಲೊರಿಯಾ ಭಾರತ ಪ್ರವಾಸ
ಭಾರತಕ್ಕೆ ಫಿಲಿಫೈನ್ ಅಧ್ಯಕ್ಷ ಗ್ಲೊರಿಯಾ ಭೇಟಿ