ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಜಿಹಾದ್ ನೆಪದಲ್ಲಿ ಅಪರಾಧಕ್ಕೆ ಪ್ರಚೋದನೆ: ಉಲೇಮಾ
ಜಿಹಾದ್ ರೂಪದಲ್ಲಿ ಅಪರಾಧ ಎಸಗುವಂತೆ ಸೌದಿ ಯುವಕರನ್ನು ವಿದೇಶೀ ಗುಂಪುಗಳು ಶೋಷಿಸಿ ದಾರಿ ತಪ್ಪಿಸುತ್ತವೆ ಎಂದು ಹಿರಿಯ ಉಲೇಮಾ ಮಂಡಳಿ ಮತ್ತು ಇಸ್ಲಾಮಿಕ್ ಸಂಶೋಧನಾ ಆಡಳಿತದ ಅಧ್ಯಕ್ಷ ಶೇಖ್ ಅಬ್ದುಲ್ ಅಜೀಜ್ ಬಿನ್ ಮಹಮ್ಮದ್ ಅಲ್ ಶೇಖ್ ತಿಳಿಸಿದ್ದಾರೆ.

ವಿನಾಶಕಾರಕ ಉದ್ದೇಶದೊಂದಿಗೆ, ಘೋರಕೃತ್ಯ ನಡೆಸಲು, ಜಿಹಾದ್ ಹೆಸರಲ್ಲಿ ವಿದೇಶಿ ಶಂಕಿತ ಗುಂಪುಗಳಿಂದ ಸೌದಿ ಯುವಕರು ಶೋಷಣೆಗೊಳಗಾಗುತ್ತಿದ್ದಾರೆ ಎಂದು ಅವರು ಸೂಚಿಸಿದರು.

ಸೌದಿ ಯುವಕರು ಜಿಹಾದ್‌ಗಾಗಿ ವಿದೇಶಕ್ಕೆ ಪ್ರಯಾಣ ಮಾಡುವುದರ ವಿರುದ್ಧ ಹಿರಿಯ ಮುಫ್ತಿಯೂ ಆಗಿರುವ ಶೇಖ್ ಅಬ್ದುಲ್ ಅಜೀಜ್, ಸೌದಿ ಪ್ರೆಸ್ ಏಜೆನ್ಸಿ(ಎಸ್‌ಪಿಎ)ಗೆ ನೀಡಿದ ಹೇಳಿಕೆಯೊಂದರಲ್ಲಿ ಎಚ್ಚರಿಕೆ ನೀಡಿದ್ದಾರೆ.

ತಪ್ಪು ಮತ್ತು ಸರಿ ನಡುವೆ ವ್ಯತ್ಯಾಸ ಅರಿಯುವಲ್ಲಿ ಸಾಕಷ್ಟು ಜ್ಞಾನ ಮತ್ತು ಸರಿಯಾದ ಸಲಹೆಯ ಕೊರತೆಯಿಂದಾಗಿ ಯುವಕರು ದಾರಿ ತಪ್ಪುತ್ತಿದ್ದಾರೆ ಎಂದು ಅವರು ಹೇಳಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ.

ವಿನಾಶಕಾರಿ ಕೃತ್ಯಗಳಲ್ಲಿ ಭಾಗಿಯಾಗುವುದು "ರಾಜ್ಯ ನಾಯಕತ್ವ ಮತ್ತು ಉಲೇಮಾ"ದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದು ಇಡೀ ದೇಶವನ್ನು ಹಾಳುಮಾಡುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮತ್ತಷ್ಟು
ಮಾತುಕತೆ ಸಂಪೂರ್ಣ ಸ್ಥಗಿತ: ಭುಟ್ಟೊ
ಹತ್ಯೆಗೆ ಸಂಚು:ಡಯಾನಗೆ ಆವರಿಸಿದ ಭಯ
ಪರಮಾಣು ಒಪ್ಪಂದ:ಬರ್ನ್ಸ್ ಆಶಯ
ಕೆನಡಾ ಯೋಜನೆ:ಗಾಂಧಿಯ ಸಮೀಪ ಮಕ್ಕಳು
ಕಿಯಾನಿ ಪಾಕ್ ಸೇನಾ ಮುಖ್ಯಸ್ಥ
ಸೋನಿಯಾ ಗಾಂಧಿ ಭಾಷಣ