ವಿಧ್ವಂಸಕ ಕೃತ್ಯ ಪೀಡಿತ ಅಫಘಾನಿಸ್ತಾನದಲ್ಲಿ ಬಾಪೂವಿನ 138ನೇ ಹುಟ್ಟುಹಬ್ಬದಂದು ಮೊದಲ ಬಾರಿಗೆ ಗಾಂಧೀಜಿಯ ಶಾಂತಿ ಮತ್ತು ಅಹಿಂಸೆಯ ಮೌಲ್ಯಗಳು ಪ್ರತಿಧ್ವನಿಸಿದವು.
ಪ್ರಸಿದ್ಧ ಹಬೀಬಿಯಾ ಹೈಸ್ಕೂಲಿನ ವಿದ್ಯಾರ್ಥಿಗಳು ಮಹಾತ್ಮಾ ಗಾಂಧಿಯ ಪ್ರೀತಿಯ ಭಜನ್‌ಗಳಾದ "ರಘುಪತಿ ರಾಘವ ರಾಜಾರಾಮ್" ಮತ್ತು "ವೈಷ್ಣವ ಜನತೋ" ಹಾಡುಗಳನ್ನು ಹಾಡಿದರು. ಮತ್ತು ಗಾಂಧೀಜಿಯವರ ಕುರಿತಾಗಿ ತಾವು ಬರೆದ ಪ್ರಬಂಧಗಳನ್ನು ಓದಿದರು.
ಜಗತ್ತಿನಾದ್ಯಂತ ಸ್ವಾತಂತ್ರ್ಯ ಹೋರಾಟಗಾರರನ್ನು ಮರುಳುಗೊಳಿಸಿದ ಗಾಂಧೀಜಿಯವರ ಅಹಿಂಸೆಯ ಸಂದೇಶಗಳ ಕುರಿತು ಅಧ್ಯಕ್ಷ ಹಮೀದ್ ಕರ್ಜಾಯ್ ಅವರು ನೀಡಿದ ಸಂದೇಶವನ್ನೂ ಓದಲಾಯಿತು.
ಮಹಾತ್ಮಾ ಗಾಂಧಿಯವರ ಅಹಿಂಸಾ ಹೋರಾಟವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಾಗವಹಿಸಲು ಲಕ್ಷಾಂತರ ಜನರನ್ನು ಹುರಿದುಂಬಿಸಿದ್ದು, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಮುಂತಾದ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿದೆ ಎಂದು ಭಾರತೀಯ ರಾಯಭಾರಿ ರಾಕೇಶ್ ಸೂಡ್ ತಿಳಿಸಿದರು.
ಮಹಾತ್ಮಾ ಗಾಂಧೀಜಿಯವರ ಛಾಯಾಚಿತ್ರ ಪ್ರದರ್ಶನವನ್ನು ಕೂಡಾ ಉದ್ಘಾಟಿಸಲಾಯಿತು.
|